ಶ್ರೀ ಅಖಿಲ ಹವ್ಯಕ ಮಹಾಸಭಾ ಸಂಯೋಜನೆಯಲ್ಲಿ ಹವ್ಯಕ ಸಂಘ, ಯಲ್ಲಾಪುರ ಇವರ ಸಹಕಾರದೊಂದಿಗೆ ಮಾರ್ಚ್ 21 ರಂದು ಯಲ್ಲಾಪುರದ ಶ್ರೀ ಶಕ್ತಿಗಣಪತಿ ದೇವಸ್ಥಾನದಲ್ಲಿ ಗಾಯತ್ರೀ ಮಹೋತ್ಸವ ಹಾಗೂ ಹವ್ಯಕ ವೈವಾಹಿಕ ಸಮಾವೇಶ ನಡೆಯಲಿದೆ.

ಶ್ರೀ ಸ್ವರ್ಣವಲ್ಲಿ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಲಿದ್ದು, ಪಾದಪೂಜೆ ಆಶೀರ್ವಚನ ನಡೆಯಲಿದೆ. ಬೆಳಗ್ಗೆ 9.30 ಗೆ ಹವ್ಯಕ ವಧೂವರರ ವೈವಾಹಿಕ ಸಮಾವೇಶಕ್ಕೆ ಚಾಲನೆ ಸಿಗಲಿದ್ದು, ಭಗವದ್ಗೀತೆ ಹಾಗೂ ರಂಗೋಲಿ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಹವ್ಯಕರ ವಿವಾಹ ವಿಷಯದ ಕುರಿತು ವಿದ್ವಾನ್ ಅನಂತ ಭಟ್ ಸಿದ್ರಪಾಲ್ ಹಾಗೂ ಮೋಹನ ಹೆಗಡೆ ಹೆರವಟ್ಟಾ ಹಾಗೂ ಗಾಯತ್ರೀ ಮಹಿಮೆ ಕುರಿತಾಗಿ ವಿದ್ವಾನ್ ವಾಸುದೇವ ಭಟ್ ಉಪಾನ್ಯಾಸ ನೀಡಲಿದ್ದಾರೆ. ಗಾಯತ್ರೀ ಹವನ ಸೇರಿದಂತೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾಗಲಿದೆ.

ಸಂಜೆ ಸಭಾಕಾರ್ಯಕ್ರಮ ಮತ್ತು ಯಲ್ಲಾಪುರ ತಾಲೂಕಾ ಸಾಧಕರಿಗೆ ಸಮ್ಮಾನ ನಡೆಯಲಿದ್ದು, “ಹವ್ಯಕ ಮಾಂಗಲ್ಯ” ಮೊಬೈಲ್ ಆ್ಯಪ್ ಅನ್ನು ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಲೋಕಾರ್ಪಣೆ ಮಾಡಲಿದ್ದಾರೆ. ಶ್ರೀ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಪ್ರಮೋದ ಹೆಗಡೆ, ಉಪಾಧ್ಯಕ್ಷರು, ಗ್ರಾಮೀಣಾಭಿವೃದ್ಧಿ ವಿಕೇಂದ್ರಿಕರಣ, ಶ್ರೀ ಡಿ. ಶಂಕರ ಭಟ್, ಅಧ್ಯಕ್ಷರು, ಹವ್ಯಕ ಸಂಘ ಯಲ್ಲಾಪುರ, ಶ್ರೀಮತಿ ಚಂದ್ರಕಲಾ ಭಟ್ಟ, ಅಧ್ಯಕ್ಷರು, ಯಲ್ಲಾಪುರ ತಾಲೂಕು ಪಂಚಾಯತ್ , ಶ್ರೀಮತಿ ಶೃತಿ ಹೆಗಡೆ, ಸದಸ್ಯರು, ಉತ್ತರಕನ್ನಡ ಜಿಲ್ಲಾ ಪರಿಷತ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.

