ಭಟ್ಕಳ: ನಡು ರಸ್ತೆಗೆ ಒಮ್ಮಿಂದೊಮ್ಮೆಲೆ ಬರುವ ಅದೆಷ್ಟೋ ನಾಯಿಗಳ ಹಾವಳಿಯಿಂದ ವಾಹನ ಸವಾರರು ತೊಂದರೆ ಅನುಭವಿಸುವುದು ಸಾಮಾನ್ಯ ಎಂಬಂತಾಗಿದೆ. ಅದೇ ರೀತಿಯ ಅಪಘಾತದಿಂದ ಯುವಕನೋರ್ವ ಪ್ರಾಣ ಕಳೆದುಕೊಂಡ ಘಟನೆ ವರದಿಯಾಗಿದೆ.
ಭಟ್ಕಳ ತಾಲೂಕಿನ ಬಸ್ತಿಯಲ್ಲಿ ನಾಯಿ ತಪ್ಪಿಸಲು ಹೋಗಿ ಬೈಕ್ ನಿಯಂತ್ರಿಸಲಾಗದೆ ಬೈಕನಿಂದ ಬಿದ್ದು ಯುವಕನೊರ್ವ ಸಾವನ್ನಪಿರುವ ಘಟನೆ ನಡೆದಿದೆ. ಮೃತ ಯುವಕ ಮಂಜುನಾಥ ಶನಿಯಾರ ನಾಯ್ಕ ಎನ್ನಲಾಗಿದ್ದು ಈತ ಬಿದ್ರಮನೆ ಕಾಯ್ಕಿಣಿ ನಿವಾಸಿ ಎಂದು ತಿಳಿದು ಬಂದಿದೆ.
ಈತ ಗುರುವಾರ ರಾತ್ರಿ 7 ಗಂಟೆಗೆ ಪಲ್ಸರ್ ಬೈಕ್ ನಲ್ಲಿ ಬಸ್ತಿಕಡೆಯಿಂದ ತನ್ನ ಮನೆಯಾದ ಬಿದ್ರಮನೆ ಕಡೆಗೆ ಸಿಮೆಂಟ್ ರಸ್ತೆ ಮೇಲೆ ಅತಿ ವೇಗದಿಂದ ಬೈಕ್ ಚಲಾಯಿಸಿಕೊಂಡು ಬಂದಿದ್ದ ಎನ್ನಲಾಗಿದ್ದು, ಈ ವೇಳೆ ಒಮ್ಮೆಲೇ ನಾಯಿ ಅಡ್ಡ ಬಂದಿರುವುದರಿoದ ನಾಯಿ ತಪಿಸಲು ಹೋಗಿ ಬೈಕ್ ನಿಯಂತ್ರಿಸಲಾಗದೆ ಬೈಕ್ ನಿಂದ ಕೆಳಗೆ ಬಿದ್ದಿದ್ದಾನೆ.
ಸಿಮೆಂಟ್ ರಸ್ತೆಯಲ್ಲಿ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ. ಗಾಯಗೊಂಡಿದ್ದ ಯುವಕನನ್ನು ತಕ್ಷಣ ಸಾರ್ವಜನಿಕರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾನೆ . ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.