ಶಿರಸಿ : ಇಂದು ಬೆಳಗ್ಗೆ 11:00 ಗಂಟೆ ಸುಮಾರಿಗೆ ಶಿರಸಿ ನಗರದ ಕರಿಗುಂಡಿ ರಸ್ತೆಯ ಕಸದಗುಡ್ಡೆ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾಧಕ ವಸ್ತುವನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಮಾರುಕಟ್ಟೆ ಪೊಲೀಸರು ದಾಳಿ ಮಾಡಿ ಆಬೀದ್ ಮೊಹ್ಮದ್ ರಫಿಕ್ ಹುಬ್ಬಳ್ಳಿ ಈತನನ್ನು ವಶಕ್ಕೆ ಪಡೆದು ಅಂದಾಜು 15000/- ರೂ ಮೌಲ್ಯದ 504 ಗ್ರಾಂ ತೂಕದ ಗಾಂಜಾ ಮಾದಕ ವಸ್ತು, ನಗದು ಹಣ -400/- ರೂ ಹಾಗೂ ಕೃತ್ಯಕ್ಕೆ ಬಳಸಲಾದ ಅಂದಾಜು 1000/- ಮೌಲ್ಯದ ಒಪ್ಪೊ ಮೊಬೈಲ್ ಫೋನ್ ಜಪ್ತಿ ಪಡಿಸಿಕೊಂಡಿದ್ದು ಈ ಬಗ್ಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಶಾಸಕ ಸುನೀಲ್ ನಾಯ್ಕಗೆ ಕೊರೋನಾ ಸೋಂಕು ದೃಢ

ಶ್ರೀ ಶಿವಪ್ರಕಾಶ್ ದೇವರಾಜು ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ,ಶ್ರೀ ಬದ್ರಿನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ,ಶ್ರೀರವಿ ಡಿ ನಾಯ್ಕ ಡಿ.ಎಸ್.ಪಿ ಶಿರಸಿ ಉಪವಿಭಾಗ, ಶ್ರೀ ಬಿ.ಯು ಪ್ರದೀಪ್ ವೃತ್ತ ನಿರೀಕ್ಷಕರು ಶಿರಸಿ ರವರ ಮಾರ್ಗದರ್ಶನದಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದ ಸಿಬ್ಬಂದಿಗಳಾದ ಇಸ್ಮಾಯಿಲ್ ಕೋಣನಕೇರಿ,ರಾಮಯ್ಯ ಪೂಜಾರಿ,ಪ್ರದೀಪ್‌ ಕೈಟಕರ್, ಹನುಮಂತ ಮಾಕಾಪುರ, ಮೋಹನ ನಾಯ್ಕರವರನ್ನು ಒಳಗೊಂಡ ತಂಡ ದಾಳಿ ಕಾರ್ಯಾಚರಣೆ ಕೈಗೊಂಡಿತ್ತು.

RELATED ARTICLES  ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಮೂರನೇ ದಿನ: ಸಾಧಕರಿಗೆ ಸಂದಿತು ಗೌರವ

ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಶಿವಪ್ರಕಾಶ ದೇವರಾಜುರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.