RELATED ARTICLES  ಶ್ರೀಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಂಜೆ ವಿದುಷಿ ವಿನುತಾ ರಾಘವೇಂದ್ರ ಹೆಗಡೆ ಅವರಿಂದ ಭರತನಾಟ್ಯ ಕಾರ್ಯಕ್ರಮವಿದ್ದು, ಅನಂತರದಲ್ಲಿ “ಗಾಯತ್ರೀ ಮಹಿಮೆ” ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಅನಂತ ಹೆಗಡೆ, ದಂತಳಿಗೆ, ಮೃದಂಗದಲ್ಲಿ ಶ್ರೀ ನರಸಿಂಹ ಭಟ್, ಹಂಡ್ರಮನೆ ಹಾಗೂ ಮುಮ್ಮೇಳದಲ್ಲಿ ಡಾ| ಜಿ. ಎಲ್. ಹೆಗಡೆ, ಕುಮಟಾ, ಶ್ರೀ ಮೋಹನ್ ಭಾಸ್ಕರ ಹೆಗಡೆ, ಹೆರವಟ್ಟಾ, ಶ್ರೀ ಎಂ. ಎನ್. ಹೆಗಡೆ, ಹಳವಳ್ಳಿ ಇರಲಿದ್ದಾರೆ.

ಯಲ್ಲಾಪುರ ತಾಲ್ಲೂಕು ಸಾಧಕರಿಗೆ ಸನ್ಮಾನದ ವಿವರ :

ವೈದಿಕ ಕ್ಷೇತ್ರ

ವಿದ್ವಾನ್| ತಿಮ್ಮಣ್ಣ ಭಟ್, ಬಾಲಿಗದ್ದೆ
ವೇ|ಮೂ|| ನಾಗೇಂದ್ರ ಭಟ್, ಭರಣಿ
ವೇ|ಮೂ|| ರಾಮಕೃಷ್ಣ ಭಟ್, ಕೆಳಗಿನಪಾಲು
ವೇ|ಮೂ|| ಗಣಪತಿ ಭಟ್, ಮಾಗೋಡು

