ಹೊಸನಗರ: ಬಕ್ರಿದ್ ಹಬ್ಬಕ್ಕಾಗಿ ಹತ್ಯೆಮಾಡಲು ತಂದಿದ್ದ ಗೋವುಗಳನ್ನು ಹೊಸನಗರದ ವಿವಿಧ ಸಂಘಟನೆಯವರು ಸೇರಿ ರಕ್ಷಣೆ ಮಾಡಿದ್ದಾರೆ. ಆದರೆ ವಿಪರ್ಯಾಸ ಎಂದರೆ ಈ ಕುರಿತಾಗಿ ಗೋ ರಕ್ಷಕರು ಪ್ರಕರ್ಣ ದಾಖಲಿಸಿ ಕೊಳ್ಳುವಂತೆ ಪೋಲೀಸರಲ್ಲಿ ವಿನಂತಿಸಿದರು. ಆದರೆ ಪೋಲೀಸರು ಇದಕ್ಕೆ ಸರಿಯಾಗಿ ಸ್ಪಂಧಿಸಲಿಲ್ಲ ಎನ್ನಲಾಗಿದೆ.
ಕೋಪಗೊಂಡ ಜನರು ಪೋಲೀಸರ ವಿರುದ್ಧ ಘೇರಾವ್ ಕೂಗುತ್ತಾ ಠಾಣಾ ವ್ಯಾಪ್ತಿಯಲ್ಲಿಯೇ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕರು ಗೋ ರಕ್ಷಣೆಗೆ ಪೋಲೀಸರು ಸಹಕರಿಸುತ್ತಿಲ್ಲ ಎಂದು ಬೇಸರಿಸಿದರು.