ಕಾರವಾರ: ತಾಲೂಕಿನ ಅಮದಳ್ಳಿ-ತೋಡುರು ಬಳಿ ಮಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲು ಚಿರತೆಗೆ ಡಿಕ್ಕಿಹೊಡೆದಿದೆ. ಗಾಯಗೊಂಡ ಚಿರತೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ಪರಿಣಾಮ ಚಿರತೆಯ ಹಿಂಭಾಗ ಗಂಭೀರವಾಗಿ ಗಾಯಗೊಂಡು ಹಳಿಯ ಪಕ್ಕಕ್ಕೆ ಬಿದ್ದಿದೆ. ಸ್ಥಳಕ್ಕೆ ಕಾರವಾರ ಅರಣ್ಯ ವಿಭಾಗ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಹಾಗೂ ಕಾರವಾರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ 89 ಜನರಿಗೆ ಕರೋನಾ ಪಾಸಿಟಿವ್

ಪಶು ವೈದ್ಯ ಡಾ.ದೀಪಕ್ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಮೃತ ಚಿರತೆಯು ಸುಮಾರು ಮೂರು ವರ್ಷದ್ದಾಗಿದ್ದು, ಗಂಡು ಜಾತಿಯದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES  ಇಹಲೋಕ ತ್ಯಜಿಸಿದ ಡಾ. ಎಂ.ಪಿ ಕರ್ಕಿ : ಗಣ್ಯರ ಸಂತಾಪ