ದೇವಾಲಯ : ಶ್ರೀ ಮಳಲಿ ಲಕ್ಷ್ಮೀ ದೇವಿ

ವಿಳಾಸ :ಮಳಲಿ, ಕರ್ನಾಟಕ – 573220
ದೂರವಾಣಿ :೯೪೮೩೯೮೫೪೦೮
ವೆಬ್ಸೈಟ್ :Sri Malali Lakshmidevi Temple
ಒಂದು ರಾತ್ರಿ ವಿಜಯನಗರದ ಒಬ್ಬ ಸಾಹುಕಾರ ಗೌಡನ ಮನೆಗೆ ಮೂರು ಜನ ಕಳ್ಳರು ನುಗ್ಗಿ ಮೂರೂ ಜನರು ಮೂರು ಪೆಟ್ಟಿಗೆಗಳನ್ನು ಕಳ್ಳತನ ಮಾಡುತ್ತಾರೆ. ಆ ಮೂರೂ ಪೆಟ್ಟಿಗೆಗಳನ್ನು ಮಳ್ಳಳ್ಳಿ ಎಂಬ ಊರಿನ ಬಳಿ ಒಡೆದಾಗಿ ಒಂದರಲ್ಲಿ ವರ ಹೊನ್ನು, ಇನ್ನೊಂದರಲ್ಲಿ ಆಭರಣಗಳು, ಮತ್ತೊಂದರಲ್ಲಿ ಮಳಲಿಯಮ್ಮನ ವಿಗ್ರಹವು ದೊರೆಯುತ್ತದೆ. ವಿಗ್ರಹವನ್ನು ಪಡೆದ ಕಳ್ಳನು ಬೇಸರದಿಂದ ಅದನ್ನು ಯಗಚಿ ಗುತ್ತಿಯ ಬಳಿ ಎಸೆದು ಹೋಗುತ್ತಾನೆ. ಮಾರನೆಯ ದಿನ ಬೆಳಿಗ್ಗೆ ಅಲ್ಲಿ ಹುತ್ತ ಬೆಳೆದುಕೊಳ್ಳುತ್ತದೆ. ಮಳಲಿಯಲ್ಲಿದ್ದ 300 ಮನೆಗಳ ಪೈಕಿ ಮಾಳಿಗೇಗೌಡನ ಮನೆಯೂ ಒಂದು. ಅವನ ಮನೆಯಲ್ಲಿ ಒಬ್ಬ ಆಳು ನಿತ್ಯವೂ ಅವರ ಮನೆಯಲ್ಲಿದ್ದ ದನಗಳನ್ನು ಮೇಯಿಸಲು ಹೋಗುತ್ತಿದ್ದನು. ಅವುಗಳಲ್ಲಿ ಒಂದು ದನ ನಿತ್ಯವೂ ಬಂದು ಮನೆಯಲ್ಲಿ ರಕ್ತವನ್ನು ಕರೆಯುತ್ತಿತ್ತು. ಇದರಿಂದ ಮನೆಯವರಿಗೆ ಆಶ್ಚರ್ಯವಾಗಿ ಹುಡುಗನನ್ನು ಶಿಕ್ಷಿಸಿದರು. ಇದನ್ನು ಪರೀಕ್ಷಿಸಲು ಆ ಹುಡುಗನು ಆ ದಿನವೆಲ್ಲ ಹಸುವಿನ ಮೇಲೆ ಗಮನವಿಟ್ಟಿದ್ದನು. ಸುಮಾರು ಮೂರು ಗಂಟೆಯ ಹೊತ್ತಿಗೆ ಹಸು ತುಂಬಿ ಹರಿಯುವ ಹಳ್ಳವನ್ನು ಈಜಿದಾಗ ಆ ಹುಡುಗನೂ ಜೊತೆಗೆ ಈಜುತ್ತಾನೆ. ಆಗ ಆ ಹಸುವು ಕಳ್ಳ ಎಸೆದಿದ್ದ ವಿಗ್ರಹವಿದ್ದ ಹುತ್ತಕ್ಕೆ ಹೋಗಿ ನಾಲ್ಕು ಮೊಲೆಗಳಿಂದಲೂ ಒಂದೇ ಬಾರಿಗೆ ಹಾಲು ಕರೆಯುತ್ತದೆ. ಹುಡುಗನನ್ನು ಪರೀಕ್ಷಿಸಲು ಹಿಂಬಾಲಿಸಿದ ಮಾಳಿಗೇಗೌಡನೇ ಸ್ವಯಂ ನೋಡುತ್ತಾನೆ. ಅದೇ ದಿನ ರಾತ್ರಿ ಮಾಳಿಗೆಗೌಡನ ಕನಸಿನಲ್ಲಿ ಆ ಹುತ್ತದಲ್ಲಿನ ದೇವಿಯು ಕಾಣಿಸಿಕೊಂಡು ತಾನು ಮಳಲಿಯಮ್ಮನೆಂದು, ವಿಜಯನಗರದಿಂದ ಬಂದವಳೆಂದೂ, ನಾಳೆ ತಾನು ಬಂದು ಮಾದರ ಹಳ್ಳಿಯಲ್ಲಿ ಗಿಡ್ಡಮ್ಮನೆಂಬ ಹೆಸರಿನಲ್ಲಿ ನೆಲಸುತ್ತೇನೆಂದು ಹೇಳುತ್ತಾಳೆ. ಅದಕ್ಕೆ ಮಾಳಿಗೇಗೌಡನು ನೀನು ಬರುವುದಕ್ಕೆ ಸೂಚನೆ ಏನು ಎಂದು ಕೇಳಲು ನಿಮ್ಮೂರ ಹಿರಿಕೆರೆಯು ಏಳು ಕಡೆ ಒಡೆಯುವುದು ಎಂದಳಂತೆ. ಮಾರನೆಯ ದಿನ ಬೆಳಿಗ್ಗೆ ಊರಿಗೆ ಊರೆ ದಿಗ್ಭ್ರಮೆಯಾಗುವಂತೆ ಹಿರಿಕೆರೆಯು ಏಳು ಕಡೆ ಏಳು ಭಾಗವಾಗಿ ಒಡೆಯಿತಲ್ಲದೇ ಲಕ್ಷ್ಮೀ ದೇವಿಯು ಗಿಡ್ಡಮ್ಮನಾಗಿ ಊರ ಹೊರಭಾಗದಲ್ಲಿ ದಕ್ಷಿಣ ದಿಕ್ಕಿನಲ್ಲಿ ಒಡೆದು ಮೂಡಿದಳಂತೆ. ಕೆರೆ ಒಡೆದ ಗುರುತು ಇಂದಿಗೂ ಇದೆ. ದೇವಿ ಮೂಡಿದ ಘಟ್ಟದ ಕೆಳಗೆ ಮುತ್ತು ರತ್ನ ವ್ಯಾಪರಕ್ಕೆ ಹೊರಟಿದ್ದ ವ್ಯಾಪಾರಿಗಳು ಬಂದು ಅರಳೀಮರದ ಬಳಿ ತಮ್ಮ ಎತ್ತುಗಳನ್ನು ಕಟ್ಟಿಕೊಂಡು ವಿಶ್ರಾಂತಿ ತೆಗೆದುಕೊಂಡು ಮಾರನೆಯ ದಿನ ಹೊರಡಬೇಕೆಂದಿದ್ದಾಗ ಎತ್ತುಗಳು ಹೊಟ್ಟೆ ಊದಿಕೊಂಡು ಏಳಲಾರಲಾದವು.

