ಶಿರಸಿ: ಇತ್ತಿಚಿಗಷ್ಟೇ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದ ಮಾಜಿ ಕೇಂದ್ರ ಸಚಿವ, ಸಂಸದ ಅನಂತಕುಮಾರ ಭಾನುವಾರ ನಗರದ ತಮ್ಮ ನಿವಾಸದೆದುರು ಕಾರ್ಯಕರ್ತರೊಡಗೂಡಿ ಹೋಳಿ ಹಬ್ಬ ಆಚರಿಸಿದರು.
ಶಸ್ತ್ರ ಚಿಕಿತ್ಸೆ ಕಾರಣಕ್ಕೆ ಸಾರ್ವಜನಿಕರ ಭೇಟಿಗೆ ಹಲವು ದಿನಗಳಿಂದ ಲಭ್ಯ ಇರದಿದ್ದ ಸಂಸದ, ಚೇತರಿಸಿಕೊಂಡು ಇಂದು ಸಾರ್ವಜನಿಕರೊಡಗೂಡಿ ಹೋಳಿ ಆಚರಿಸಿದ್ದು, ಅವರ ಅಭಿಮಾನಿಗಳಲ್ಲಿ, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ತಂದಿದೆ.
ಮತ್ತೆ ಕೇಂದ್ರ ಸಚಿವ ಸ್ಥಾನ: ಸಂಸದ ಅನಂತಕುಮಾರ ಹೆಗಡೆ, ಮತ್ತೆ ಕೇಂದ್ರ ಸಚಿವರಾಗುತ್ತಾರೆ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿದ್ದು, ಯುಗಾದಿಗೆ ಪ್ರಧಾನಿ ಮೋದಿ ಅನಂತಕುಮಾರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರಾ ಎಂದು ಕಾದುನೋಡಬೇಕಿದೆ.