ಲೈನ್ಸ್ ಕ್ಲಬ್ ಕುಮಟಾ ಹಾಗೂ ಮೆ, ಶ್ರೀರಾಮ್ ಮೆಡಿಕೆಲ್ಸ್ ಮಾಲಕ ಶ್ರೀ ಮೂಡಲಗಿರಿ ಗೋವಿಂದರಾಯ ನಾಯಕ್ ಅವರ ಪ್ರಯೋಜಕತ್ವದಲ್ಲಿ 70 ನೆ ಉಚಿತ ಗ್ರಾಮೀಣ ಮಾನಸಿಕ ಆರೋಗ್ಯ ತಪಾಸಣೆ ಶಿಬಿರ ನಗರದ ಲಯನ್ಸ್ ಸೇವಾಭವನದಲ್ಲಿ ನಡೆಯಿತು.

ಶಿಬಿರದಲ್ಲಿ ಕಳೆದ 50 ಕ್ಕೂ ಹೆಚ್ಚುವರ್ಷಗಳಿಂದ ಮನೋರೋಗದ ವೈದ್ಯರಾಗಿ ಶಿವಮೊಗ್ಗದಲ್ಲಿ ಸೇವೆಸಲ್ಲಿಸುತ್ತಿರುವ ಪ್ರಖ್ಯಾತ ವೈದ್ಯ ಡಾ. ಶ್ರೀಧರ ಅವರು ಸೇರಿದ್ದ 60 ಕ್ಕೂ ಹೆಚ್ಚು ಅರ್ಹ ವ್ಯಕ್ತಿಗಳಿಗೆ ಸೂಕ್ತ ಸಲಹೆ ಹಾಗೂ ಉಚಿತ ಔಷಧ ವಿತರಿಸಿದರು.ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಮಾತನಾಡಿದ ಡಾ.ಶ್ರೀಧರ್ ಅವರು ಮನುಷ್ಯನು ಯಶಸ್ವೀ ಬದುಕು ಸಾಗಿಸಲು ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ಉದಾಹರಣೆ ಸಹಿತ ಮನೋಜ್ಞವಾಗಿ ವಿವರಿಸಿದರು.

RELATED ARTICLES  ಬೈಕ್ ಹಾಗೂ ಕಾರಿನ ನಡುವೆ ಅಪಘಾತ : ಕಾರು ಸವಾರರಿಂದ ಕೊಲೆ ಯತ್ನ ಆರೋಪ.

ಎಲ್ಲಾ ಅಂಗಗಳಲ್ಲಿ ಮನಸ್ಸು ಬಹು ಮುಖ್ಯ.ಮನಸ್ಸಿಲ್ಲದಿದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ.ಕಾಲಿಲ್ಲದವ ಹಿಮಾಲಯ ಎರಬಲ್ಲ,ನ್ರತ್ಯ ಮಾಡಬಲ್ಲ,ಕೈ ಇಲ್ಲದವ ಯಾವುದೇ ಕೆಲಸ ಮಾಡಬಲ್ಲ,ಕಣ್ಣಿಲ್ಲದವ ಕಂಪ್ಯೂಟರ್ ಉಪಯೋಗಿಸಬಲ್ಲ ಆದರೆ ರೋಗಗ್ರಸ್ತ ಮನಸ್ಥಿತಿಯವ ಏನನ್ನು ಮಾಡಲಾರ.ಆದ್ದರಿಂದ ನಾವೆಲ್ಲರೂ ಮನಸ್ಸಿನ ಆರೋಗ್ಯಕ್ಕೆ ಅತ್ಯಂತ ಹೆಚ್ಚು ಗಮನ ಕೊಡಬೇಕು.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹೊನ್ನಾವರದ ಶ್ರೀದೇವಿ ಅಸ್ಪತ್ರೆ ಯ ಹಿರಿಯ ವೈದ್ಯ ಡಾ. ವಿ.ಚಂದ್ರಶೇಖರ ಶೆಟ್ಟಿ ಮಾನಸಿಕವಾಗಿ ಅಸ್ವಸ್ತಾನಾದವನೊಬ್ಬ ಕುಟುಂಬದಲ್ಲಿದ್ದರೆ ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ ಎಂದು ಹೇಳಿ ನಾವೆಲ್ಲರೂ ಮನಸ್ಸನ್ನು ಆರೋಗ್ಯಪೂರ್ಣವಾಗಿರಿಸಿಕೊಳ್ಳುವದರಮಹತ್ವ ವಿವರಿಸಿದರು. ಗ್ರಾಮೀಣ ಭಾಗದ ಜನರಿಗೆ ದುರ್ಲಭವಾದ ಇಂತ ಚಿಕಿತ್ಸೆ ಯ ವ್ಯವಸ್ಥೆಯನ್ನು ಕಳೆದ ಅನೇಕ ವರ್ಷಗಳಿಂದ ಕುಮಟಾ ಲೈನ್ಸ್ ಕ್ಲಬ್ ಮಾಡುತ್ತ ಬಂದಿರುವ ದನ್ನು ಮಕ್ತ ಕಂಠದಿಂದ ಶ್ಲಾಘಿಸಿ, ಪ್ರಯೋಜಕ ಮೂಡಲಗಿರಿ ನಾಯಕರ ಸೇವೇಗಾಗಿ ಅಭಿನಂದಿಸಿದರು.

RELATED ARTICLES  ಹಟ್ಟಿಕೇರಿಯಲ್ಲಿ ಸಂಪನ್ನಗೊಂಡ ಜಿಲ್ಲಾಮಟ್ಟದ ಹಾಲಕ್ಕಿ ಸಮಾಜದ ವಾಲಿಬಾಲ್ ಪಂದ್ಯಾವಳಿ

ಅಧ್ಯಕ್ಷೆ ಲೈನ್ ವಿನಯಾ ಹೆಗಡೆ ಅಧ್ಯಕ್ಷೀಯ ಭಾಷಣ ಮಾಡಿ ಶಿಬಿರದ ಯಶಸ್ಸಿಗಾಗಿ ಸಹಕರಿಸಿದ ಎಲ್ಲರ ಉಪಕಾರ ಸ್ಮರಿಸಿದರು.ಮಾನಸಿಕ ಆರೋಗ್ಯ ಶಿಬಿರದ ಸಂಚಾಲಕ ಡಾ. ಜಿ.ಜಿ.ಹೆಗಡೆ ಪ್ರಾಸ್ತಾವಿಕ ಮತನಾಡಿ ಶಿಬಿರದ ಅಯೋಜನೆಯ ಬಗ್ಗೆ ತಿಳಿಸಿದರು.ಈ ವರ್ಷದ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಪಡೆದ ಡಾ. ಶ್ರೀಧರ ಅವರನ್ನು ಕುಮಟಾ ಲೈನ್ಸ್ ಕ್ಲಬ್ ಪರವಾಗಿ ಅಧ್ಯಕ್ಷ ವಿನಯಾ ಹೆಗಡೆ ಸನ್ಮಾನಿಸಿ ಗೌರವಿಸಿದರು.ಲಯನ್ ಎಂ.ನ್.ಹೆಗಡೆ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆ ಗೈದರು. ಲಯನ್ ಎಂ ಕೆ ಶಾ ನಭಾಗ್ ದಂಪತಿಗಳು ಹಾಗೂ ಲೈನ್ ಸದಸ್ಯರುಗಳು ಹಾಜರಿದ್ದು ಸೇರಿದ ಮನೋರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಸಹಕರಿಸಿದರು.