ಕುಮಟಾ: ಇಲ್ಲಿಯ ಲೋಕೋಪಯೋಗಿ ಇಲಾಖೆಯ ಹಿರಿಯ ಎಂಜಿನಿಯರ್ ರಾಮದಾಸ ಗುನಗಿ ಅವರಿಗೆ ಬೆಂಗಳೂರಿನ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಭಾ ಪುರಸ್ಕಾರ ಪ್ರತಿಷ್ಠಾನ ಟ್ರಸ್ಟ್ಟ ನ ಕರ್ನಾಟಕ ‘ತಾಂತ್ರಿಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೇಶ ಕಟ್ಟುವ ಪ್ರಯತ್ನದಲ್ಲಿ ಸಿವಿಲ್ ಎಂಜಿನಿಯರರ ಪಾತ್ರ ಬಹಳ ಮುಖ್ಯವಾಗಿದ್ದು, ನಿಷ್ಠೆ ಮತ್ತು ಪ್ರಾಮಾಣ ಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಸದೃಢವಾದ ರಾಷ್ಟ್ರವನ್ನು ನಿರ್ಮಾಣ ಮಾಡಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಆರ್.ವೆಂಕಟೇಶ ಅಭಿಪ್ರಾಯಪಟ್ಟರು. ಕೊರೊನಾ ಕಾರಣದಿಂದಾಗಿ ಪ್ರತಿಷ್ಠಾನವು ಸರ್ಕಾರದ ಅನುಮೋದನೆ ಮೇರೆಗೆ ಕುಮಟಾ ಲೋಕೋಪಯೋಗಿ ಕಛೇರಿಗೇ ಆಗಮಿಸಿ ಪ್ರಶಸ್ತಿ ವಿತರಿಸಿದ್ದು ವಿಶೇಷವಾಗಿತ್ತು. ಕ್ರಿಯಾಶೀಲ, ದಕ್ಷ, ಸೌಜನ್ಯದ ಮೂರ್ತಿಯಂತಿರುವ ರಾಮದಾಸ ಗುನಗಿಯವರಿಗೆ ಶಾಸಕರು, ಜನಪ್ರತಿನಿಧಿಗಳು, ರೋಟರಿ ಪರಿವಾರದವರು, ಕಾರ್ಯಾಲಯದ ಸಿಬ್ಬಂದಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.