ಹೊನ್ನಾವರ: ಅಗ್ರಹಾರ ಗಣಪತಿ ದೇವಾಲಯದ ಕಳ್ಳತನ ನಡೆದು ಆರೋಪಿಯನ್ನೂ ಪೊಲೀಸರು ಸೆರೆ ಹಿಡಿದಿದ್ದಾರೆ. ಆದರೆ ಇದೀಗ ಮತ್ತೊಂದು ಕಳ್ಳತನ ಪ್ರಕರಣ ಹೊರಬಿದ್ದಿದೆ.

ಯಾರೋ ಕಳ್ಳರು ರಾತ್ರಿ ವೇಳೆ ಕಿರಾಣಿ ಅಂಗಡಿಗೆ ನುಗ್ಗಿ ಅಂಗಡಿಯ ಬೀಗವನ್ನು ಒಡೆದು ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಳವು ಮಾಡಿ ಪರಾರಿಯಾದ ಘಟನೆ ತಾಲೂಕಿನ ಹಳದೀಪುರ ಅಗ್ರಹಾರದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.

ಹಳದೀಪುರ ಅಗ್ರಹಾರದ ನವೀಲಗೋಣ ಕ್ರಾಸ್‌ನಲ್ಲಿ ನಿತ್ಯಾನಂದ ಹರಿ ಪೈ ಎಂಬುವವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ನಿತ್ಯಾನಂದ ಪೈ ಅವರು ಎಂದಿನoತೆ ರಾತ್ರಿ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದರು. ಭಾನುವಾರ ತಡರಾತ್ರಿ ಯಾರೋ ದುಷ್ಕರ್ಮಿಗಳು ಅಂಗಡಿಯ ಬಾಗಿಲು ಒಡೆದು ಒಳ ನುಗ್ಗಿದ್ದಾರೆ. ನಂತರ ಅಂಗಡಿಯ ಒಳಭಾಗಲ್ಲಿದ್ದ ಕ್ಯಾಶ್ ಡ್ರಾವರ್ ಒಡೆದು ಅದರಲ್ಲಿದ್ದ ಸುಮಾರು 1.35 ಲಕ್ಷ ರೂ.

RELATED ARTICLES  " ಕೋವಿಡ್ 19, ಮಂಗನಕಾಯಿಲೆ ಹಾಗೂ ಕುಡಿಯುವ ನೀರಿನ ಸಂಬಂಧಿಸಿದಂತೆ ಪ್ರಗತಿಪರಿಶೀಲನಾ ಸಭೆ "

ಹಣವನ್ನು ಕಳವು ಮಾಡಿ ಪರಾರಿಯಾಕಗಿದ್ದಾರೆ ಎನ್ನಲಾಗಿದೆ. ಎಂದಿನoತೆ ಸೋಮವಾರ ನಿತ್ಯಾನಂದ ಪೈ ಅವರು ಅಂಗಡಿಗೆ ಆಗಮಿಸಿದಾಗ ಅಂಗಡಿ ಬಾಗಿಲು ತೆರೆದು ಕೃತ್ಯ ಎಸಗಿರುವುದು ಕಂಡುಬoದಿದೆ. ತಕ್ಷಣ ಹೊನ್ನಾವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೊನ್ನಾವರ ಸಿಪಿಐ ಶ್ರೀಧರ, ಪಿಎಸ್‌ಐ ಶಶಿಕುಮಾರ, ಕ್ರೈಂಮ್ ಪಿಎಸ್‌ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಕಾಶೀನಾಥ ನಾಯಕ ಎಂಬ ಕರ್ಮಯೋಗಿ.