ಹಿರೇಗುತ್ತಿ: ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಹಿರೇಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಗಿರೀಶ ನಾಯ್ಕರವರಿಗೆ ಶ್ರೀ ಬ್ರಹ್ಮಜಟಕ ಯುವಕ ಸಂಘ ಹಾಗೂ ಹಿರೇಗುತ್ತಿ ಊರಿನ ಸಮಸ್ತ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಗಿರೀಶ ನಾಯ್ಕರ ಕುರಿತು ಮಾತನಾಡಿದ ಯುವಕ ಸಂಘದ ಎನ್.ರಾಮು.ಹಿರೇಗುತ್ತಿ “ಡಾ.ಗಿರೀಶ ನಾಯ್ಕರ ಮಾನವೀಯತೆಯ ಸಾಕಾರ ಮೂರ್ತಿ, ಸಹೃದಯರು ಅವರು “ವೈದ್ಯ ನಾರಾಯಣೋ ಹರಿ” ಎಂಬಂತೆ ಕಳೆದ 15 ವರ್ಷಗಳಿಂದ ಹಿರೇಗುತ್ತಿ ಆಸ್ಪತ್ರೆಯ ವೈದ್ಯರಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸೇವೆಯ ಪ್ರತಿಫಲ ಸೇವೆ” ಎಂಬಂತೆ ಕೇವಲ ಹಿರೇಗುತ್ತಿ ಮಾತ್ರವಲ್ಲದೇ ಹಿರೇಗುತ್ತಿ ಸುತ್ತಮುತ್ತಲಿನ ಅನೇಕ ಹಳ್ಳಿಗಳಿಂದ ಬರುವ ಜನರಿಗೆ ಚಿಕಿತ್ಸೆ ನೀಡಿ ಈ ಭಾಗದ ಸರ್ವ ಜನಾಂಗದ ಅಚ್ಚು ಮೆಚ್ಚಿನ ಡಾಕ್ಟರ್‍ರಾಗಿದ್ದಾರೆ. ಹೀಗೆ ಇವರ ಸೇವೆ ಸಮಾಜಕ್ಕೆ ನಿರಂತರವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ” ಎಂದರು.

RELATED ARTICLES  ಬೂತ್ ಮಟ್ಟದಲ್ಲಿ ಪಕ್ಷ ಸಶಕ್ತಗೊಳಿಸುವ ಮೂಲಕ ಗೆಲುವಿಗೆ ಪ್ರಯತ್ನ; ಕುಮಟಾದಲ್ಲಿ ಶ್ರೀನಿವಾಸ ಪೂಜಾರಿ ಹೇಳಿಕೆ

ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರಾದ ದಿನಕರ .ಕೆ. ಶೆಟ್ಟಿ, ಜಿ.ಪಂ ಸದಸ್ಯ ಪ್ರದೀಪ ನಾಯಕ, ಗ್ರಾ.ಪಂ ಅಧ್ಯಕ್ಷೆ ಕುಸುಮಾ ಪಡ್ತಿ, ಗ್ರಾ.ಪಂ ತೊರ್ಕೆ ಅಧ್ಯಕ್ಷ ಆನಂದು ಕವರಿ, ಶಾಂತಾ ನಾಯಕ ಹಾಗೂ ಹಿರೆಗುತ್ತಿ ಗ್ರಾ.ಪಂ ಸದಸ್ಯರು, ಡಿ.ಎಚ್.ಓ ಶರದ ನಾಯಕ, ವೈದ್ಯಾಧಿಕಾರಿ ಡಾ. ಆಜ್ಞಾ ನಾಯಕ, ಡಾ. ಚೈತ್ರಪ್ರಭಾ ನಾಯ್ಕ, ಡಾ.ರಣಜಿತ್ ಕೆಂಚನ್, ರಾಜೀವ ಗಾಂವಕರ ಶ್ರೀ ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷರಾದ ರಾಜು.ಕೇ.ಗಾಂವಕರ, ರಾಮು ಕೆಂಚನ್, ಕೃಷ್ಣಮೂರ್ತಿ ನಾಯಕ, ಆನಂದು ನಾಯಕ, ನಾಗರತ್ನ ಗಾಂವಕರ, ಮಹೇಶ ನಾಯಕ, ಚಂದ್ರಕಾಂತ ಗಾಂವಕರ, ಮಂಜುನಾಥ ನಾಯಕ, ಹರೀಶ ನಾಯಕ, ನೀಲಕಂಠ ನಾಯಕ, ದೇವಿದಾಸ ನಾಯಕ, ಸಣಪ್ಪ ನಾಯಕ, ಉದ್ದಂಡ ಗಾಂವಕರ, ಮಹಾಲಕ್ಷ್ಮೀ ಕೆರೆಮನೆ, ಕಮಲಾಕ್ಷ ಗಾಂವಕರ, ಕುಮಾರ ಕವರಿ, ಕಾರ್ತಿಕ ನಾಯಕ, ಪ್ರೇಮಾನಂದ ಗಾಂವಕರ, ಆದರ್ಶ ನಾಯಕ ಹಾಗೂ ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು, ಊರಿನವರು, ಆಸ್ಪತ್ರೆಯ ಸಿಬ್ಬಂದಿಗಳು, ಅಂಗನವಾಡಿ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

RELATED ARTICLES  ಜಾನುವಾರುಗಳ ಮೇಲೆ ಎರಗಿದ ಚಿರತೆ : ಜನರಲ್ಲಿ ಮತ್ತೆ ಒಡಮೂಡಿದೆ ಭಯ.

ವರದಿ: ಎನ್ ರಾಮು ಹಿರೇಗುತ್ತಿ