ಕುಮಟಾ : ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಕೆಲವು ಅಪರಿಚಿತರು ಶಾಲೆಗಳಿಗೆ ತೆರಳಿ ನಾವು ಶಾಲಾ ಸಿದ್ಧಿ ಕಾರ್ಯಕ್ರಮದ ಅಂಗವಾಗಿ ಶಾಲೆಯ ಫೋಟೋ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಅಲ್ಲಿಯ ಹೊರ ಹಾಗೂ ಒಳ ಆವರಣಗಳ ಫೋಟೋ ತೆಗೆದುಕೊಂಡು ಹೋಗಿರುತ್ತಿದ್ದು ಕಂಡುಬಂದಿದ್ದು, ಈ ಬಗ್ಗೆ ಜಾಗೃತಿ ವಹಿಸುವಂತೆ ಶಿಕ್ಷಕರ ಸಂಘ ಮಹತ್ವದ ಮಾಹಿತಿ ನೀಡಿದೆ.
ಈ ಫೋಟೋ ತೆಗೆಯುವ ಕಾರ್ಯದ ಕುರಿತು ನಮ್ಮ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ತಾವು ಈ ಬಗ್ಗೆ ಅನುಮತಿ ನೀಡಿಲ್ಲ ಎಂದು ತಿಳಿಸಿರುತ್ತಾರೆ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿಯವರು ಸತ್ವಾಧಾರಕ್ಕೆ ಮಾಹಿತಿ ನೀಡಿದ್ದಾರೆ.
ನಿಮ್ಮಲ್ಲಿಗೆ ಇಂತಹ ಅನಧಿಕೃತ ವ್ಯಕ್ತಿಗಳು ಬಂದಲ್ಲಿ ಅವರಿಗೆ ಅವಕಾಶ ನೀಡಬೇಡಿ. ಅಧಿಕೃತ ಆದೇಶ ತರಲು ತಿಳಿಸಿ. ಮತ್ತೂ ಮುಂದುವರಿದಲ್ಲಿ ಪೋಲೀಸ್ ಇಲಾಖೆಗೆ ಮಾಹಿತಿ ನೀಡುವುದಾಗಿ ತಿಳಿಸಿ ಎಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದ್ದಾರೆ.