ಭಟ್ಕಳ: ಜಗತ್ತು ಬದಲಾಗುತ್ತಿದೆ, ಪ್ರತೀ ಕ್ಷಣ ಕ್ಷಣದ ಸಮಯಾವಕಾಶವೂ ಅತ್ಯಂತ ಮುಖ್ಯ ಎಂಬಂತಾಗಿದೆ. ಜೊತೆಗೆ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಈ ಯುಗದಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಒಂದು ಬೆಳವಣಿಗೆ ಕಾಣುತ್ತಿರುವ ಉದ್ಯಮವಾಗಿದ್ದು, ಇಂದು ಭಾರತ ಮತ್ತು ವಿಶ್ವದಲ್ಲಿ ಲಕ್ಷಾಂತರ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತಿದೆ. ಹೊಸ ಉದ್ಯಮ ನಿರೀಕ್ಷೆ ಇರುವವರು ಈ ಬಗ್ಗೆ ಕಾರ್ಯ ಮಾಡಬಹುದು ಎಂದು ಶಿಕ್ಷಕ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್‌ನ ತರಬೇತುದಾರರಾದ ಶ್ರೀಧರ ಶೇಟ್, ಶಿರಾಲಿ ಹೇಳಿದರು.

RELATED ARTICLES  ಶಿರಸಿಯಲ್ಲಿ 22 ಶಂಕಿತ ಡೆಂಘೀ ಪ್ರಕರಣ : ಆರು ಜನರಲ್ಲಿ ಡೆಂಘೀ ಇರುವುದು ದೃಢ

ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನವರು ಹಮ್ಮಿಕೊಂಡಿದ್ದ ಇವೆಂಟ್ ಮ್ಯಾನೇಜ್‌ಮೆಂಟ್ ಕಾರ್ಯಗಾರದಲ್ಲಿ ಮಾರ್ಗದರ್ಶನ ಮಾಡಿ ಮಾತನಾಡಿದ ಅವರು, “ಸೂಕ್ತ ಯೋಜನೆ, ಸಂವಹನ-ಕೌಶಲ್ಯ, ಚುರುಕು ಆಲೋಚನೆ ಮತ್ತು ಸೂಕ್ತ ನಿರ್ವಹಣೆಯಂತಹ ಕೌಶಲ್ಯವನ್ನು ವಿದ್ಯಾರ್ಥಿ ಜೀವನದಲ್ಲಿ ಅಭಿವೃದ್ಧಿಪಡಿಸಿಕೊಂಡರೆ ಇವೆಂಟ್ ಮ್ಯಾನೇಜ್‌ಮೆಂಟ್‌ನಂತಹ ಕಾರ್ಯವನ್ನು ಸುಲಭವಾಗಿ ನಿರ್ವಹಿಸಬಹುದಾಗಿದ್ದು, ಈ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಉತ್ತಮ ಅವಕಾಶಗಳಿವೆ” ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

RELATED ARTICLES  ಶಾಂತಿಕಾ ಪರಮೇಶ್ವರಿ ದೇವ ಸನ್ನಿಧಿಯಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ : ಕಾರ್ಯಕ್ರಮದ ಪೂರ್ಣ ವಿವರ ಇಲ್ಲಿದೆ ನೋಡಿ.

ಈ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಮುಖ್ಯ ಶಿಕ್ಷಕರಾದ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ ಹಾಜರಿದ್ದರು. ಸಲಹೆಗಾರರಾದ ಆರ್.ಎಚ್ ದೇಶಭಂಡಾರಿ ಹಾಜರಿದ್ದರು. ಪ್ರಕಾಶ ಗಾವಡಿ ಸ್ವಾಗತಿಸುವ ಮೂಲಕ ಕಾರ್ಯಕ್ರಮ ನಿರೂಪಿಸಿದರು, ಚಿದಾನಂದ ಭಂಡಾರಿ ವಂದಿಸಿದರು.