ಕುಮಟಾ :  ಜಿಲ್ಲಾ ಗ್ರಾಮ ಒಕ್ಕಲಿಗರ ಯುವ ಬಳಗ, ಕುಮಟಾ ಇವರ ವತಿಯಿಂದ ಕುಮಟಾದ ಮಣಕಿ ಮೈದಾನದಲ್ಲಿ ದಿನಾಂಕ 25 ಮಾರ್ಚದಿಂದ 28ರ ವರೆಗೆ ನಾಲ್ಕು ದಿನಗಳ ಕಾಲ ನಡೆದ ಗ್ರಾಮ ಒಕ್ಕಲಿಗರ ಕ್ರಿಕೆಟ್ ಪಂದ್ಯಾವಳಿಯು ಅದ್ದೂರಿಯಾಗಿ ಮುಕ್ತಾಯಗೊಂಡಿತು, ಫೈನಲ್ ಪಂದ್ಯಾಟದಲ್ಲಿ ಕುಮಟಾದ ಜಟಕೇಶ್ವರ ನರಿಬೋಳೇ ತಂಡವು ಒಕ್ಕಲಿಗ ಬಾಯ್ಸ್ ಮುಂಡಗೋಡ ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು, ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮನಾಗಿ ವಿನಯ್ ತಿಮ್ಮಪ್ಪ ಗೌಡ,ಹೊನ್ನಾವರ, ಸರಣಿ ಶ್ರೇಷ್ಠನಾಗಿ ಅರವಿಂದ ಗೌಡ, ಶಿರಸಿ, ಬೆಸ್ಟ್ ಬ್ಯಾಟ್ಸಮನ್ ಆಗಿ ಸದಾ ಪಟಗಾರ,ಹೆಗಡೆ, ಬೆಸ್ಟ್ ಬೌಲರ್ ಆಗಿ ಮಂಜುನಾಥ ಪಟಗಾರ, ಹೆಗಡೆ,ಅತೀ ಹೆಚ್ಚು ಸಿಕ್ಸರ್ ಹೊಡೆದ ಆಟಗಾರನಾಗಿ ವಿನೋದ ಪಟಗಾರ, ಹೊದಿಕೆ-ಶಿರೂರು,ಅತ್ಯುತ್ತಮ ಕ್ಯಾಚರ್ ಆಗಿ ಅನಂತ ಪಟಗಾರ, ಹೊಸ್ಕೇರಿ, ಅತೀ ಹೆಚ್ಚು ವಿಕೆಟ್ ಜಗ್ಗು ಪಟಗಾರ, ಬೆಲೆ, ಅತ್ಯುತ್ತಮ ನಡತೆಯ ತಂಡವಾಗಿ ಬೊಬ್ರುದೇವ-ಬೆಲೆ ತಂಡವು ಪ್ರಶಸ್ತಿಯನ್ನು ಪಡೆದುಕೊಂಡಿತು, ವೇದಿಕೆ ಮೇಲೆ ಇದ್ದಂತಹ ಎಲ್ಲಾ ಗಣ್ಯರು ಈ ಪ್ರಶಸ್ತಿಯನ್ನು ನೀಡಿದರು,ಅಪಘಾತ ಪರಿಹಾರ ನಿಧಿ, ನೊಂದವರಿಗೆ ನೆರವು, ರಕ್ತದಾನ ಹೀಗೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಕೊಂಡು ಕುಮಟಾ ತಾಲ್ಲೂಕಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಗ್ರಾಮ ಒಕ್ಕಲು ಯುವ ಬಳಗವು, ಕುಮಟಾದ ಮಣಕಿ ಮೈದಾನದಲ್ಲಿ ಯಶಸ್ವಿ ಕ್ರಿಕೆಟ್ ಪಂದ್ಯಾವಳಿಯನ್ನು ಅಚ್ಚು ಕಟ್ಟಾಗಿ ಸಂಘಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

RELATED ARTICLES  ಮಲ್ಲಾಪುರ ಗುರುಪ್ರಸಾದ ಪ್ರೌಢಶಾಲೆಗೆ ಸುವರ್ಣ ಸಂಭ್ರಮ: ಫೇ 15 ಮತ್ತು 16 ರಂದು ಕಾರ್ಯಕ್ರಮ