ಹೊನ್ನಾವರ: ಡಾ.ರಾಜಶೇಖರ್ ಮಠಪತಿ ಇವರ ಕಾದಂಬರಿ “ದಂಡಿ”ಕರ್ನಾಟಕ ಬಾರ್ಡೋಲಿ ಎಂದು ಕರೆಸಿಕೊಂಡ ಉತ್ತರಕನ್ನಡ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟದ ಕಥೆಯನ್ನು ಸಾರುವ ‘ದಂಡಿ’ ಚಲನಚಿತ್ರದ ಮೂಹೂರ್ತ ಪಟ್ಟಣದ ಪ್ರಭಾತನಗರದ ಮೂಡಗಣಪತಿ ದೇವಸ್ಥಾನದಲ್ಲಿ ನಡೆಯಿತು.
ಚಿತ್ರಿಕ್ರರಣ ಪ್ರಾರಂಭಕ್ಕು ಮೊದಲು ಚಿತ್ರತಂಡದಿದ ಶ್ರೀ ಮೂಡಗಣಪತಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ‘ದಂಡಿ’ ಸಿನಿಮಾದ ನಟ ಯುವಾನ್ ದೇವ್, ನಟಿ ಶಾಲಿನಿ ಭಟ್, ನಟಿ ತಾರ, ನಟ ಸುಚೇಂದ್ರ ಪ್ರಸಾದ್ , ನಿರ್ದೇಶಕ ವಿಶಾಲ್ ರಾಜ್ ,ನಿರ್ಮಾಪಕಿ ಉಷಾರಾಣಿ ಮತ್ತು ಸ್ಥಳಿಯರಾದ ದಾಮೋದರ್ ನಾಯ್ಕ ಸೇರಿದಂತೆ ಚಿತ್ರತಂಡ ಶ್ರೀ ಮೂಡಗಣಪತಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಜಾನಪದ ಕೋಗಿಲೆ ಪದ್ಮಶ್ರೀ ಪುರಸ್ಕ್ರತ ಸುಕ್ರಜ್ಜಿ ಅವರ ತಂಡದ ಜಾನಪದ ಗೀತೆ,ಗುಮಟೆ ಪಾಂಗ್ ,ಯಕ್ಷ ಪಾತ್ರಧಾರಿಗಳು ಆಕರ್ಷಣಿಯವಾಗಿತ್ತು. ಚಿತ್ರಿಕರಣಕ್ಕೆ ಪದ್ಮಶ್ರೀ ಪುರಸ್ಕ್ರತ ಸುಕ್ರಜ್ಜಿ ಅವರಿಂದ ಚಾಲನೇ ದೊರೆಯಿತು. ‘ದಂಡಿ’ ಸತ್ಯಾಗ್ರಹದಲ್ಲಿ ಪ್ರಮುಖವಾಗಿ ಕಂಡು ಬಂದಿದ್ದ ಉಪ್ಪು ತಯಾರಿಕೆಯನ್ನು ಚಿತ್ರ ತಂಡ ಆಯ್ಕೆ ಮಾಡಿಕೊಂಡು ಅದೇ ರೀತಿಯಲ್ಲಿ ಮಡಕೆಯಲ್ಲಿ ಉಪ್ಪು ಬೇಯಿಸುವ ದ್ರಶ್ಯಕ್ಕೆ ಖ್ಯಾತ ಸಾಹಿತಿ ಅಂಕೋಲಾ ಮೂಲದ ಎನ್ ಆರ್ ನಾಯಕ ಅವರಿಂದ ಚಾಲನೇ ದೊರೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಟ ಸುಚೇಂದ್ರ ಪ್ರಸಾದ ಮಾತನಾಡಿ,ಇದು ಅತ್ಯಂತ ಪರಣಾಮಕಾರಿಯಾದ ಚಿತ್ರ.ದಂಡಿ ಚಿತ್ರದ ಮೂಲಕ ಸತ್ಯಾಗ್ರಹದ ದಿನಗಳು ಸತ್ಯ ಅನುಷ್ಟಾನದ ಕಾಲಘಟ್ಟದಲ್ಲಿದ್ದೇವೆ ಎಂದರು.
ನಟಿ ತಾರ ಮಾತನಾಡಿ,ಚಿತ್ರದಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ಸಾಕಿ,ಸಲಹುವ ಪಾತ್ರ ನನ್ನದಾಗಿದೆ. ಉತ್ತಮ ತಂಡದೊದಿಗೆ ಕೆಲಸ ಮಾಡುತ್ತಿದ್ದೇನೆ.ದಂಡಿ ಚಿತ್ರತಂಡ ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಮರುಜನ್ಮ ಕೊಡಲಿದೆ.ಹೊಸ ಇತಿಹಾಸ ನಿರ್ಮಿಸುವ ಚಿತ್ರಗಳ ಸಾಲಿಗೆ ಸೇರಲಿದೆ ಎನ್ನುವ ಭರವಸೆ ಇದೆ ಎಂದರು.
