ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಮಾಹಾ ಸ್ಪೋಟವಾಗಿದೆ . ಇಂದು ಜಿಲ್ಲೆಯಲ್ಲಿ 142 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಕಾರವಾರ ನಗರದಲ್ಲಿ ಒಂದರಲ್ಲೇ 86 ಜನರಿಗೆ ಕರೋನಾ ಪಾಸಿಟಿವ್ ಬಂದಿದೆ. ಇದರಲ್ಲಿ ಬಹುತೇಕರು ಕದಂಬ ನೌಕಾನೆಲೆಯಲ್ಲಿ ದಿನಗೂಲಿ ಕೆಲಸ ಮಾಡುವ ಕಾರ್ಮಿಕರು ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಈವರೆಗೆ 15424 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,14798 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ.189ಜನರು ಕರೋನಾ ದಿಂದ ಸಾವು ಕಂಡವರಾಗಿದ್ದಾರೆ.
ಕಾರವಾರ ೮೬, ಅಂಕೋಲಾ ೬ , ಕುಮಟಾ ೨, ಹೊನ್ನಾವರ ೨, ಭಟ್ಕಳ ೧, ಶಿರಸಿ ೭, ಸಿದ್ದಾಪುರ ೧, ಯಲ್ಲಾಪುರ ೨, ಮುಂಡಗೋಡ ೫, ಹಳಿಯಾಳ ೧೮, ಜೋಯ್ಡಾ ೧೨ ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.