ಹೊನ್ನಾವರ: ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಗಾಯಗೊಂಡಿರುವ ಘಟನೆ ಹೊನ್ನಾವರದ ಪ್ರಭಾತನಗರದಲ್ಲಿ ನಡೆದಿದೆ.
ಬೈಕ್ ಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಂದೆ ಜೊತೆ ಪ್ರವೇಶ ಪತ್ರ ತರಲು ಹೊರಟ ವಿದ್ಯಾರ್ಥಿನಿಯೊಬ್ಬಳು ಗಾಯಗೊಂಡ ಘಟನೆ ಇದಾಗಿದೆ.
ಪ್ರವೇಶ ಪತ್ರ ತರಲು ಹೊರಟಿದ್ದ ವೇಳೆ ನಡುರಸ್ತೆಯಲ್ಲೇ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಎರಡು ಬೈಕ್ ನೆಲಕ್ಕುರುಳಿದೆ.
ಪರಿಣಾಮ ತಂದೆ ಜೊತೆ ಹಿಂದೆ ಕುಳಿತಿದ್ದ ವಿದ್ಯಾರ್ಥಿನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊರ್ವ ಬೈಕ್‌ನಲ್ಲಿದ್ದ ವ್ಯಕ್ತಿಯ ಭುಜಕ್ಕೂ ಗಾಯವಾಗಿದೆ ಎಂದು ಸ್ಥಳೀಯ ಮಾಹಿತಿ ಲಭ್ಯವಾಗಿದೆ.