ಹೊನ್ನಾವರ :ದಿನಾಂಕ 28/03/2021 ರಂದು ಕೆಕ್ಕಾರಿನ ಶ್ರೀರಘೂತ್ತಮ ಮಠದಲ್ಲಿ ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ಹಾಗೂ ಧರ್ಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುರಿತಾದ ಎಲ್ಲಾ ಪೂರ್ವಸಿದ್ಧತೆಗಳೂ ನಡೆದಿತ್ತಾದರೂ ಕೋವಿಡ್ 19 ನಿಯಂತ್ರಣದ ನಿಟ್ಟಿನಲ್ಲಿ ಸರಕಾರ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿದೆ. ಹೀಗಾಗಿ ಸರಕಾರದ ಎಲ್ಲಾ ಮಾರ್ಗಸೂಚಿಗಳನ್ನೂ ಈ ಹಿಂದಿನಿಂದಲೂ ಪಾಲಿಸುತ್ತಾ ಬಂದಿರುವ ಶ್ರೀಮಠವು ಈ ಸಂದರ್ಭದಲ್ಲಿಯೂ ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಿದೆ.

RELATED ARTICLES  ಹೊನ್ನಾವರದ ಹಲವು ಹಳ್ಳಿಗಳಲ್ಲಿ ಕೆಲಸ ಮಾಡುತ್ತಿರುವ ಕರೋನಾ ವಾರಿಯರ್ಸಗೆ ನೆರವಾದ ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು.

ಕೋವಿಡ್ 19 ನಿಯಂತ್ರಣಕ್ಕಾಗಿ ಸರಕಾರ ಕೈಗೊಂಡಿರುವ ಮಾರ್ಗಸೂಚಿಗಳನ್ನು ಗೌರವಪೂರ್ವಕವಾಗಿ ಪಾಲಿಸುವ ಮೂಲಕ ಆರಾಧನಾ ಮಹೋತ್ಸವದ ಧಾರ್ಮಿಕ ಕಾರ್ಯಗಳನ್ನು ಮಾತ್ರವೇ ನಡೆಸಲು ನಿರ್ಧರಿಸಿದ್ದು, ಆರಾಧನಾ ಮಹೋತ್ಸವದ ದಿನ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ ಇರುವುದಿಲ್ಲ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರೂ ಖಡ್ಡಾಯವಾಗಿ ಕೋವಿಡ್ ಸಂಬಂಧಿಸಿದ ನಿಯಮ ಪಾಲಿಸಬೇಕೆಂದು ತಿಳಿಸಲಾಗಿದೆ.

RELATED ARTICLES  ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಜಿಲ್ಲಾ ಪ್ರವಾಸ ನಾಳೆಯಿಂದ.

ಕೊರೋನಾ ನಿಯಂತ್ರಣಕ್ಕಾಗಿ ಸರಕಾರದ ಜೊತೆಗೆ ನಾವೆಲ್ಲರೂ ಕೈಜೋಡಿಸಬೇಕಿದ್ದು, ಕಟ್ಟುನಿಟ್ಟಾಗಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಸರಕಾರದ ಯಾವುದೇ ನಿಯಮಗಳನ್ನು ಮೀರದಂತೆ ವರ್ತಿಸುವ ಮೂಲಕ ಜವಾಬ್ದಾರಿಯುತ ನಾಗರೀಕರಾಗಬೇಕಾಗಿದೆ. ಹೀಗಾಗಿ ಶ್ರೀ ಮಠದ ಸಮಸ್ತ ಶಿಷ್ಯ ಭಕ್ತರು ಕೊನೆಯ ಕ್ಷಣದ ಅನಿವಾರ್ಯ ಈ ಬದಲಾವಣೆಗೆ ಸಹಕರಿಸಬೇಕೆಂದು ಆರಾಧನಾ ಮಹೋತ್ಸವದ ಸಂಘಟಕರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.