ಬೆಂಗಳೂರು: ರಾತ್ರಿ ಸುರಿದ ನಿರಂತರ ಮಳೆಗೆ ಬೆಳ್ಳಂದೂರು ಕೆರೆಯಲ್ಲಿ ನೊರೆಯ ಪ್ರಮಾಣ ಹೆಚ್ಚಾಗಿದ್ದು, ರಸ್ತೆಯಲ್ಲಿ ಸಂಚಾರ ಮಾಡುವುದೆ ಕಷ್ಟವಾಗಿದೆ.
ಮಳೆಯ ಪ್ರಮಾಣ ಹೆಚ್ಚಾದ ಕಾರಣ ಚರಂಡಿ ನೀರು ಕೂಡ ಮಳೆ ನೀರಿನೊಂದಿಗೆ ಸೇರಿಕೊಂಡು ಕೆರೆ ಸೇರಿದೆ. ಮೊದಲೇ ಕಲುಷಿತ ಗೊಂಡಿದ್ದ ಕೆರೆ ನೀರು ಇದರಿಂದ ಹೆಚ್ಚಿನ ದುರ್ನಾತ ಬೀರುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾಗಾಗಿದೆ ನಮ್ಮ ಸಮಸ್ಯೆ ಬಗೆ ಹರಿಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.