ಕುಮಟಾ: ತಾಲೂಕಿನ ೯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಬಿಡುಗಡೆಯಾದ ೪.೪೦ ಲಕ್ಷ ರೂ.ಗಳ ಚೆಕ್‌ಗಳನ್ನು ಶಾಸಕ ದಿನಕರ ಶೆಟ್ಟಿ ಶನಿವಾರ ಪಟ್ಟಣದ ತಹಸೀಲ್ದಾರ ಕಚೇರಿಯ ಆವಾರದಲ್ಲಿ ದೇವಸ್ಥಾನಗಳ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ತಾಲೂಕಿನ ಶಾಂತಗಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನಕ್ಕೆ ೧ ಲಕ್ಷ, ಹರವಳ್ಳಿಯ ಭಂಡಾರಮ್ಮ ದೇವಾಲಯಕ್ಕೆ ೨೫ ಸಾವಿರ, ಬರ್ಗಿಯ ಬೀರದೇವ ದೇವಸ್ಥಾನಕ್ಕೆ ೫೦ ಸಾವಿರ, ವಾಲಗಳ್ಳಿಯ ಕಾನಮ್ಮ ದೇವ ಸಮಿತಿಗೆ ೧ ಲಕ್ಷ, ವನ್ನಳ್ಳಿಯ ದೇವರ್ಸು ಜಟಕದೇವ ದೇವಸ್ಥಾನಕ್ಕೆ ೨೫ ಸಾವಿರ, ವನ್ನಳ್ಳಿಯ ಬೊಬ್ರುದೇವ ದೇವಸ್ಥಾನಕ್ಕೆ ೨೫ ಸಾವಿರ, ಉಪ್ಪಿನಪಟ್ಟಣ ಮಹಾಸತಿ ದೇವಸ್ಥಾನಕ್ಕೆ ೧೫ ಸಾವಿರ, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ೫೦ ಸಾವಿರ ಬೆಟ್ಕುಳಿಯ ಬೊಮ್ಮಯ್ಯ ದೇವಸ್ಥಾನ ಸಮಿತಿಗೆ ೫೦ ಸಾವಿರ ರೂ.ಗಳ ಚೆಕ್‌ಗಳನ್ನು ದೇವಸ್ಥಾನದ ಆಡಳಿತ ಮಂಡಳಿಗೆ ವಿತರಿಸಿದರು.
ಚೆಕ್ ವಿತರಿಸಿ, ಶಾಸಕ ದಿನಕರ ಶೆಟ್ಟಿ ಮಾತನಾಡಿ, ತಾಲೂಕಿನ ೯ ದೇವಸ್ಥಾನಗಳ ಅಭಿವೃದ್ಧಿಗೆ ೪.೪೦ ಲಕ್ಷ ರೂ.ಗಳನ್ನು ಚೆಕ್‌ಗಳ ಮೂಲಕ ನೀಡಲಾಗಿದೆ. ಬಾಕಿ ಇರುವ ಸರ್ಕಾರದ ಹಣವನ್ನು ಪರಿಶೀಲಿಸಿ, ೯ ದೇವಸ್ಥಾನಗಳ ಅಭಿವೃದ್ಧಿಗೆ ಮಂಜೂರಿ ಮಾಡಿ ವಿತರಿಸಲಾಗಿದೆ. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಈ ಪ್ರಕ್ರಿಯೆಯನ್ನು ನಿರಂತರವಾಗಿ ಮುಂದುವರೆಸಿಕೊAಡು ಬಂದಿದ್ದೇನೆ ಎಂದರು.

RELATED ARTICLES  ಐಗಳಕೂರ್ವೇ ಸೇತುವೆ : ಪರ‌ವಿರೋಧದ ನಡುವೆ ಗೊಂದಲದ ಗೂಡಾಗಿದೆ ಕಾಮಗಾರಿ.

ವಾಲಗಳ್ಳಿಯ ದೇವಸ್ಥಾನದ ಅಭಿವೃದ್ಧಿಗೆ ೧ ಲಕ್ಷ ರೂ. ನೀಡಲಾಗಿದೆ. ಹೆಚ್ಚುವರಿಯಾಗಿ ೫ ಲಕ್ಷ ರೂ. ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ ಎಂದ ಅವರು, ದೀವಗಿಯ ಹಾಲಕ್ಕಿ ಒಕ್ಕಲಿಗ ಸಮುದಾಯ ಭವನ ನಿರ್ಮಾಣ ಮಾಡಲು ಹಣ ಮಂಜೂರಿ ಮಾಡಿಸುವಂತೆ ಸಂಸದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ೧ ಕೋಟಿ ರೂ. ಅನುದಾನ ನೀಡಲಾಗಿದೆ. ಆ ಹಣ ಅವರ ಖಾತೆಗೆ ಜಮಾ ಆಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ ಸರ್ಕಾರ ಮೂಲಭೂತ ಸೌಕರ್ಯದ ಅಭಿವೃದ್ಧಿಯ ಜತೆಗೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೂ ಹಣ ಬಿಡುಗಡೆ ಮಾಡುತ್ತಿದೆ ಎಂದರು.

RELATED ARTICLES  ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ ಘೋಷಣೆ

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಸಂತೇಗುಳಿ ಗ್ರಾ.ಪಂ ಮಾಜಿ ಅಧ್ಯಕ್ಷ ವಿನಾಯಕ ಭಟ್ಟ ಸಂತೇಗುಳಿ, ಪುರಸಭಾ ಸದಸ್ಯರಾದ ಸಂತೋಷ ನಾಯ್ಕ, ಶೈಲಾ ಗೌಡ, ಉಪತಹಸೀಲ್ದಾರ ಬಿ.ಆರ್.ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.