ಖ್ಯಾತ ಸಾಹಿತಿ ಎನ್ ಆರ್ ನಾಯಕ ಮಾತನಾಡಿ, ಕರ್ನಾಟಕದ ಬಾರ್ಡೊಲಿ ಅಂಕೋಲಾ ದಂತಹ ಸತ್ಯಾಗ್ರಹ ನಡೆಸಿದ ಊರಿನಿಂದ ಬಂದಂತಹ ವ್ಯಕ್ತಿ ನಾನು ಎಂದಿಕೊಳ್ಳಲು ಹೆಮ್ಮೆ ಎನಿಸುತ್ತದೆ.ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಜಿಲ್ಲೆಅಪಾರ ಕೊಡುಗೆ ನೀಡಿದೆ.ಮಹಾತ್ಮ ಗಾಂಧೀಜಿಯವರಿಗೆ ರಾಷ್ಟ್ರೀಯ ನಾಯಕತ್ವ ತಂದುಕೊಟ್ಟಿರುವುದು ಉಪ್ಪಿನ ಸತ್ಯಾಗ್ರಹ ಚಳುವಳಿ ಎಂದರು.
ಚಿತ್ರದ ನಿರ್ದೇಶಕ ವಿಶಾಲ್ ರಾಜ್ ಮಾತನಾಡಿ ದಂಡಿ ಕಾದಂಬರಿ ಒದುವಾಗ ಪ್ರತಿಯೊರ್ವರಲ್ಲಿ ಸ್ವತಂತ್ರ ಹೋರಾಟದ ಕಿಚ್ಚು ಹಚ್ಚಿಸಿದ ಅನುಭವ ಬಂತು. ಈ ಭಾಗದವರು ಹಿಂಸಾಮಾರ್ಗಕ್ಕಿಳಿಯದೇ ಅಹಿಂಸಾಮಾರ್ಗದ ಹೋರಾಟವನ್ನು ಪರದೆ ಮೇಲೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯ ಶೇಕಡಾ ೯೦% ರಷ್ಟು ಕಲಾವಿದರನ್ನು ಬಳಸಿಕೊಂಡು ಚಿತ್ರಿಕರಣ ಮುಗಿಸುವ ಯೋಜನೆಯಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಹಿರಿಯ ಪತ್ರಕರ್ತ ಜಿ.ಯು ಭಟ್, ಕೃಷ್ಣಮೂರ್ತಿ ಹೆಬ್ಬಾರ್ ,ದಂಡಿ ಸಿನಿಮಾದ ಕಾದಂಬಕಾರಿಕಾರ ಡಾ.ರಾಜಶೇಖರ್ ಮಠಪತಿ,ನಟ ಯುವಾನ್ ದೇವ್, ನಟಿ ಶಾಲಿನಿ ಭಟ್, ನಟಿ ತಾರ, ನಟ ಸುಚೇಂದ್ರ ಪ್ರಸಾದ್ , ನಿರ್ದೇಶಕ ವಿಶಾಲ್ ರಾಜ್ ,ನಿರ್ಮಾಪಕಿ ಉಷಾರಾಣಿ ಮತ್ತು ಸ್ಥಳಿಯರಾದ ನಟ ದಾಮೋದರ್ ನಾಯ್ಕ, ನಿವೃತ್ತ ಉಪನ್ಯಾಸಕ ಎಸ್.ಡಿ ಹೆಗಡೆ, ಸಾಹಿತಿ ಶ್ರೀಪಾದ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ತದನಂತರ ಚಿತ್ರದ ಚಿತ್ರಿಕರಣಕ್ಕೆ ಚಾಲನೇ ದೊರೆಯಿತು. ಮೂಡಗಣಪತಿ ದಣೆವಾಲಯದೆದುರಿಗೆ ಪದ್ಮಶ್ರೀ ಪುರಸ್ಕ್ರತ ಸುಕ್ರಜ್ಜಿ ಅವರ ತಂಡದ ಪ್ರಥಮ ಚಿತ್ರಿಕರಣ ನಡೆಯಿತು. ಸ್ವಾತಂತ್ರ‍್ಯ ಸಂಗ್ರಾಮದ ಪೂರ್ವದ ಸಂದರ್ಭದಲ್ಲಿನ ಕಥಾವಸ್ತುವಿನ ದ್ರಶ್ಯಾವಳಿ ಸೆರೆಹಿಡಿದರು.