ಕುಮಟಾ : ಯುಗಾದಿ ಉತ್ಸವಸಮಿತಿಯು ಕಳೆದ ಹದಿಮೂರು ವರ್ಷಗಳಿಂದ ಸಾಮೂಹಿಕವಾಗಿ ಯುಗಾದಿ ಉತ್ಸವವನ್ನು ಶೋಭಾಯಾತ್ರೆ,ಧಾರ್ಮಿಕಸಭೆ,ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಆಚರಿಸುತಿದ್ದು,ಈ ವರ್ಷ ಯುಗಾದಿ ಉತ್ಸವದ ಅಂಗವಾಗಿ ತಾಲೂಕಿನ ಆಯ್ದ ಭಜನಾತಂಡಗಳಿಂದ ಭಜನಾಸ್ಪರ್ಧೇಯನ್ನು ನೆಲ್ಲಿಕೇರಿ ಶ್ರೀಮಹಾಸತಿ ಸಭಾಭವನದಲ್ಲಿ ಎರ್ಪಡಿಸಿತ್ತು.
ಭಜನಾಸ್ಪರ್ಧೇಯನ್ನು ಉದ್ಘಾಟಿಸಿ ಮಾತನಾಡಿದ ಕುಮಟಾ ಯುಗಾದಿ ಉತ್ಸವಸಮಿತಿಯ ಸಂಚಾಲಕರಾದ ಶ್ರೀಮುರಳಿಧರ ಪ್ರಭುರವರು- ಯುಗಾದಿ ಉತ್ಸವ ಸಮಿತಿ ಕಳೆದ ಹತ್ತಾರು ವರ್ಷಗಳಿಂದ ಹಿಂದು ಸಮಾಜದ ಎಲ್ಲಾ ಬಾಂಧವರು ಸೇರಿ ಯುಗಾದಿ ಹೊಸವರ್ಷವನ್ನು ಶೋಭಾಯಾತ್ರೆ, ಧಾರ್ಮಿಕಸಭೆ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲದೆ, ಈ ಹಿಂದೆ ನವದಂಪತಿಗಳಿಗೆ ದಾಂಪತ್ಯದೀವಿಗೆ ಎಂಬ ತರಬೇತಿ ಕಾರ್ಯಕ್ರಮ,ವಿದ್ಯಾರ್ಥಿಗಳಿಗೆ ವೃತ್ತಿತರಬೇತಿ,ನಗರವ್ಯಾಪ್ತಿಯಲ್ಲಿರುವ ಮೂರು ಕೆರೆಗಳ ಅಭಿವೃದ್ಧಿ,ಸಾಧಕರಿಗೆ ಸನ್ಮಾನ ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಈ ವರ್ಷ ನಮ್ಮ ತಾಲೂಕಿನಲ್ಲಿರುವ ಭಜನಾತಂಡಗಳ ನಡುವೆ ಸ್ಪರ್ಧೇ ಮಾಡಬೇಕೆಂಬ ಸಮಿತಿಯ ಆಶಯದಂತೆ,ಈ ಭಜನಾಸ್ಪರ್ಧೇಯನ್ನು ಎರ್ಪಡಿಸಿದ್ದೇವೆ.ಭಜನೆ ನಮ್ಮ ಸಂಸ್ಕøತಿಯ ಒಂದು ಭಾಗವಾಗಿದ್ದು,ಇದಕ್ಕೆ ಪ್ರಾಚೀನ ಇತಿಹಾಸವಿದೆ.ಭಗವಂತನ್ನು ಒಲಿಸಿಕೊಳ್ಳುವ ನವವಿಧ ಭಕ್ತಿಯಲ್ಲಿ ಭಜನೆ ಕೂಡ ಒಂದಾಗಿದ್ದು,ಸುಲಭದ ಮಾರ್ಗವಾಗಿದೆ.ಭಜನೆಮಾಡುತ್ತಾ ಮಾಡುತ್ತಾ ಭಕ್ತಿರಸದಲ್ಲಿ ತನ್ಮಯರಾಗುತ್ತಾ ಅದರಲ್ಲೇ ಮೋಕ್ಷವನ್ನು ಕಂಡವರಿದ್ದಾರೆ. ಒಂದುಕಾಲದಲ್ಲಿ ಪ್ರತಿ ಮನೆಮನೆಯಲ್ಲೂ ಮುಸ್ಸಂಜೆಯಾಗುತಿದ್ದಂತೆ ಭಜನೆಗಳು ನೆಡೆಯುತಿದ್ದವು.ಹಿಂದೆ ಇದ್ದಂತೆ ಕೂಡು ಕುಟುಂಬಗಳು ನಿಧಾನವಾಗಿ ಮರೆಯಾದ ಪರಿಣಾಮವಾಗಿ, ಇಂದು ಎಲ್ಲಾ ಮನೆಗಳಲ್ಲಿ ಭಜನೆ ಬಹಳ ಅಪರೂಪವಾಗಿದೆ.ಆದರೂ ಕೆಲಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಭಜನೆಗಳನ್ನು ಕಾಣಬಹುದು. ಕಣ್ಮರೆಯಾಗುತ್ತಿರುವ ಈ ಸಂಪ್ರದಾಯವನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಈ ಸ್ಪರ್ಧಾಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿ,ಭಾಗವಹಿಸಿದ ಎಲ್ಲರಿಗೂ ಶುಭಕೋರಿದರು.