RELATED ARTICLES  ನೇಣಿಗೆ ಶರಣಾದ ಯುವತಿ.

ವ್ಯಾಪಾರಿಗಳು ಗಾಬರಿಯಿಂದಿದ್ದಾಗ ಊರ ಬೀದಿಯ ಕಡೆಯಿಂದ ಅಡ್ಡ ಕುಂಕುಮವನ್ನಿಟ್ಟುಕೊಂಡು ತಲೆಯ ಮೇಲೆ ಚಿಕ್ಕ ಕುಕ್ಕೆಯನ್ನು ಹೊತ್ತುಕೊಂಡು ಕೊರವಂಜಿ ವೇಷದ ತೇಜಸ್ಸುಳ್ಳ ಹೆಂಗಸೊಬ್ಬಳು “ಯಾರಾದರು ಶಾಸ್ತ್ರ ಕೇಳುತ್ತೀರಾ ಎಂದು ಕೂಗುತ್ತಾ ಬರುತ್ತಾಳೆ. ವ್ಯಾಪಾರಿಗಳು ತಮ್ಮ ಕಷ್ಟವನ್ನು ಹೇಳಿ ಪರಿಹಾರ ಸೂಚಿಸಬೇಕೆಂದು ಕೇಳಿದಾಗ, ಆಕೆಯು ಸಮೀಪದ ಹುತ್ತವನ್ನು ತೋರಿಸಿ ಅದರಲ್ಲಿ ಮಳಲಿಯಮ್ಮ ಎಂಬ ದೇವಿ ನೆಲಸಿದ್ದಾಳೆ, ಅವಳಿಗೊಂದು ಗುಡಿ ಕಟ್ಟಿಸುವುದಾದರೆ ನಿಮ್ಮ ಎತ್ತುಗಳು ಖಾಯಿಲೆಯಿಂದ ಗುಣವಾಗುವುದಲ್ಲದೆ ನಿಮ್ಮ ಮುತ್ತಿಗೂ ಒಳ್ಳೆ ಬೆಲೆ ಸಿಗುತ್ತದೆ ಎಂದು ಹೇಳಿದವಳೇ ಕಣ್ಣಿಗೆ ಕಾಣಿಸದವಳಾಗುತ್ತಾಳೆ.

RELATED ARTICLES  ಬೈಕ್ ಇದ್ದಕ್ಕಿದ್ದಂತೆ ಮಾಯ : ಘಟನೆ ಹಿಂದೆ ಭೂತದ ಕೈವಾಡ..?

ವ್ಯಾಪಾರಿಗಳು ಭಕ್ತಿಯಿಂದ ಅದೇ ರೀತಿಯಾಗಿ ಹರಕೆಯನ್ನು ಹೊರಲಾಗಿ ಎತ್ತುಗಳು ಖಾಯಿಲೆಯಿಂದ ಗುಣವಾಯಿತಲ್ಲದೆ ಮುತ್ತು ರತ್ನಗಳ ಬೆಲೆಯೂ ಏರಿ ವ್ಯಾಪಾರದಲ್ಲಿ ಬಹಳ ಲಾಭವಾಯಿತು. ಅವರು ಆನಂದದಿಂದ ಒಂದಂಕಣದ ಗುಡಿಯನ್ನು ಒಂದೇ ದಿನದಲ್ಲಿ ಕಟ್ಟಿಸಿ ಹೋಗುತ್ತಾರೆ. ದೇವಾಲಯದ ಉಳಿದ ಭಾಗಗಳನನ್ನು ಕಂದಲಿಯವರು ಕಟ್ಟಿಸಿದರೆಂದೂ ಹೇಳುತ್ತಾರೆ.