ಆಹಾರ ಸಂಸ್ಕೃತಿ ಬದಲಾದಂತೆ..ಆರೋಗ್ಯ ಸಂಸ್ಕೃತಿ..ಬದಲಾಗುತ್ತಾ ಹೋಯಿತು.ಹಚ್ಚುವ ಬದಲು ಚುಚ್ಚುವ ಔಷಧಗಳು ಬಂದವು.. ಪಾರಂಪರಿಕ ಆಹಾರ ಪದ್ಧತಿಗಳಲ್ಲಿ ಔಚಿತ್ಯವಿದೆ ಎಂದು ಅರಿಯುವಾಗುವ ವರೆಗೆ..ಅನಾರೋಗ್ಯ ಮನುಕುಲವನ್ನಾವರಿಸಿತು. ಕ್ರಮೇಣ.. ರೋಗಕ್ಕೆ ಯೋಗವೇ ಮದ್ದೆನ್ನುವ ವಿಷಯ ಕೇಳಿಬರುತ್ತಿದೆ.
ಅಂತೆಯೇ..ಚಿತ್ರವಿಚಿತ್ರ ತಿನಿಸುಗಳು ದೇಶ..ಕಾಲವನ್ನು ಮರೆತು..
ಸರ್ವವ್ಯಾಪಿಯಗಿ..ಬೆಳೆದು ಸರ್ವವ್ಯಾಧಿಗಳೂ ದೇಹ ಸೇರಿದ್ದನ್ನು ಅರಿತ ಜನ..ಆಯಾ ಕಾಲ..ದೇಶಕ್ಕೆ ಹೊಂದುವ ಪಾರಂಪರಿಕ ಆಹಾರ ಪದ್ಧತಿಯತ್ತ ಮುಖಮಾಡುತ್ತಿರುವ ಸಂದರ್ಭದಲ್ಲಿ..ಪಾರಂಪರಿಕ ಸಿಹಿತಿನಿಸುಗಳ ರಾಜನೆಂದೇ ಹೆಸರಾದ ಸಣ್ಣಕ್ಕಿಯ ಕೇಸರಿಬಾತು..’ಕುಮಟಾ ಕೇಸರಿ’. ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿದೆ.
ಹೊಸೆದ ದಾರಿಯಲ್ಲೇ ನಡೆದು ಹೊಸದೊಂದು ದಾರಿಯನ್ನು ಹುಡುಕುವವರು ವಿರಳವಿರುವ ಈ ದಿನದಲ್ಲಿ..
‘ತಿಗಣೇಶ ಮಾಗೋಡು’ ವಿಶಿಷ್ಟವಾಗಿ ನಿಲ್ಲುತ್ತಾರೆ.
ದುರ್ಗಾಂಬಾ ಕಾಂಡಿಮೆಂಟ್ಸ..ಕಾಮಧೇನು ತುಪ್ಪದದೋಸೆ ಮಾಡಿ ಛಾಪು ಮೂಡಿಸಿದ ಅವರು..ಕೆಲಕಾಲ ಸಿಂಚನ ವಾಹಿನಿಯಲ್ಲಿ ಕೆಲಸಮಾಡಿ ಮಾಧ್ಯಮ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದರು.ಅಲ್ಲೆ ಕೆಲ ದಿಗಳ ಹಿಂದಿನ ವರೆಗೆ..ಕೇವಲ 35/- ರುಪಾಯಿಗಳಿಗೆ ತರಕಾರಿ ಊಟ ನೀಡಿ ಕುಮಟಾದ ಹೊಟೆಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದರು.
ಯುಗಾದಿಯಂದು ಹೊಸ ಉದ್ಯಮಕ್ಕೆ ಕಾಲಿಟ್ಟ ಅವರು… ಕೇಸರಿಬಾತು ಮಾರಕಟ್ಟೆಯಲ್ಲಿ ಲಭ್ಯವಿರದಿರುವದನ್ನು ಗಮನಿಸಿ…100gm.500gm…ಪ್ಯಾಕೆಟ್ಗಳಲ್ಲಿಟ್ಟು ಮಾರಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ‘ಸಸ್ಯ ಸಂಜೀವಿನಿ’ ಸಂಸ್ಥೆಯ ಸಹಯೋಗದಲ್ಲಿ ಆರಂಬಿಸಿರುವ ಈ ಉತ್ಪನ್ನಗಳನ್ನು. ಹೊನ್ನಾವರದ’ ಸ್ವರಾಜ ಎಂಟರ್ ಪ್ರೈಸಸ್’ ವಿತರಣೆ ಮಾಡುತ್ತಿದೆ.
ಈ ಸಾಂಪ್ರದಾಯಿಕ ಸಿಹಿತಿಸು..ತಿಗಣೇಶ ಮಾಗೋಡ ರವರ
‘ನಮ್ಮ ಸೃಷ್ಟಿ ಸ್ವೀಟ್ಸ’ ಈ ಕೇಸರಿಬಾತ್ ತಯಾರಿಸುತ್ತಿದ್ದು.ಶುಭ ಸಮಾರಂಭಗಳಿಗೆ.. ಸಣ್ಣಪುಟ್ಟ ಕಾರ್ಯಕ್ರಮಗಳಿಗೆ..
ಖರೀದಿಸಿ ಕೇಸರಿಬಾತನ್ನು ರಿಯಾಯತಿ ದರದಲ್ಲಿ ಪೂರಯಸುವ ಯೋಜನೆಯಿದ್ದು..ಸಂಪರ್ಕಿಸುವಂತೆ’ ತಿಗಣೇಶ ಮಾಗೋಡು ‘ಕೋರಿದ್ದಾರೆ.