ಕುಮಟಾ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪಟ್ಟಣದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ “ಜಾನಕಿರಾಮ” ವೃದ್ಧಾಶ್ರಮದ ಮೇಲ್ವೀಚಾರಕಿ ಸಿಸ್ಟರ್ ಆಶಾ ನಾಯ್ಕ ಇವರನ್ನು ಭಾರತ ಸೇವಕ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಭಾರತ ಸೇವಕ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ವೈದ್ಯ ಡಾ.ಅಶೋಕ ಭಟ್ಟ ಹಳಕಾರ ಮಾತನಾಡಿ, ಸಿಸ್ಟರ್ ಆಶಾ ನಾಯ್ಕ ತಮ್ಮ ಸ್ವಂತ ಜಾಗದಲ್ಲಿ ವೃದ್ಧಾಶ್ರಮವನ್ನು ಪ್ರಾರಂಭಿಸಿ, ವೃದ್ಧರ ಆರೈಕೆ ಮಾಡಿತ್ತಿರುವುದು ಜೆಮ್ಮೆಯ ಸಂಗತಿ. ಇಂದಿನ ಕಾಲದಲ್ಲಿ ವೈದ್ಯರು ಮನೆಗೆ ತೆರಳಿ, ಸೇವೆ ನೀಡಲು ಮುಂದಾಗುತ್ತಿಲ್ಲ. ಈ ಮಧ್ಯೆ ಆಶಾ ನಾಯ್ಕ ಮನೆ ಮನೆಗೆ ತೆರಳಿ ತಮ್ಮ ಅನುಪಮ ಸೇವೆಯನ್ನು ನೀಡುತ್ತಿರುವುದು ಅವಿಸ್ಮರಣೀಯ ಎಂದರು.

RELATED ARTICLES  ವಿದ್ಯುತ್ ಗುತ್ತಿಗೆಯಲ್ಲಿ ಸಚಿವರ ಕೈವಾಡವೂ ಇದೆ : ವೇಣುಗೋಪಾಲ ಮದ್ಗುಣಿ

ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಶಿಕ್ಷಕ ಹಾಗೂ ರಾಜ್ಯ ಉಪಾಧ್ಯಕ್ಷರು ನಿವೃತ್ತ ಸರ್ಕಾರಿ ನೌಕರರ ಸಂಘ, ಹುಬ್ಬಳ್ಳಿ ಪ್ರಸ್ತುತ ಭಾರತ ಸೇವಕ ಸಮಾಜದ ಕಾರ್ಯದರ್ಶಿ ಎಸ್.ಎಸ್.ಭಟ್ಟ ಲೋಕೇಶ್ವರ ಮಾತನಾಡಿ, ಮಾಸೂರಿನಲ್ಲಿ ತಿರುಮಲ ಶಾಂತಿ ಧಾಮವನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಆರೋಗ್ಯ ಕುರಿತು ತರಬೇತಿ (ನರ್ಸ ಕೋರ್ಸ್) ನಡೆಸಲಾಗುವುದು. ಇದನ್ನು ಸದ್ಯದಲ್ಲಿಯೇ ಆರಂಭಿಸಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ನಿಸ್ವಾರ್ಥದಿಂದ ವೃದ್ಧರ ಸೇವೆ ಮಾಡಿದ ಆಶಾ ನಾಯ್ಕ ಅವರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಗಿದ್ದು. ಅವರು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮತ್ತಷ್ಟು ಸೇವೆ ನೀಡುವಂತಾಗಲಿದೆ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಆಶಾ ನಾಯ್ಕ ಮಾತನಾಡಿ, ನನ್ನ ಚಿಕ್ಕ ಸೇವೆಯನ್ನು ಗುರುತಿಸಿ, ಭಾರತ ಸೇವಕ ಸಮಾಜದ ಪದಾಧಿಕಾರಿಗಳು ಸನ್ಮಾನಿಸಿರುವುದು ಜೀವನದ ಅವಿಸ್ಮರಣ ೀಯ ಕ್ಷಣ. ದಾನಿಗಳು ಸಹಕಾರ ನೀಡಿದರೆ ವೃದ್ಧಾಶ್ರಮದ ಜೊತೆ ಅನಾಥಾಶ್ರಮ ಸ್ಥಾಪಿಸಬೇಕೆಂಬ ಆಸೆಯಿದೆ. ಇದಕ್ಕೆ ಸರ್ವರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.

RELATED ARTICLES  ಹವ್ಯಕ ಸಮಾವೇಶಕ್ಕೆ ಕ್ಷಣಗಣನೆ : ಲಾಂಛನ ಹಾಗೂ ಆಮಂತ್ರಣ ಪತ್ರಿಕೆ ಲೋಕಾರ್ಪಣೆ.

ಈ ಸಂದರ್ಭದಲ್ಲಿ ಆಶ್ರಮದ ವೃದ್ಧರಿಗೆ ಹಣ್ಣು-ಹಂಪಲು ನೀಡಿ ವೃದ್ಧಾಶ್ರಮವಾಸಿಗಳಿಗೆ ವಾರದ ಆಹಾರದ ಕಿಟ್ ಎಸ್.ಎಸ್.ಭಟ್ಟ ನೀಡಿದರು. ಹಾಗೂ ಹಳಕಾರ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.

ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಕಾರ್ಯಕ್ರಮಾಧಿಕಾರಿ ಮಂಜುಳಾ ಗೌಡ, ಎಸ್.ಎಸ್. ಭಟ್ಟ ಅವರ ಧರ್ಮಪತ್ನಿ ಹಾಗೂ ಭಾರತ ಸೇವಕ ಸಮಾಜದ ಮಹಿಳಾ ಘಟಕದ ಸಂಚಾಲಕಿ ಸಲಿಲಾ ಭಟ್ಟ ಸೇರಿದಂತೆ ನರ್ಸ್‍ಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.