ಕುಮಟಾ : ತಾಲೂಕಿನ ಲಯನ್ಸ್ ಕ್ಲಬ್ ಗೆ 317B ಪ್ರಾಂತಪಾಲರಾದ ಡಾ. ಗಿರೀಶ್ ಕುಚಿನಾಡ್ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಕುಮಟಾ ಪೊಲೀಸ್ ಠಾಣೆಗೆ ಸಂಚಾರಿ ನಿಯಂತ್ರಣಕ್ಕಾಗಿ ಬ್ಯಾರಿಕೇಡ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಜಿಲ್ಲಾಪ್ರಾಂತಪಾಲರ ಘೋಷ ವಾಕ್ಯ ರಸ್ತೆ ಸಂಚಾರದ ಕುರಿತು ಜಾಗ್ರತಿ ಅಭಿಯಾನದ ಅಡಿಯಲ್ಲಿ ನಡೆದ ಈ ಕೊಡುಗೆಯನ್ನು ಪ್ರಾಂತಪಾಲರು ಶ್ಲಾಘಿಸಿದರು.
ಸಬ್ ಇನ್ಸ್ಪೆಕ್ಟರ್ ರವಿ ಅವರು ಬ್ಯಾರಿಕೇಡ್ ಕೊಡುಗೆ ತುಂಬಾ ಉಪಯುಕ್ತ ವಾದ್ದದ್ದು ಎಂದು ಕುಮಟಾ ಲಯನ್ಸ್ ಕ್ಲಬ್ ಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ವಿನಯಾ ಹೆಗಡೆ ಹಾಗೂ ಲಯನ್ಸ್ ಸದಸ್ಯರು ಹಾಜರಿದ್ದರು.
ಸೌಮ್ಯಾ ಸುರೇಶ್ ಭಟ್ ಗೆ ಸನ್ಮಾನ.
ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಓದುತ್ತಿರುವ ಕುಮಾರಿ ಸೌಮ್ಯ ಅವರು ತನ್ನ ಅಂಧತ್ವ ವೈಕಲ್ಯವನ್ನುಮೆಟ್ಟಿ ನಿಂತು ಪಿ ಯು ಸಿ ಯಲ್ಲಿ ಶೇ93 ಕ್ಕೂ ಅಧಿಕ ಅಂಕ ಗಳಿಸಿ ಸಾಧನೆ ಮಾಡಿರುತ್ತಾರೆ. ಅವರನ್ನು ಕುಮಟಾ ಲಯನ್ಸ್ ಕ್ಲಬ್ ಜಿಲ್ಲಾ ಪ್ರಾಂತಪಾಲರಾದ ಎಂ ಜೆ ಎಫ್ ಡಾ. ಗಿರೀಶ್ ಕುಚಿನಾಡ್ ಅವರ ಉಪಸ್ಥಿತಿಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿನಯಾ ಹೆಗಡೆ ಸನ್ಮಾನಿಸಿ ಗೌರವಿಸಿದರು.