ಕುಮಟಾ : ಜಿಲ್ಲೆಯ ಕರಾವಳಿ ತಾಲ್ಲೂಕಿಗೆ ಖಾರ್ಲ್ಯಾಂಡ ನಿರ್ಮಾಣ ಮಾಡಲು ಸರ್ಕಾರದಿಂದ ಬಜೆಟ್ ನಲ್ಲಿ ಹಣ ಮೀಸಲಿಡಲಾಗಿದ್ದು ಆ ಅನುದಾನ ಸರಿಯಾಗಿ ಬಳಕೆಯಾಗಿ ನಮ್ಮ ರೈತರಿಗೆ ಮೀನುಗಾರರಿಗೆ ಅನುಕೂಲ ಆಗಬೇಕು ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ..

ಅವರು ಗುರುವಾರ ಖಾರ್ಲ್ಯಾಂಡ ಪ್ರದೇಶವಾದ ಕಾಗಾಲ ಹಿಣಿ ಮಾಸೂರು ಕಿಮಾನಿ ಭಾಗದಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು..

ರಾಮಕೃಷ್ಣ ಹೆಗಡೆ ಯವರು ಮುಖ್ಯಮಂತ್ರಿ ಇದ್ದಾಗ ಖಾರ್ಲ್ಯಾಂಡ ಬಂಡು ಗೇಟ್ ಸಣ್ಣ ಬ್ರಿಡ್ಜ್ ನಿರ್ಮಾಣ ಆಗಿತ್ತು ಅದರಿಂದ ರೈತರಿಗೆ ಖಗ್ಗನ ಭತ್ತ ಬೆಳೆಯಲು ಹಾಗೂ ಸಿಗಡಿ ಕೃಷಿ ಗೆ ತುಂಬಾ ಅನುಕೂಲ ಆಗುವಂತೆ ಮಾಡಿದ್ದರು ಆದರೆ ಈಗ ಆ ಖಾರ್ಲ್ಯಾಂಡ ಬಂಡು ಸಂಪೂರ್ಣ ಹದಗೆಟ್ಟಿದೆ ಇದರಿಂದ ಖಗ್ಗನ ಭತ್ತ ಬೆಳೆಯಲಾಗದೆ ನಶಿಸುವ ಹಂತಕ್ಕೆ ತಲುಪಿದೆ ಹಾಗೂ ಸಿಗಡಿ ಕೃಷಿ ಯಲ್ಲೂ ಸರಿಯಾದ ಫಲಿತಾಂಶ ಬರುತ್ತಿಲ್ಲ ಇದನ್ನು ಮನಗಂಡು ಕರಾವಳಿ ಭಾಗದ ಮೂವರು ಶಾಸಕರು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಯವರ ಬಳಿ ಈ ಸಮಸ್ಯೆ ಮನವರಿಕೆ ಮಾಡಿ ರೈತರಿಗೆ ನೆರವಾಗುವಂತೆ ಕೋರಿದ್ದರು ಈ ಬೇಡಿಕೆಯನ್ನು ಸಚೀವ ಮಾಧುಸ್ವಾಮಿ ಯವರು ಯಡಿಯೂರಪ್ಪ ನವರ ಜೊತೆ ಚರ್ಚಿಸಿ ಬಜೆಟ್ ನಲ್ಲಿ 300 ಕೋಟಿ ಹಣ ಮೀಸಲಿಡುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ..
ನನಗೆ ಗಜನಿ ಖಾರ್ಲ್ಯಾಂಡ ಬಗ್ಗೆ ಸಂಪೂರ್ಣ ಅರಿವಿದೆ ಹೀಗಾಗಿ ಈ ಪ್ರದೇಶಗಳಿಗೆ ಅಧಿಕಾರಿಗಳನ್ನೂ ಜೊತೆಯಲ್ಲೇ ಕರೆದುಕೊಂಡು ರೈತರ ಅಗತ್ಯತೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ರೈತರಿಗೆ ಖಾರ್ಲ್ಯಾಂಡ ನಿರ್ಮಾಣ ದಲ್ಲಿ ಆದ ನ್ಯೂನತೆಗಳು ಹಾಗೂ ಯಾವ ರೀತಿ ಆಗಬೇಕು ಎಂಬುದು ಮನಗಂಡು ಸರಿಯಾದ ಕಾಮಗಾರಿಗೆ ಕ್ರಿಯಾ ಯೋಜನೆ ಮಾಡಲಾಗುವುದು ನಾನೂ ಕೂಡ ಪದೇ ಪದೇ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುತ್ತೇನೆ ಸುಮಾರು ನೂರು ಕೋಟಿ ಹಣದಲ್ಲಿ ಖಾರ್ಲ್ಯಾಂಡ ನಿರ್ಮಾಣ ಆಗಲಿದೆ. ಸರ್ಕಾರದ ಹಣ ಸರಿಯಾಗಿ ಸದ್ವಿನಿಯೋಗ ಆಗಬೇಕು ಇದರಿಂದ ರೈತರ ಕಗ್ಗನ ಬೆಳೆ, ಸಿಗಡಿ ಕೃಷಿ ಮತ್ತೆ ವಿಜೃಂಭಿಸಬೇಕು ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಂಜಿನಿಯರ್ ವಿನೋದ, ಅಮಿತ್ ತಳೇಕರ್ ರೈತ ಪ್ರಮುಖರಾದ ಜಿ ಕೆ ಪಟಗಾರ, ಮಂಜುನಾಥ ಪಟಗಾರ, ಮೀನುಗಾರ ಮುಖಂಡ ಶಿವಪ್ಪ ಹರಿಕಂತ್ರ ಪಂಚಾಯತ ಸದಸ್ಯ ರವಿ ಪಂಡಿತ್ ಹಾಗೂ ಆಯಾ ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES  ಚಿತ್ರಾಪುರದಲ್ಲಿ ಅ.7 ಕ್ಕೆ ನಿನಾದ ದಸರಾ ಕಾವ್ಯೋತ್ಸವ