ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಕರೋನಾ ಇದೀಗ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದ್ದು, ವ್ಯಾಪಕವಾಗಿ ಹಬ್ಬುತ್ತಿರುವಂತೆ ಗೋಚರಿಸುತ್ತಿದೆ.
ಇಂದು ಜಿಲ್ಲೆಯಲ್ಲಿ 65 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಕಾರವಾರ ನಗರದಲ್ಲಿ ಒಂದರಲ್ಲೇ 35 ಜನರಿಗೆ ಕರೋನಾ ಪಾಸಿಟಿವ್ ಬಂದಿದೆ.
ಕಾರವಾರ ೩೫, ಅಂಕೋಲಾ ೨ , ಕುಮಟಾ ೧೧, ಹೊನ್ನಾವರ ೩, ಭಟ್ಕಳ ೧, ಶಿರಸಿ ೦, ಸಿದ್ದಾಪುರ ೬, ಯಲ್ಲಾಪುರ ೦, ಮುಂಡಗೋಡ ೧, ಹಳಿಯಾಳ ೫, ಜೋಯ್ಡಾ ೧ ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.
ಶಿರಸಿ ಇಂದು ಒಂದು ಸಾವು ಸಂಭವಿಸಿದ್ದು ಇದರೊಂದಿಗೆ ಸಾವಿನ ಸಂಖ್ಯೆ 190 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಈವರೆಗೆ 15490 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,14876 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ.190 ಜನರು ಕರೋನಾ ದಿಂದ ಸಾವು ಕಂಡವರಾಗಿದ್ದಾರೆ.
ಜನತೆ ನಿರ್ಲಕ್ಷ್ಯ ವಹಿಸಿದಂತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.