ಸಿದ್ದಾಪುರ: ಇಲ್ಲಿನ ಸಿದ್ದಾಪುರ- ಕುಮಟಾ ರಸ್ತೆಯ ಬೇಡ್ಕಣಿ ಸಮೀಪ ಬೈಕ್-ಟಿಪ್ಪರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.
ಸೊರಬಾ ತಾಲೂಕಿನ ಚಂದ್ರಗುತ್ತಿ ಚನ್ನಪಟ್ಟಣದ ಕಾಲೇಜ್ ವಿದ್ಯಾರ್ಥಿನಿ ರಶ್ಮಿ ಜೆ.ಪಿ. ಹಾಗೂ ಸೊರಬಾ ಚಿಕ್ಕಶಕುನ ಗ್ರಾಮದ ಸಚಿನ್ ರಾಮಪ್ಪ ಹೆಚ್ ಗಾಯಗೊಂಡವರಾಗಿದ್ದಾರೆ.
ಮೋಟಾರ್ ಸೈಕಲ್‍ನ್ನು ಯುವತಿ ಚಲಾಯಿಸುತ್ತಿದ್ದು, ತಿರುವ ರಸ್ತೆಯಲ್ಲಿ ವೇಗವಾಗಿ ಬಂದ ಟಿಪ್ಪರ್ ಗೆ ಮುಖಾಮುಖಿ ಡಿಕ್ಕಿಯಾಗಿದೆ ಎಂದು ಪೆÇಲೀಸ್‍ರು ಪ್ರಕರಣ ದಾಖಲಿಸಿಕೊಂಡಿದ್ದಾರೆ.