ಭಟ್ಕಳ : ಶಾಲೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಬಾಲಕಿಯೋರ್ವಳು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ತಾಲೂಕಿನ ಹುರುಳಿಸಾಲನಲ್ಲಿ ನಡೆದಿದೆ .
ನಾಪತ್ತೆಯಾದ ಬಾಲಕಿ ರಕ್ಷಿತಾ ಲಕ್ಷಣ ನಾಯ್ಕ (15) ಎಂದು ತಿಳಿದು ಬಂದಿದೆ. ಬಾಲಕಿ ಏಪ್ರಿಲ್ 8 ಗುರುವಾರ ಬೆಳಿಗ್ಗೆ ತನ್ನ ಮನೆಯಿಂದ ಸೋನಾರಕೇರಿ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು. ಈವರೆಗೆ ಮನೆಗೂ ಬಾರದೆ. ತನ್ನ ಸಂಬಂಧಿಕರ ಮನೆಗೆ ಹೋಗದೆ ಎಲ್ಲಿಯೋ ಹೋಗಿ ಕಾಣಿಯಾಗಿರ ಬಹುದು ಅಥವಾ ಅವಳನ್ನು ಯಾರೋ ಅಪಹರಣ ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯ ಇರುವುದರಿಂದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಬಾಲಕಿಯ ತಂದೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪಿ ಎಸ್.ಐ ಭರತ್ ತನಿಖೆ ಕೈಕೊಂಡಿದ್ದಾರೆ.