ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಹಾಗೂ ಸಾಲ್ಕಣ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ., ಸಾಲ್ಕಣ ಇವರ ಸಹಯೋಗದೊಂದಿಗೆ ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‍ನ ಘಟಕವನ್ನು ಸಾಲ್ಕಣ ಸೇವಾ ಸಹಕಾರಿ ಸಂಘದ ಆವಾರದಲ್ಲಿ ದಿ:08.04.2021ರ ಬೆಳಿಗ್ಗೆ ದೀಪ ಬೆಳಗಿಸುವುದರ ಮೂಲಕವಾಗಿ ಟಿ.ಎಸ್.ಎಸ್. ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಹೆಗಡೆ ಕಡವೆ ಇವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಟಿ.ಎಸ್.ಎಸ್. ನಿರ್ದೇಶಕರುಗಳು, ಸಿಬ್ಬಂದಿಗಳು ಹಾಗೂ ಸಾಲ್ಕಣ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ಭಟ್ಟ ಹಂದಿಮನೆ, ಹಾಗೂ ನಿರ್ದೇಶಕರುಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಾಲ್ಕಣ ಘಟಕದಲ್ಲಿರುವ ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‍ನಲ್ಲಿ ದಿನಸಿಗಳು, ಗೃಹಬಳಕೆ ಉತ್ಪನ್ನಗಳು, ಸ್ಟೀಲ್ ಸಾಮಗ್ರಿಗಳು, ಪಶು ಆಹಾರ, ಹಾಗೂ ಸಮಗ್ರ ಕೃಷಿ ಅಗತ್ಯತೆಗಳು ಲಭ್ಯವಿರುವುದಾಗಿ ಹಾಗೂ ಶುಭಾರಂಭದ ಕೊಡುಗೆಯಾಗಿ ದಿ:30.04.2021ರ ವರೆಗೆ ರೂ.100ಕ್ಕೂ ಹೆಚ್ಚಿನ ಖರೀದಿಗಳ ಮೇಲೆ 5% ಕ್ಯಾಶ್ ಬ್ಯಾಕ್ ಹಾಗೂ ದಿ:31.05.2021ರ ವರೆಗೆ ಪ್ರತಿ 2 ಚೀಲ ಧಾರಾ ಪಶು ಆಹಾರ ಖರೀದಿಗೆ 1 ಲಕ್ಕಿ ಡಿಪ್ ಕೂಪನ್ ಪಡೆದು ಆಕರ್ಷಕ ಬಹುಮಾನ ಗೆಲ್ಲಬಹುದಾಗಿದೆ. ಸದಸ್ಯರು ಹಾಗೂ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.