ಕುಮಟಾ: ಅತಿ ವೇಗದಲ್ಲಿದ್ದ ಟಿಪ್ಪರ್ ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಯ ಮೇಲೆ ಬಿದ್ದು ಎದೆಗೆ ಹಾಗೂ ತಲೆಗೆ ಗಂಭೀರ ಗಾಯಗೊಂಡಿದ್ದ ಘಟನೆ ಕುಮಟಾ ಪಟ್ಟಣದ ಮೂರೂರು ಕ್ರಾಸ್ ಬಳಿ ನಡೆದಿತ್ತು.
ಅಪಘಾತಕ್ಕೆ ಒಳಗಾಗಿದ್ದ ಸಿದ್ದನಬಾವಿಯ ನಿವಾಸಿ ಉಮಾಕಾಂತ ಗಣೇಶ ವೆಂಗುರ್ಲೇಕರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೂರೂರು ಕ್ರಾಸ್ ಬಳಿ ಬೈಕ್ ಮೇಲೆ ರಸ್ತೆ ದಾಟುತ್ತಿರುವಾಗ ಟಿಪ್ಪರ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಅತಿ ವೇಗದಲ್ಲಿದ್ದ ಟಿಪ್ಪರ್ , ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಯ ಮೇಲೆ ಬಿದ್ದು ಎದೆಗೆ ಹಾಗೂ ತಲೆಗೆ ಗಂಭೀರ ಗಾಯವಾಗಿತ್ತು, ನಂತರ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿತ್ತು.
ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಬೈಕ್ ಸವಾರ ಮೃತಪಟ್ಟಿದ್ದಾನೆ. ಈ ಘಟನೆಗೆ ಸಂಬoಧಿಸಿದoತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರಕನ್ನಡ ಸುಸಜ್ಜಿತ ಆಸ್ಪತ್ರೆಯ ಕೂಗೂ ಈ ಘಟನೆಯ ನಂತರ ಮತ್ತೆ ಸಾರ್ವಜನಿಕ ವಲಯದಲ್ಲಿ ಪ್ರತಿಧ್ವನಿಸಿದೆ.