ಶಿರಸಿ: ಕರ್ನಾಟಕದ ತಿರುಪತಿ ಎಂದೇ ಹೆಸರಾದ ತಾಲೂಕಿನ ಮಂಜುಗುಣಿಯ ಶ್ರೀ ವೆಂಕಟರಮಣ ದೇವರ ಸನ್ನಿದಾನದಲ್ಲಿ ವಂದೇ ಪರಮಾನಂದಮ್ ಎಂಬ ಯಕ್ಷ ನೃತ್ಯ ರೂಪಕದ ಮನೆ ಮನೆಗೂ ಮಾಧವ ಎಂಬ ವಿನೂತನ ನೃತ್ಯ ಪಯಣಕ್ಕೆ ಮಾ.23ರ ಸಂಜೆ 6:30ಕ್ಕೆ ಚಾಲನೆ ಸಿಗಲಿದೆ.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೋ. ಎಂ.ಎ.ಹೆಗಡೆ ದಂಟ್ಕಲ್ ಸಾಹಿತ್ಯ ನಿರ್ದೇಶನದದಲ್ಲಿ ಕು. ತುಳಸಿ ಹೆಗಡೆ ಮುಮ್ಮೇಳದ ವಿಶ್ವಶಾಂತಿ ಸರಣಿಯ ಮಾಧವನ ಪರಮಾನಂದದ ಕಥಾ ಸುರುಳಿಯ ಒಂದುಕಾಲು ಗಂಟೆಯ ಈ ನೃತ್ಯ ರೂಪಕ ಅಭಿಯಾನಕ್ಕೆ
ಜೀವ ಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಚಾಲನೆ ನೀಡಲಿದ್ದಾರೆ.
ಅತಿಥಿಗಳಾಗಿ ವಿ.ಉಮಾಕಾಂತ ಭಟ್ಟ ಕೆರೇಕೈ, ಮಂಜುಗುಣಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ಭಟ್ಟ ಮಂಜುಗುಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಪಾಲ್ಗೊಳ್ಳಲಿದ್ದಾರೆ.
ರೂಪಕದ ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆ ಮಾಂತ್ರಿಕ ಶಂಕರ ಭಾಗವತ್ ಶಿಸ್ತುಮುಡಿ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸಾದನದಲ್ಲಿ ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ವಿಶ್ವಶಾಂತಿ ಸೇವಾ ಟ್ರಸ್ಟ ಕರ್ನಾಟಕ ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಂಜುಗುಣಿ ದೇವಸ್ಥಾನ ಸಹಕಾರ ನೀಡಿದೆ ಎಂದು ಟ್ರಸ್ಟನ ಅಧ್ಯಕ್ಷೆ ಭುವನೇಶ್ವರಿ ಹೆಗಡೆ, ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ, ಉಪಾಧ್ಯಕ್ಷ ರಮೇಶ ಹಳೆಕಾನಗೋಡ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.