ಕುಮಟಾ : ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 138/2002 ಮತ್ತು 139/2002  ಕಲಂ  420 ಐಪಿಸಿ ಪ್ರಕರಣದಲ್ಲಿ ಕಳೆದ 17 ವರ್ಷಗಳಿಂದ ತಲೆ ಮರೆಸಿಕೊಂಡು ತುಮಕೂರಿನ ತಿಪಟೂರು ತಾಲ್ಲೂಕಿನ ಹಳ್ಳಿಯೊಂದರಲ್ಲಿ ವಾಸಮಾಡಿಕೊಂಡಿದ್ದ ಆರೋಪಿ ಶಂಕರ ವಿಷ್ಣು ಹೆಗಡೆ ಕವಲಕ್ಕಿ, ಹೊನ್ನಾವರ ಈತನಿಗೆ ಮಾನ್ಯ ಎಸ್ ಪಿ ಸಾಹೇಬರು ಕಾರವಾರ, ಮಾನ್ಯ ಎಡಿಶನಲ್ ಎಸ್ ಪಿ ಸಾಹೇಬರು ಕಾರವಾರ ಹಾಗೂ ಮಾನ್ಯ ಡಿಎಸ್ಪಿ ಭಟ್ಕಳ ರವರ ಮಾರ್ಗದರ್ಶನದಲ್ಲಿ ಶ್ರೀ ಶಿವಪ್ರಕಾಶ್ ನಾಯ್ಕ ಸಿಪಿಐ ಕುಮಟಾ ರವರ ನೇತೃತ್ವದಲ್ಲಿ ಶ್ರೀ ಆನಂದಮುರ್ತಿ ಪಿಎಸ್ಐ ಹಾಗೂ ಸಿಬ್ಬಂದಿ ದಯಾನಂದ ನಾಯ್ಕ ಮತ್ತು ಸಂತೋಷ ಬಾಳೇರ  ಇವರ ತಂಡ ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

RELATED ARTICLES  ಸದ್ಗುರು ಶ್ರೀಧರ ಚರಿತಾಮೃತ ಗದ್ಯ-ಪದ್ಯ ಕಲಾಪದ ವಿಶೇಷ ಸಂಯೋಜನೆ: ಶ್ರೀ ಕ್ಷೇತ್ರ ಗೋರೆಯಲ್ಲಿ ಕಾರ್ಯಕ್ರಮ.

ಇದರಿಂದ ದೀರ್ಘ ಕಾಲ ದಿಂದ ವಿಚಾರಣೆ ಗೆ ಬಾಕಿ ಇದ್ದ ಪ್ರಕರಣಕ್ಕೆ ಮರು ಜೀವ ಬಂದಂತೆ ಆಗಿರುತ್ತದೆ. ಈ ಕಾರ್ಯಕ್ಕೆ ಸುಧಾ ಅಘನಾಶಿನಿ ಪಿಎಸ್ಐ ರವಿ ಗುಡ್ಡಿ ಪಿಎಸ್ಐ ಸಿಬ್ಬಂದಿಗಳಾದ ಕೃಷ್ಣ NG. ಬಸವರಾಜ್ ಜಾಡರ್ ಟೆಕ್ನಿಕಲ್ ಸೆಲ್ ಸಿಬ್ಬಂದಿ ಸುಧೀರ್ ಮಡಿವಾಳ್ ರವರು ಸಹಾಯ ಮಾಡಿರುತ್ತಾರೆ. ಉತ್ತಮ ಕಾರ್ಯ ನಿರ್ವಹಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿಗಳಿಗೆ ಮಾನ್ಯ ಉತ್ತರಕನ್ನಡ ಎಸ್.ಪಿಯವರು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.

RELATED ARTICLES  ಪರೇಶ್ ಮೇಸ್ತ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