ಕೃಷಿ ಕ್ಷೇತ್ರ

ಶ್ರೀ ಗಿರೀಶ್ ಎಸ್ ಭಟ್, ಯಲ್ಲಾಪುರ
ಶ್ರೀ ರವಿ ಭಟ್, ಕಾನಗೋಡು

ರಾಜಕೀಯ ಕ್ಷೇತ್ರ

ಶ್ರೀ ಶಿವರಾಮ ಹೆಬ್ಬಾರ್, ಅರಬೈಲ್
ಶ್ರೀ ಪ್ರಮೊದ ಹೆಗಡೆ, ಸಂಕಲ್ಪ

ಪತ್ರಿಕೋದ್ಯಮ ಕ್ಷೇತ್ರ

ಶ್ರೀ ತಿಮ್ಮಪ್ಪ ಭಟ್, ದುಂಡಿ
ಶ್ರೀ ಹರಿಪ್ರಕಾಶ್ ಕೋಣೆಮನೆ

ಆರ್ಥಿಕ ಕ್ಷೇತ್ರ

ಸಿಎ. ಎಸ್.ಜಿ. ಹೆಗಡೆ, ಬೆದೆಹಕ್ಲು
ಸಿಎ. ವಿಘ್ನೇಶ್ವರ ಗಾಂವ್ಕರ
ಶ್ರೀ ಜಿ.ಎಸ್. ಹೆಗಡೆ, ಹಸಲಮನೆ

ನ್ಯಾಯಾಂಗ ಕ್ಷೇತ್ರ

ಶ್ರೀ ಮಂಜುನಾಥ ಎನ್ ಭಟ್, ಯಲ್ಲಾಪುರ
ಶ್ರೀ ಜಿ. ವಿ. ಭಟ್, ಮಂಚಿಕೇರಿ

ಕಾನೂನು ಕ್ಷೇತ್ರ

ಶ್ರೀ ವಿ.ಪಿ. ಭಟ್ ಕಣ್ಣೀ
ಶ್ರೀ ಜಿ.ಎಸ್. ಭಟ್, ಹಳವಳ್ಳಿ

RELATED ARTICLES  ದೇವಳಮಕ್ಕಿಯಲ್ಲಿ 11, 12ರಂದು ವಾಲಿಬಾಲ್ ಪಂದ್ಯಾವಳಿ

ವೈದ್ಯಕೀಯ ಕ್ಷೇತ್ರ
ಡಾ. ಜಿ.ಪಿ. ಭಟ್, ಕಣ್ಣೀ

ಶೈಕ್ಷಣಿಕ ಕ್ಷೇತ್ರ

ಶ್ರೀ ಸತೀಶ ಹೆಗಡೆ, ಯಲ್ಲಾಪುರ
ಸಹಕಾರ ಕ್ಷೇತ್ರ
ಶ್ರೀ ಆರ್.ಎನ್. ಹೆಗಡೆ, ಗೋರ್ಸಗದ್ದೆ
ಶ್ರೀ ಎನ್.ಕೆ. ಭಟ್, ಅಗ್ಗಾಶಿಕುಂಬ್ರಿ
ಶ್ರೀ ಎಂ.ಜಿ. ಭಟ್, ಸಂಕದಗುಂಡಿ

ಸಾಮಾಜಿಕ ಕ್ಷೇತ್ರ

ಶ್ರೀ ಎನ್.ಎಸ್. ಹೆಗಡೆ, ಕುಂದರಗಿ
ಶ್ರೀ ಬಿ.ಜಿ. ಹೆಗಡೆ, ಗೇರಾಳÀ

ಸಾಹಿತ್ಯ ಕ್ಷೇತ್ರ
ಶ್ರೀ ಅನಂತ ವೈದ್ಯ, ಯಲ್ಲಾಪುರ

ಹಿರಿಯ ನಾಗರಿಕರು
ಶ್ರೀ ನಾಗೇಶ್ ಭಾಗ್ವತ್, ಯಲ್ಲಾಪುರ
ಶ್ರೀ ಅಣ್ಣಯ್ಯ ಭಟ್, ಗುಡೆಪಾಲ್

ಉದ್ಯಮ ಕ್ಷೇತ್ರ
ಶ್ರೀ ಶ್ರೀನಿವಾಸ ಭಟ್, ಧಾತ್ರಿ ಡೆವಲಪರ್ಸ್
ಶ್ರೀ ಸುಬ್ಬಣ್ಣ ಬಗನಗದ್ದೆ

ಯಕ್ಷಗಾನ ಕ್ಷೇತ್ರ
ಶ್ರೀ ಎಂ.ಎನ್. ಹೆಗಡೆ, ಹಳವಳ್ಳಿ

ಚಲನಚಿತ್ರ ಕ್ಷೇತ್ರ
ಶ್ರೀ ಉದಯರವಿ ಹೆಗಡೆ, ಆನಗೋಡು

ಮಹಿಳಾ ಕ್ಷೇತ್ರ
ಶ್ರೀಮತಿ ಕಮಲಾ ಜಿ ಹೆಗಡೆ, ಸಂಗಮ್ ಟ್ರೇಡರ್ಸ್
ಶ್ರೀಮತಿ ರಾಧಾ ಹೆಗಡೆ, ಬೆಳಗುಂದ್ಲಿ

ವಿದ್ಯಾ ಕ್ಷೇತ್ರ

ಕು. ವೆಂಕಟರಮಣ ನಾಗೇಶ್, ಕವಡಿಕೆರೆ
ಕು. ಪೂರ್ವಿ ಹೆಗಡೆ, ಕೊಂಡದಕುಳಿ
ಕು. ದಿವ್ಯಶ್ರೀ ಹೆಗಡೆ

ಕಾರ್ಯಕ್ರಮದ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ವಿದ್ವಾನ್ ಗೋಪಾಲಕೃಷ್ಣ ಭಟ್ ಹಂಡ್ರಮನೆ ನಿರ್ದೇಶಕರು, ಅ.ಹ.ಮ( 94487 62529 ) ಸಿಎ. ವೇಣುವಿಘ್ನೇಶ ಸಿ.ಪ್ರಧಾನ ಕಾರ್ಯದರ್ಶಿಗಳು
( 080-23348193 ) ಹಾಗೂ ಪ್ರಶಾಂತ ಪಿ ಹೆಗಡೆ, ಸಂಕಲ್ಪ ನಿರ್ದೇಶಕರು ಅ.ಹ.ಮ ( 94484 35098) ಅವರನ್ನು ಸಂಪರ್ಕಿಸಬಹುದಾಗಿದೆ.