ಕುಮಟಾ : ಹೊನ್ನಾವರ ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯವರ ಆಪ್ತ ಕಾರ್ಯದರ್ಶಿಯಾಗಿ ಕಳೆದ ಮೂರು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ ಭಟ್ಟ ನವಿಲಗೋಣ ಅವರು ಬೈಂದೂರ ತಹಶೀಲ್ದಾರರಾಗಿ ನಿಯುಕ್ತಿಗೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಸಾವಿರಾರು ಜನರಿಂದ ಕರೆಗಳು ಬಂದಿದೆ ಕೆಲವರು ಶುಭ ಹಾರೈಸಿದರೆ ಹಲವರು ಇಲ್ಲಿಂದ ಹೊರಹೊಗುತ್ತಿರುವ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ ಇದು ಅಶೋಕ ಭಟ್ಟ ಅವರು ಗಳಿಸಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಆದರೆ ಈ ಜನಪ್ರಿಯತೆ ಯಾರೋ ಕೊಟ್ಟಿದ್ದೂ ಅಲ್ಲ, ಎಲ್ಲಿಂದಲೋ ಕೊಂಡಿದ್ದೂ ಅಲ್ಲ, ಇದರ ಹಿಂದೆ ಅಧಿಕಾರದಲ್ಲಿರುವಷ್ಟು ದಿನ ಜನರೊಂದಿಗೆ ಬೆರೆತ ರೀತಿಯಿದೆ , ನೀತಿಯಿದೆ, ಜವಾಬ್ಧರಾಯಿಯ ಮೇಲಿರುವ ಶ್ರದ್ದೆಯಿದೆ, ಎಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರ ಕಷ್ಟದ ಅರಿವಿದೆ.
ಯಾಕೆಂದರೆ ಅಶೋಕ ಭಟ್ಟ ಬಾಲ್ಯದಿಂದಲೆ ಅತಿ ಬಡತನದ ದಿನಗಳನ್ನ ನೋಡಿದವರು, ಅನುಭವಿಸಿದವರು.
ತನ್ನ ಹತ್ತನೇ ತರಗತಿಯಲ್ಲಿಯೆ ತಂದೆಯನ್ನ ಕಳೆದು ಕೊಂಡು ಒಬ್ಬ ತಮ್ಮ ಮತ್ತು ತಾಯಿಯೊಂದಿಗೆ ಸೇರಿ ತೀರಾ ಕಷ್ಟದ ದಿನಗಳನ್ನ ಅನುಭವಿಸಿದವರು.
ಅಲ್ಲಿಂದ ತಾನು ಸಮಾಜದಲ್ಲಿ ಗೌರವಯುತವಾಗಿ ಬಾಳ ಬೇಕು ಸಾದ್ಯವಾದಷ್ಟರ ಮಟ್ಟಿಗೆ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಅವರ ಬಯಕೆ ಹೊನ್ನಾವರ ಹೊಸಾಕುಳಿಯಲ್ಲಿ ಗ್ರಾಮ ಲೆಕ್ಕಿಗರ ಹುದ್ದೆ ಅಲಂಕರಿಸುವಂತೆ ಮಾಡಿತು. ನಂತರ ಚಂದಾವರ ಹಳದೀಪುರ ಹೀಗೆ ಹಲವು ಊರುಗಳಲ್ಲಿ ಕಾರ್ಯ ನಿರ್ವಹಿಸಿದರು. ರೆವೆನ್ಯೂ ಅಧಿಕಾರಿಯಾಗಿ ಮತ್ತು ಉಪ ತಹಶೀಲ್ದಾರರಾಗಿಯೂ ಕಾರ್ಯ ನಿರ್ವಹಿಸಿ ಕಳೆದ ಅವಧಿಯಲ್ಲಿ ಭಟ್ಕಳ ಶಾಸಕ ಮಂಕಾಳು ವೈಧ್ಯರ ಆಪ್ತಕಾರ್ಯದರ್ಶಿಯಾಗಿ ನಿಯುಕ್ತಿಗೊಂಡು ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಕೇವಲ ಹೊನ್ನಾವರ ಕುಮಟಾದಲ್ಲಷ್ಟೆ ಅಲ್ಲದೆ ಭಟ್ಕಳದಲ್ಲಿಯೂ ಆಶೋಕ ಭಟ್ಟ ಅವರು ಜನಪ್ರೀಯತೆ ಗಳಿಸಿದ್ದಾರೆ. ಮಾಜಿ ಶಾಸಕ ಮಂಕಾಳುವೈಧ್ಯರಿಗೂ ಸಹ ಅಚ್ಚು ಮಚ್ಚಿನವರಾಗಿದ್ದಾರೆ
ಕೇವಲ ಅಧಿಕಾರಿಯಾಗಷ್ಟೆ ಅಲ್ಲದೆ ಅವರ ವೈಯಕ್ತಿಗ ಜೀವನದಲ್ಲಿಯೂ ಅಶೋಕ ಭಟ್ಟ ಅವರು ಸಾಕಷ್ಟು ಸ್ನೇಹಿತರನ್ನ ಗಳಿಸಿದ್ದಾರೆ ಅವರ ಕಷ್ಟ- ಸುಖಕ್ಕೆ ಸ್ಪಂದಿಸಿದ್ದಾರೆ.
ಶಾಸಕ ದಿನಕರ ಶೆಟ್ಟಿಯವರಿಗೂ ಸಹ ಒಲ್ಲದ ಮನಸ್ಸಿನಿಂದ ಅಶೋಕ ಭಟ್ಟ ಅವರನ್ನ ಕಳುಹಿಸಿಕೊಡುವ ಅನಿವಾರ್ಯತೆ ಎದುರಾಗಿದೆ ಯಾಕೆಂದರೆ ಅಶೋಕ ಭಟ್ಟ ಅವರು ಆಪ್ತಕಾರ್ಯದರ್ಶಿಯಾಗಿ ನಿಯುಕ್ತಿಗೊಂಡ ಮೇಲೆ ಶಾಸಕರು ಪುಸಭೆಯ ಚುನಾವಣೆ ಇರಬಹುದು, ಅಥವಾ ಪಂಚಾಯತ ಚುನಾವಣೆ ಇರಬಹುದು ಅಥವಾ ಸಂಘ ಸಂಸ್ಥೆಗಳ ಚುನಾವಣೆ ಇರಬಹುದು ಗೆಲುವಿನ ಗರಿಯನ್ನ ಮುಡಿಗೇರಿಸಿ ಕೊಂಡಿದ್ದಾರೆ.
ಒಂದು ದೃಷ್ಟಿಯಲ್ಲಿ ಶಾಸಕ ದಿನಕರ ಶೆಟ್ಟಿಯವರಿಗೆ ಅದೃಷ್ಟದ ಆಪ್ತಕಾರ್ಯದರ್ಶಿಯೇ ಆಗಿದ್ದರು ಎಂದರೂ ತಪ್ಪಾಗಲಿಕ್ಕಿಲ್ಲ
ಸದಾ ಕಾಲ ಶಾಸಕರೊಂದಿಗಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಮತ್ತು ಕ್ಷೇತ್ರದ ಅಭಿವೃದ್ದಿ ಕಾರ್ಯಗಳಲ್ಲಿ ಸಹಕಾರಿಯಾಗಿ ನಿಂತಿದ್ದಾರೆ
ಜನಪರ ಕಾಳಜಿ ಹೊಂದಿರುವ ಅಶೊಕ ಭಟ್ಟ ಅವರ ಮುಂದಿನ ಜೀವನ ಸುಖಕರವಾಗಿರಲಿ ಮತ್ತು ಮಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉನ್ನತ ಹುದ್ದೆ ಏರುವಂತಾಗಲಿ ಎಂದು ಸಿಂಚನ ವಾಹಿನಿ ಶುಭ ಹಾರೈಸುತ್ತಿದೆ