ಕುಮಟಾ: ಇಲ್ಲಿನ ಗುಡಿಗಾರಗಲ್ಲಿ ಶಾಲೆಯ ಎದರುಗಡೆ ಬಿಳಿ ಬಣ್ಣದ ಕ್ಯಾರಿಬ್ಯಾಗ್ ನಲ್ಲಿ ಸಿಕ್ಕ 25 ಸಾವಿರ ರೂ. ಹಣವನ್ನು ವಾರಸುದಾರರಿಗೆ ಮರಳಿಸಿ ಬಗ್ಗೋಣ ನಿವಾಸಿ ಮಾದೇವ ನಾಯ್ಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಾದೇವ ನಾಯ್ಕನಿಗೆ ಬಿಳಿ ಬಣ್ಣದ ಕೊಟ್ಟೆ ಸಿಕ್ಕಿತ್ತು. ಅದನ್ನು ತೆರೆದು ನೋಡಿದಾಗ 29 ಸಾವಿರ ರೂಪಾಯಿ ಹಣ ಇದ್ದು, ತಕ್ಷಣವೇ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸ್ನೇಹಿತರಿಗೆ ಪೊಸ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಪ್ರತಿಯೊಂದು ವಾಟ್ಸಪ್ ಪೇಸ್ ಬುಕ್ ನಲ್ಲಿ ಪೊಸ್ಟ್ ಮಾಡಲಾಗಿತ್ತು. ಪೊಸ್ಟ್ ನೋಡಿದ ಕುಮಟಾದ ಹಳಕಾರ ನಿವಾಸಿ ಗಣೇಶ ಹರಿಕಂತ್ರ ಹಣ ತನ್ನದು ಎಂದು ಹೇಳಿಕೊಂಡರು. ತಾನು ಕುಮಟಾ ಸಿವಿಲ್ ಕೋರ್ಟ್ ಕಡೆ ಬಂದಾಗ ಹಣ ಕಳೆದುಕೊಂಡ ಬಗ್ಗೆ ತಿಳಿಸಿದರು.
ಮಾದೇವ ನಾಯ್ಕ ಹಾಗೂ ಹಣ ಕಳೆದುಕೊಂಡ ಗಣೇಶನನ್ನು ಕುಮಟಾ ಪೋಲಿಸ್ ಠಾಣೆಗೆ ಕರೆತಂದು ಹಣವನ್ನು ಎಣಿಕೆ ಮಾಡಿ ಗಣೇಶ ಹೇಳಿದ ಮೊತ್ತ ಹಾಗೂ ದಾಖಲೆಯನ್ನು ತೋರಿಸಿದಾಗ ಪೋಲಿಸರ ಸಮ್ಮುಖದಲ್ಲಿ ಹಣವನ್ನು ಗಣೇಶ ಅವರಿಗೆ ಕುಮಟಾ ಠಾಣೆಯ ಪಿಎಸ್‌ಐ ರವಿ ಗುಡ್ಡಿ ಹಾಗೂ ಸುಬ್ರಾಯ ಭಟ್, ವಿನಾಯಕ ನಾಯ್ಕ, ಉದಯ ಗುಡಿಗಾರ, ವಿನಾಯಕ ರಾಮ ನಾಯ್ಕ ಸಮ್ಮುಖದಲ್ಲಿ ನೀಡಿದರು.