ಕೆಕ್ಕಾರಿನ ಶ್ರೀ ರಘೂತ್ತಮ ಮಠದಲ್ಲಿ ನಡೆದ ” ಆರಾಧನಾ ಮಹೋತ್ಸವ “ದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ” ಚಿಂತನ-ಮಂಥನ” ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಶಿಕ್ಷಕ,ಸಾಹಿತಿ ರವೀಂದ್ರ ಭಟ್ಟ ಸೂರಿ ರಚಿಸಿದ ಈ ಕೃತಿ ಎಲ್ಲರ ಮಸ್ತಕವನ್ನು ಸೇರಲಿ . ಇನ್ನಷ್ಟು ಮೌಲಿಕ ಕೃತಿಗಳು ಅವರ ಲೇಖನಿಯಿಂದ ಬರಲಿ ಎಂದು ಹರಸಿದರು.

RELATED ARTICLES  TRC ಚುನಾವಣೆ; ರಾಮಕೃಷ್ಣ ಹೆಗಡೆ ಕಡವೆ ಬಳಗ ಜಯಭೇರಿ.

“ಚಿಂತನ-ಮಂಥನ ” ಕೃತಿ ಶ್ರೀ ಸಂಸ್ಥಾನದವರ ಪ್ರವಚನ ಧಾರೆಯ ಅಕ್ಷರ ರೂಪವಾಗಿದ್ದು ವಿದ್ವಾನ್ ನೀಲಕಂಠ ಯಾಜಿ ಮುನ್ನುಡಿ ಬರೆದಿದ್ದಾರೆ. ಹೆಗಡೆಯ ವೇದ ಸಂಸ್ಕೃತ ಅಕಾಡೆಮಿ ಈ ಪುಸ್ತಕ ಪ್ರಕಟಿಸಿದ್ದು ಪ್ರಕಾಶಕ ಡಾ.ಗೋಪಾಲಕೃಷ್ಣ ಹೆಗಡೆ ಪ್ರಕಾಶಕರ ನುಡಿ ಬರೆದಿದ್ದಾರೆ. ಗಣೇಶ ಜೋಶಿಯವರ ಸತ್ವಾಧಾರ ನ್ಯೂಸ್ ನಲ್ಲಿ ಸತತ 50 ದಿನಗಳ ಕಾಲ ಪ್ರಕಟವಾಗಿ ಜನಮೆಚ್ಚುಗೆ ಗಳಿಸಿದ್ದ ಲೇಖನ ಮಾಲೆ ಈಗ ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿದೆ.
ಈ ಸಂದರ್ಭದಲ್ಲಿ ಮಹಾಮಂಡಲದ ಅಧ್ಯಕ್ಷರಾದ ಶ್ರೀ ಆರ್.ಎಸ್.ಹೆಗಡೆ.ಹರಗಿ , ಪ್ರಕಾಶಕ ಡಾ. ಗೋಪಾಲಕೃಷ್ಣ ಹೆಗಡೆ, ಲೇಖಕ ರವೀಂದ್ರ ಭಟ್ಟ ಸೂರಿ, ಗೀತಾ ಭಟ್ಟ ಸೂರಿ, ಗಣೇಶ ಜೋಶಿ ಹಾಜರಿದ್ದರು.

RELATED ARTICLES  ರೋಟರಿ ಪದಗ್ರಹಣ ಸಮಾರಂಭ: ಕೊರೊನಾ ಮುಕ್ತ ವಿಶ್ವಕ್ಕೆ ಪಣ ತೊಡೋಣ ಎಂದ ಗಣ್ಯರು.