ಕಾರವಾರ: ಹಾಂಗ್ಯೋ ಐಸ್‌ಕ್ರೀಂ ನಮ್ಮ ಜಿಲ್ಲೆಯ ಅತ್ಯಂತ ಪ್ರಸಿದ್ಧವಾದ ಉದ್ಯಮ ಇದು ನಮಗೆ ತುಂಬಾ ಹೆಮ್ಮೆ. ಹಾಂಗ್ಯೋ ಕರ್ನಾಟಕ ದಲ್ಲಿ ಅಷ್ಟೇ ಅಲ್ಲದೆ ದೇಶದ ಅನೇಕ ಪ್ರಸಿದ್ಧ ರಾಜ್ಯಗಳಲ್ಲಿ ಮನೆಮಾತಾಗಿದೆ. ಹಾಂಗ್ಯೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಪೈ ರವರಿಗೆ FICCI (ಪಿಕಿ) ನೀಡುವ ” ಶ್ರೇಷ್ಠ ಕೊಡುಗೆ ಪ್ರಶಸ್ತಿ” ನೀಡಿ ಗೌರವಿಸಿದೆ.
ಮಂಗಳೂರಿನಲ್ಲಿ ನಡೆದ ಕೋಸ್ಟಲೈನ್ ಬ್ಯುಸಿನೆಸ್ ಕಾನಕ್ಲೇವ್-2021 ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ರಾಜ್ಯ ಕೈಗಾರಿಕಾ ಸಚೀವ ಜಗದೀಶ ಶೆಟ್ಟರ್ ಪ್ರಧಾನ ಮಾಡಿ ಗೌರವಿಸಿದರು.. ಈ ಪ್ರಶಸ್ತಿ ಅವರ ಸಾಧನೆ ಹಾಗೂ ಶ್ರಮಕ್ಕೆ ಸಿಕ್ಕ ಪ್ರತಿಫಲ..
ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಪ್ರದೀಪ ಪೈ ನಾನು ಪ್ರಶಸ್ತಿ ಗಾಗಿ ಯಾವತ್ತೂ ಹಿಂದೆ ಬಿದ್ದವನಲ್ಲ.. ಸಾಧನೆಯ ಗುರಿ ತಲುಪುವ ಹಾಗೂ ನಾವು ನೀಡುವ ಉತ್ಪನ್ನಗಳು ಜನರ ಉತ್ಕೃಷ್ಟವಾಗಿರಬೇಕು ಎಂಬ ಹಂಬಲ ನನ್ನಲ್ಲಿ ಯಾವತ್ತೂ ಜಾಗೃತವಾಗಿರುತ್ತದೆ ಅದಕ್ಕೊಸ್ಕರ ಶ್ರಮ ವಹಿಸುತ್ತೇವೆ. ಹೀಗಾಗಿ ಅನೇಕ ಪ್ರಶಸ್ತಿಗಳು ನಮ್ಮ ಉದ್ಯಮಕ್ಕೆ ಲಭಿಸಿದೆ ಈ ಪ್ರಶಸ್ತಿ ಕೂಡ ತುಂಬಾ ಸಂತೋಷ ನೀಡಿದೆ ಇದನ್ನು ನಮ್ಮ ಎಲ್ಲ ಹಾಂಗ್ಯೋ ತಂಡಕ್ಕೆ ಸಮರ್ಪಿಸುತ್ತೇನೆ ಎಂದು ಹೇಳಿದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಎನ್ ಎಂ ಪಿ ಟಿ ಚೇರಮನ್ ವೆಂಕಟರಮಣ, ಪಿಕಿ ಚೇರಮನ್ ಉಲ್ಲಾಸ ಕಾಮತ್, ಎಂ ಆರ್ ಪಿ ಎಲ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಮತ್ತು ಕಿಸಿಸಿಎ ಅಧ್ಯಕ್ಷ ಇಸಾಕ್ ಉಪಸ್ಥಿತರಿದ್ದರು..