ಕುಮಟಾ : ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು ಬಾಡದಲ್ಲಿ ಇಂದು ಉತ್ತರಕನ್ನಡ ಜಿಲ್ಲೆಯ ಪದವಿಪೂರ್ವ ಶಿಕ್ಷಣದ ಕನ್ನಡ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ ಜರುಗಿತು.
ಪದವಿ ಪೂರ್ವ ವಿಭಾಗದ ಉಪನಿರ್ದೇಶಕರಾದ ಶ್ರೀ ಎಸ್ ಎನ್ ಬಗಲಿಯವರು ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಶಿಕ್ಷಣದಲ್ಲಿ ಭಾಷಾ ಉಪನ್ಯಾಸಕರ ಸ್ಥಾನ ಅತ್ಯಂತ ಮಹತ್ವವಾದದ್ದು ಪಠ್ಯ ವಿಷಯದೊಂದಿಗೆ ಜೀವನ ಶಿಕ್ಷಣವನ್ನೂ ಬೋಧಿಸುವ ಅವಕಾಶ ಇವರುಗಳಿಗೆಸಿಗುತ್ತದೆ.
ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣಮಾಡುವತ್ತ ಉಪನ್ಯಾಸಕರು ಪ್ರಯತ್ನಿಸಬೇಕು ಹಾಗೂ ಸತತ ಅಧ್ಯಯನ ಶೀಲರಾಗಿರಬೇಕು.ಈ ಬಾರಿಯ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಸಾಂಘಿಕವಾಗಿ ಎಲ್ಲರೂ ಪ್ರಯತ್ನಿಸೋಣ ಎಂದು ಕರೆನೀಡಿದರು.ಭಟ್ಕಳ ಅಂಜುಮನ್ ಕಾಲೇಜಿನ ಕನ್ನಡ ಉಪನ್ಯಾಸಕ ರಾಮ ನಾಯಕ ರವರು ಅತಿಥಿ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಡ ಕಾಲೇಜಿನ ಪ್ರಾಚಾರ್ಯ ಶ್ರೀ ಮೋಹನ ನಾಯಕ ವಹಿಸಿದ್ದರು.ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಅಮೃತ ರಾಮರಥ ಪದಾಧಿಕಾರಿಗಳಾದ ಮಹೇಶ ನಾಯಕ,ಗೋಪಾಲಕೃಷ್ಣ ಹೆಗಡೆ,ಮಾಧವಿ ಭಂಡಾರಿ ಉಪಸ್ಥಿತರಿದ್ದರು.
ಉಪನ್ಯಾಸಕ ಚಿದಾನಂದ ಭಂಡಾರಿ ಕಾಗಾಲ ಪ್ರಾರ್ಥನೆಗೈದರು ಬಾಡಕಾಲೇಜಿನ ಕನ್ನಡ ಉಪನ್ಯಾಸಕ ಸಂಜೀವ ನಾಯಕ ಸರ್ವರನ್ನೂ ಸ್ವಾಗತಿಸಿದರು.ಮಹೇಶ ನಾಯಕ ರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರೆ ಸುಬ್ರಹ್ಮಣ್ಯ ಭಟ್ಟ ರವರು ವಂದನಾರ್ಪಣೆ ಗೈದರು.ಗಿರೀಶ ನಾಯಕ ವನ್ನಳ್ಳಿ ಕಾರ್ಯಕ್ರಮ ನಿರ್ವಹಣೆ ಮಾಡಿದ್ದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಕಳೆದುಬಾರಿ ಅತಿ ಹೆಚ್ಚು ಅಂಕಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಬಳಿಕ ನಡೆದ ಸಂಘದ ಸಭೆಯಲ್ಲಿ ಹಲವಾರು ವಿಷಗಳನ್ನು ಚರ್ಚಿಸಲಾಯಿತು ಇವುಗಳ ಪೈಕಿ ಪ್ರಸ್ತುತ ಕೋವಿಡ್ ಎರಡನೇ ಅಲೆಯ ಭೀತಿ ಎದುರಾಗಿದ್ದು ಇಂಥಹ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ ಕನ್ನಡ ವಿಷಯ ಮೌಲ್ಯಮಾಪನ ಕಾರ್ಯಕ್ಕೆ ಜಿಲ್ಲೆಯ ಉಪನ್ಯಾಸಕರಿಗೆ ಮಂಗಳೂರಿನ ಬದಲಿಗೆ ಉತ್ತರ ಕನ್ನಡದಲ್ಲಿಯೇ ಮೌಲ್ಯಮಾಪನ ಕೇಂದ್ರವನ್ನು ವ್ಯವಸ್ಥೆ ಮಾಡುವುದರ ಮೂಲಕ ಅನುಕೂಲ ಮಾಡಿ ಕೊಡಬೇಕೆಂದು ಸರಕಾರವನ್ನು ವಿನಂತಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.