ಕಾರವಾರ: ನಗರಸಭೆ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ಸುಳ್ಳು ಆರೋಪದ ಅಡಿಯಲ್ಲಿ ಕಾರವಾರ ಸಿಪಿಐ ತಮ್ಮ ಮೇಲೆ ೩೦೭ ಪ್ರಕರಣ ದಾಖಲಸಿದ್ದಾರೆ. ಅಲ್ಲದೆ ಬಂಧಿಸಿದ ಸಂಬಂಧಲ್ಲಿ ಪೊಲೀಸ್ ಸಿಬ್ಬಂದಿಯೇ ಲಾಕಪ್ನಲ್ಲಿದ್ದ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟು ನನ್ನ ಮಾನ ಹರಾಜು ಮಾಡಿದ್ದಾರೆ ಎಂದು ವಾಟಾಳ್ ಪಕ್ಷ ಜಿಲ್ಲಾಧ್ಯಕ್ಷ ರಾಘು ನಾಯ್ಕ ಆರೋಪಿಸಿದ್ದಾರೆ.
ಈ ಬಗ್ಗೆ ನಗರದ ಪ್ರಿಮಿಯರ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಳೆದ ಆ.೧೩ರಂದು ನಗರದ ಮಾಲಾದೇವಿ ಮೈದಾನದ ಬಳಿ ಬೈಕ್ ಕಟ್ಟು ನಿಂತಿದ್ದ
ಸಂದರ್ಭದಲ್ಲಿ ನಗರಸಭೆ ಸದಸ್ಯ ತನ್ನ ಬಳಿ ಬಂದು ಕ್ಷುಲಕ ಕಾರಣಕ್ಕೆ ಕ್ಯಾತೆ ತೆಗೆದಿದ್ದಾರೆ. ಆದರೆ ತಾವು ಅವರ ಮೇಲೆ ಹಲ್ಲೆ ನಡೆಸಿಲ್ಲ. ತಮ್ಮಷ್ಟಕ್ಕೆ ನೆಲಕ್ಕೂರುಳಿ ಬಿದ್ದು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ.
ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಆರೋಪಿಸಿರುವ ರಾಘು ನಾಯ್ಕ, ಇಲ್ಲಿನ ಪೊಲೀಸ್ ಸಿಬ್ಬಂದಿ ಹಾಗೂ ಸಿಪಿಐ ರಾತ್ರಿ ೧೨.೩೦ ಮೇಳೆಯಲ್ಲಿ ತಮ್ಮ ಮನೆಗೆ ಪೊಲೀಸರು ಮನೆ ಬಾಗಿಲು ಒಡೆಯುವ ರೀತಿಯಲ್ಲಿ ಬಡೆದಿದ್ದಾರೆ. ಅಲ್ಲದೆ ಕಾರವಾರದಲ್ಲಿ ಗುಂಡಾಗಿರಿ ಮಾಡುತ್ತಿಯಾ ಎಂದು ಅವ್ಯಾಚ ಶಬ್ದಗಳಿಂದ ಬೈದು, ಚಾಕು ಹಿಡಿದು ನಗರಸಭೆ ಸದಸ್ಯನಿಗೆ ಕೊಲೆ ಮಾಡಲು ಯತ್ನಿಸಿದ್ದಿಯಾ ಎಂದು ಹೇಳಿ, ನಿನ್ನನ್ನೂ ಇಲ್ಲೇ ಎನ್ಕೌಂಟರ್ ಮಾಡುತ್ತೇನೆ ಎಂದು ಬೆದರಿಸಿ, ಠಾಣೆಗೆ ಎಳೆದೊಯ್ದಿದ್ದಾರೆ.
ಬಳಿಕ ಲಾಕಪ್ ನಲ್ಲಿ ಹಾಕಿದ ಬಳಿಕ ತನ್ನ ಫೋಟೊವನ್ನು ಪೊಲೀಸ್ ಸಿಬ್ಬಂದಿ ಅಕ್ರಮವಾಗಿ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿ ಮಾನ ಹರಾಜು ಮಾಡಿದ್ದಾರೆ. ಈ ಎಲ್ಲ ಕೃತ್ಯಕ್ಕೆ ಇಲ್ಲಿನ ಲೋಕೋಪಯೋಗಿ ಇಲಾಖೆಯ ನೌಕರನ ಕುಮ್ಮಕ್ಕಿದೆ ಎಂದು ಆರೋಪಿಸಿದ್ದ ರಾಘು ಕಳೆದ ೨೦೧೪ರಲ್ಲಿ ಸರಕಾರಿ ನೌಕರ ಹಾಗೂ ನನ್ನ ನಡುವೆ ನಡೆದ ಚಿಕ್ಕ ಗಲಾಟೆಯೇ ಕಾರಣವಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣದ ನಡೆಯುತ್ತಿದ್ದು ಆತನ ವಿರುದ್ಧ ಆದೇಶ ಬರಬಹುದು ಎಂದು ಆತಂಕಗೊಂಡು ತನ್ನ ವಿರುದ್ಧ ಸೇಡು ತಿರಿಸಿಕೊಳ್ಳಲು ಕಳೆದ ೨೦೧೪ರಿಂದ ಹೊಂಚು ಹಾಕಿಕೊಂಡು, ಸಿಪಿಐ ಜೊತೆ ಸೇರಿ ಈಗ ನಗರಸಭೆ ಸದಸ್ಯನನ್ನು ಬಳಿಸಿಕೊಂಡು ತನ್ನ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ.
ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಸೇರಿ ಸಿಐಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ. ಕಾನೂನಿನ ಪ್ರಕಾರ ಹೋರಾಟ ನಡೆಸುತ್ತೇನೆ ಎಂದ ರಾಘು ನಾಯ್ಕ ತನ್ನ ಮಾನಹರಾಜು ಮಾಡಿದ ಪೊಲೀಸರ ವಿರುದ್ಧ ತನಖೆಯಾಗಬೇಕು ಎಂದು ಆಗ್ರಹಿಸಿದರು.