ಅಂಕೋಲಾ : ತಾಲೂಕಿನ ಕಂಚಿನ ಬಾಗಿಲ ಬಳಿ ಬುಧವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ. ಅಪಘಾತದ ತೀವ್ರತೆಗೆ ಕಾರನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊರ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಉಳಿದ ಈರ್ವರಿಗೆ ಗಾಯಗಳಾಗಿದೆ ಎನ್ನಲಾಗಿದೆ.

ಅಂಕೋಲಾ ಕಡೆಯಿಂದ ಯಲ್ಲಾಪುರ ಮಾಗ೯ವಾಗಿ ಹೊರಟಿದ್ದ ಲಾರಿ ಹಾಗೂ ಯಲ್ಲಾಪುರ ಕಡೆಯಿಂದ ಅಂಕೋಲಾ ಮಾರ್ಗವಾಗಿ ಬರುತ್ತಿದ್ದ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

RELATED ARTICLES  ಫೆ. 8 ರಂದು ನಡೆಯಲಿದೆ ಕುಮಟಾ ಜಾತ್ರೆ : ಪ್ರಮುಖರಿಂದ ಮಾಹಿತಿ.

ಎಎಸ್ಪಿ ಬದ್ರಿನಾಥ, ಸಿಪಿಐ ಕೃಷ್ಯಾನಂದ ನಾಯಕ, ಪಿಎಸೈ ಇ.ಸಿ. ಸಂಪತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಹಿಂದೆ ಹೈವೇ ಪೆಟ್ರೋಲ್ ಎಂದು ಕರೆಯಿಸಿ ಕೊಳ್ಳುತ್ತಿದ್ದ ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿಗಳು, ಹೊಯ್ದಳ ಜೀವರಕ್ಷಕ ಪಡೆ ಯಾಗಿಯೂ ಕಾರ್ಯ ನಿರ್ವಹಿಸಲಾರಂಭಿಸಿದ್ದು , ಅಪಘಾತದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಕರ್ತವ್ಯ ನಿರ್ವಹಿಸಿದರು.

RELATED ARTICLES  ಗೊಂಡರ ಜನಪದ ಕಲೆಗಳಿಗೆ ವೈಚಾರಿಕ ಸ್ಪರ್ಶವಿದೆ :ಉಮೇಶ ಮುಂಡಳ್ಳಿ.

ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಇನ್ನೇನು ಮಾಹಿತಿಗಳು ತಿಳಿದುಬರಬೇಕಿದೆ.