ಕುಮಟಾ : ಮೂಲತಃ ಕುಮಟಾ ತಾಲೂಕಿನ ಹೆಗಡೆಯವಳಾದ ಸಿಂಚನಾ ಭಟ್ಟ ಇವಳು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಧಾರವಾಡ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದಿದ್ದಾಳೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಆಯೋಜಿದ ಮಕ್ಕಳ ಸಾಹಿತ್ಯ ಸಂಭ್ರಮ ಫೇಸ್ ಬುಕ್ ಲೈವ್ ಕಾರ್ಯಕ್ರಮಗಳಲ್ಲಿ ಜನಪದ ಗೀತೆ,ಭಾವಗೀತೆ ಮತ್ತು ಮಕ್ಕಳ ಕಥೆ ಹೇಳುವರ ಮೂಲಕ ಅಭಿನಂದನಾ ಪತ್ರ ಪಡೆದುಕೊಂಡಿರುತ್ತಾಳೆ.
ಬಾಲ ಪ್ರತಿಭೆ ಸಿಂಚನಾ ಭಟ್ ಬೆಂಗಳೂರು. ಇವಳು ಶೀ ಕುಮಾರನ್ಸ್ ಶಾಲೆಯಲ್ಲಿ 2ನೇ ತರಗತಿ ಕಲಿಯುತಿದ್ದಾಳೆ. ಈ ವಯಸ್ಸಿನಲ್ಲೇ ಓದು ಬರಹ ಎಂದರೆ ತುಂಬಾ ಇಷ್ಟ ಪಡುವ ಈಕೆ ಅದರ ಜೊತೆಗೆ ಕರ್ನಾಟಕಿ ಶಾಸ್ತ್ರೀಯ ಸಂಗೀತ,ದೇವರನಾಮ ಮತ್ತು ಲಘು ಸಂಗೀತ ಕಲಿಯುತಿದ್ದಾಳೆ. ಮತ್ತು ಭರತನಾಟ್ಯ ಕಲಿಯುತಿದ್ದಾಳೆ.
ಏಕ ಪಾತ್ರಭಿನಯ , ಸಂಗೀತ ಸ್ಪರ್ಧೆ ,ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಜಿಲ್ಲಾ ಮಟ್ಟದಲ್ಲಿ , ರಾಜ್ಯ ಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಬಹುಮಾನ ಪಡೆದಿದ್ದಾಳೆ.
ಕುವೆಂಪು ಭಾವಗೀತೆ ಗಾಯನ ಸ್ಪರ್ಧೆ ಭಾಗವಹಿಸಿ ಅತ್ಯುತ್ತಮ, ಎಸ್ಪಿ ಬಾಲಸುಬ್ರಹ್ಮಣ್ಯಮ್ ಸವಿ ನೆನಪು ಗಾಯನ ಸ್ಪರ್ಧೆ ಭಾಗವಹಿಸಿ ಅತ್ಯುತ್ತಮ ಸ್ಪರ್ಥಿ ಎನಿಸಿದ್ದಾಳೆ. ಈಕೆಗೆ ಕುಟುಂಬದವರು ಹಾಗೂ ಶಾಲಾ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.