ಯಲ್ಲಾಪುರ : ಪ್ರಸ್ತುತ ಯಲ್ಲಾಪುರ ಪೋಲಿಸ್ ಠಾಣೆಯ ಕ್ರೈಮ್ ವಿಭಾಗದಲ್ಲಿ ಪೋಲಿಸ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ
ಸಿರಸಿ ಮೂಲದ ಮಹಮ್ಮದ್ ಶಫಿಯವರಿಗೆ ಉತ್ತರ ಕನ್ನಡದ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ, ಜಿಲ್ಲೆಯ ಹಲವು ಅಪರಾಧ ಚಟುವಟಿಕೆಗಳಲ್ಲಿ ಅರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ, ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ, ಹಲವು ಜಟಿಲ ಕಳ್ಳತನ ಪ್ರಕರಣಗಳನ್ನು ಬಯಲಿಗೆಳೆದು ಆರೋಪಿಗಳನ್ನು ಜೈಲಿಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಪರಿಗಣಿಸಿ ಈ ವರ್ಷದ ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಆಯ್ಕೆಮಾಡಿದೆ…
2005 ರಿಂದ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಮ್ಮದ್ ಶಫಿಯವರು ಕಳೆದ 2.5 ವರ್ಷದಿಂದ ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.. ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಬನವಾಸಿ ಸಮೀಪದ ಮಳಗಿ ಹಾಗೂ ದಾಸನಕೊಪ್ಪದಲ್ಲಿ ನಡೆದ ಕೊಲೆಯ ಅರೋಪಿಗಳನ್ನು ಪತ್ತೆಮಾಡಿ ಬಂಧಿಸುವಲ್ಲಿ, ಅಂಕೋಲಾದಲ್ಲಿ ನಡೆದ ಕೊಲೆಯ ಪ್ರಕರಣ ಬಯಲಿಗೆಳುವುದರಲ್ಲಿ ಶಫಿಯವರ ಪರಿಶ್ರಮ ಮರೆಯಲಾರದ್ದು, ತಮ್ಮ ಚಾಣಾಕ್ಷತನ, ದಕ್ಷತೆ, ವೃತ್ತಿಪರತೆಯಿಂದ ಸದಾಕಾಲವೂ ಮೇಲಾಧಿಕಾರಿಗಳಿಂದ ಮೆಚ್ಚುಗೆ ಅಲ್ಲದೇ, ಜನ ಸ್ನೇಹಿ ಚಟುವಟಿಕೆಗಳಿಂದ ಎಲ್ಲರ ಮನಗೆದ್ದ ಮಹಮದ್ ಶಫಿಯವರಿಗೆ ಅಭಿನಂದನೆಗಳು..