ಅಂಕೋಲಾ: ದೂರದೂರಿನಲ್ಲಿದ್ದ ತನ್ನ ಅಕ್ಕ ಮತ್ತು ಅವರ ಕುಟುಂಬದವರನ್ನು ಹಬ್ಬಕ್ಕೆಂದು ಕರೆದುಕೊಂಡು ಬರುತ್ತಿರುವಾಗ ಅಪಘಾತ ಸಂಭವಿಸಿ ಒಂದು ಪುಟಾಣಿ ಬಾಲಕಿಯೂ ಸೇರಿ ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಅಂಕೋಲಾ- ಹುಬ್ಬಳ್ಳಿ ಮಾರ್ಗಮಧ್ಯೆ ಹೆಬ್ಬುಳ ಬಳಿ ನಡೆದಿದೆ.
ಕಾರ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತ ಬೆಳಿಗ್ಗೆ 6.30ರ ಸುಮಾರಿಗೆ ನಡೆದಿದಿದ್ದು. ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಮಾರ್ಗವಾಗಿ ಮಹಾರಾಷ್ಟ್ರ ಕಡೆಗೆ ಹೊರಟಿದ್ದ ಲಾರಿ, ಎದುರಿನಿಂದ ಬರುತ್ತಿದ್ದ ಕಾರ್ ಒಂದಕ್ಕೆ ಜೋರಾಗಿ ಡಿಕ್ಕಿ ಡಿಕ್ಕಿಹೊಡೆದ ಪರಿಣಾಮ, ಗುರುಪ್ರಸಾದ ಅಣ್ಣೇಕರ, ಮತ್ತು ಅವರ ಅಕ್ಕನ ಮಗಳು ಪುಟಾಣಿ ಸಂಜನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದೂರದ ಪೂನಾದಲ್ಲಿ ನೆಲೆಸಿದ್ದ ತನ್ನ ಅಕ್ಕ- ಭಾವಂದಿರನ್ನು ಹಬ್ಬಗ್ಗೆ ಮನೆಗೆ ಕರೆತರಲು ತನ್ನ ಗೆಳೆಯ ಪ್ರೀತಮ್ ಜೊತೆ ತೆರಳಿದ್ದ ಗುರು ಅವರು, ಮುಂಬೈಯಿಂದ ಮನೆಗೆ ವಾಪಸ್ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರು ಅಂಕೋಲಾ ತಾಲೂಕಿನ ಅವರ್ಸಾದವರು ಎಂದು ತಿಳಿದುಬಂದಿದೆ.
ಮೃತ ಗುರುಪ್ರಸಾದ, ವಾಲಿಬಾಲ್ ನಲ್ಲಿ ಸರ್ವಶ್ರೇಷ್ಠ ಆಟಗಾರನಾಗಿ ಗುರುತಿಸಿ ಕೊಂಡಿದ್ದಲ್ಲದೇ, ಕ್ರಿಕೆಟ್ ನಲ್ಲಿಯೂ ತನ್ನ ಪ್ರತಿಭೆ ಮೂಲಕ ಹೆಸರಾಗಿದ್ದ. ಅಪಘಾತದ. ತೀವ್ರತೆಗೆ ಕಾರ್ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಕಾರನಲ್ಲಿ ಪ್ರಯಾಣಿಸುತ್ತಿದ್ದ ಉಳಿದ ನಾಲ್ವರಿಗೆ ಪೆಟ್ಟಾಗಿದ್ದು, ಅದ್ರಷ್ಟವಶಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತದೇಹವನ್ನು ಮನೆಗೆ ತಂದಾಗ, ಕುಟುಂಬಸ್ಥರು ಮತ್ತು ಊರ ನಾಗರಿಕರ ದುಃಖದ ಕಟ್ಟೆ ಒಡೆದು, ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬ ಹಾಗೂ ಗ್ರಾಮಸ್ಥರಲ್ಲಿ ಶೊಕದ ಛಾಯೆ ಮನೆ ಮಾಡಿದೆ.