ಶಿರಸಿ: ಹಾಡಹಗಲೇ ಮನೆಯೊಂದರ ಹಂಚು ತೆಗೆದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೊಚಿರುವ ಘಟನೆ ತಾಲೂಕಿನ ಅರೆಕೊಪ್ಪದಲ್ಲಿ ಶುಕ್ರವಾರ ನಡೆದಿದೆ. ಇಲ್ಲಿನ ಜಗದೀಶ ಅರೇರ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಹಿಂಬದಿ ಕೊಠಡಿಯ ಮೂಲಕ ಹಂಚು ತೆಗೆದು ಒಳ ನುಗ್ಗಿ ಕಬ್ಬಿಣದ ಕಪಾಟಿನಲ್ಲಿದ್ದ ಬಂಗಾರದ ಆಭರಣಗಳನ್ನು ಕದ್ದೊಯ್ದಿದ್ದಾರೆ. ಕೆಲಸಕ್ಕೆ ಹೋಗಿದ್ದ ಪತಿ ಪತ್ನಿ ಮಧ್ಯಾಹ್ನ ಊಟಕ್ಕೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. 2ನಕ್ಲೇಸ್, 1ಮಾಂಗಲ್ಯಸರ, 1ಲಕ್ಷ್ಮೀಹಾರ, 2ಉಂಗುರ ಸೇರಿದಂತೆ 10 ತೊಲೆಗೂ ಹೆಚ್ಚು ತೂಕದ ಆಭರಣ ದೋಚಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ. 2-3 ದಿನಗಳ ಹಿಂದೆ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಜಗದೀಶ ಅರೇರ ಪತ್ನಿಯ ಸಹೋದರಿಯರ ಬಂಗಾರವನ್ನು ಸಹ ತಂದಿದ್ದರು ಈ ಕೃತ್ಯದಲ್ಲಿ  ಸ್ಥಳೀಯರ ಕೈವಾಡ ಇರುವ ಶಂಕೆ ವ್ಯಕ್ತವಾಗಿವೆ.

RELATED ARTICLES  ಯಲ್ಲಾಪುರದಲ್ಲಿ ಸಿಡಿಲು ಬಡಿದ ಪರಿಣಾಮ ಕೊಟ್ಟಿಗೆ ಭಸ್ಮ , ಮನೆಗೆ ಹಾನಿ

ಸ್ಥಳಕ್ಕೆ ಗ್ರಾಮೀಣ ಠಾಣೆಯ ಅಪರಾಧ ವಿಭಾಗದ ಪಿಎಸ್.ಐ ಬಾಲಕೃಷ್ಣ ಪಾಲೇಕರ್ ಭೆಟಿ ನೀಡಿ ಪರಿಶೀಲಿಸಿದ್ದಾರೆ.