RELATED ARTICLES  ಕಾಂಗ್ರೇಸಿನ ನಿದ್ದೆಗೆಡಿಸಿದರಾ ಬಿಜೆಪಿ ಫೈರ್ ಅನಂತ ಕುಮಾರ ಹೆಗಡೆ?

ತಾಲೂಕಿನ ಆಯ್ದ ಎಂಟುತಂಡಗಳು ಸ್ಪರ್ಧೇಯಲ್ಲಿ ಭಾಗವಹಿಸಿದ್ದವು.ಸ್ವರಾಧಾರ ಭಜನಾಮಂಡಳಿ ಕೂಜಳ್ಳಿ ತಂಡವು ಆರುಸಾವಿರ ರೂಪಾಯಿಯೊಂದಿಗೆ ಪ್ರಥಮಬಹುಮಾನವನ್ನು,ಶ್ರೀಶಾಂತೇರಿಕಾಮಾಕ್ಷಿ ಮಹಿಳಾ ಭಜನಾಮಂಡಳಿ ಕುಮಟಾ ತಂಡವು ನಾಲ್ಕುಸಾವಿರ ರೂದೊಂದಿಗೆ ದ್ವಿತೀಯಬಹುಮಾನವನ್ನು,ಶ್ರೀವೆಂಕಟರಮಣ ಭಜನಾಮಂಡಳಿ ಕುಮಟಾ ತಂಡವು ಎರಡುಸಾವಿರ ಮೊತ್ತದೊಂದಿಗೆ ತೃತೀಯಬಹುಮಾನವನ್ನು ಪಡೆದುಕೊಂಡವು.ಯುಗಾದಿ ಉತ್ಸವದ ದಿನದಂದು ಬಹುಮಾನವನ್ನು ವಿತರಿಸಲಾಗುವುದು.
ಶ್ರೀಮತಿ ಸುಧಾ ಆಚಾರಿ,ರಂಜನಾ ಆಚಾರಿ, ಕು.ಅಶ್ವಿನಿ ಈ ಸ್ಪರ್ಧೇಯ ನಿರ್ಣಾಯಕರಾಗಿ,ಸ್ಪರ್ಧೇಯನ್ನು ನೆಡೆಸಿಕೊಟ್ಟರು.
ಕೋವಿಡ್ ನಿಯಮದಂತೆ ಅತ್ಯಂತ ಶಿಸ್ತುಬದ್ಧವಾಗಿ ನೆಡೆದ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಶ್ರೀ ಎಸ್ ಜಿ ನಾಯ್ಕ,ಕಾರ್ಯದರ್ಶಿ ಶ್ರೀ ಆನಂದು ನಾಯ್ಕ,ಕೋಶಾಧ್ಯಕ್ಷ ಶ್ರೀ ಜಿ ಎಸ್ ಹೆಗಡೆ,ಡಾ.ಸುರೇಶ ಹೆಗಡೆ,ಶ್ರೀ ವಿಠ್ಠಲ ನಾಯಕ,ರೋಹಿದಾಸ ಗಾವಡಿ,ಸುಧಾ ಶಾನಭಾಗ್,ಎಮ್ ಆರ್ ಭಟ್ಟ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 145 ಕರೊನಾ ಕೇಸ್ : ಐವರು ಸಾವು

ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಅಂಜನಾ ನಾಯ್ಕ ಪ್ರಾರ್ಥಿಸಿದರು. ಶ್ರೀ ಅರುಣ ಮಣಕೀಕರ್ ಮತ್ತು ಶ್ರೀ ರಾಜು ಶೆಟ್ಟಿ ನಿರೂಪಿಸಿದರು.