ಶಿರಸಿ: ಎತ್ತಿನ ಹೊಳೆನೀರಾವರಿ ಯೋಜನೆಯ ವಿರುದ್ಧ ತಾವು ನಡೆಸಿದ ಪಾದ ಯಾತ್ರೆ ಹೋರಾಟದ ಮಾಹಿತಿ ನೀಡಿದರು. ಹಸಿರು ನ್ಯಾಯಾಲಯದಲ್ಲಿ ನಮ್ಮ ಹೋರಾಟ ಮುಂದುವರೆದಿದೆ. ಪಶ್ಚಿಮಘಟ್ಟ ಉಳಿಸಿ ಚಳುವಳಿಗೆ ಜನಪ್ರತಿನಿಧಿಗಳು, ಸರ್ಕಾರಗಳು ಇನ್ನಷ್ಟು ಕಾಳಜಿ, ಬೆಂಬಲ ನೀಡಬೇಕು” ಎಂದು ಮಂಗಳೂರಿನ ಲೋಕ ಸಭಾ ಸದಸ್ಯ ನಳಿನ ಕುಮಾರ್ ಹೇಳಿದರು. ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠಕ್ಕೆ ಭೇಟಿ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೈಗಾ ಅಣುಸ್ಥಾವರದ 5-6ನೇ ಘಟಕ ನಿರ್ಮಾಣ ಬೇಡ ಎಂದು ಆಗ್ರಹಿಸಿ ನಡೆದ ಪರಿಸರ ಸಮಾವೇಶದ ನಿರ್ಣಯಗಳನ್ನು ಪೂಜ್ಯ ಸ್ವರ್ಣವಲ್ಲೀ ಶ್ರೀಗಳುಸಂಸದ ಕಟೀಲ್ ಇವರಿಗೆ ನೀಡಿದರು. ಪಶ್ಚಿಮ ಘಟ್ಟದ ಪ್ರಚಲಿತ ವಿದ್ಯಮಾನ, ಕೈಗಾ ಸುತ್ತಲಿನ ಹಳ್ಳಿಗಳ ಆರೋಗ್ಯ ಪರಿಸ್ಥಿತಿ ಕುರಿತು ಬೇಡ್ತಿ ಸಮಿತಿ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಮಾಹಿತಿ ನೀಡಿದರು.

RELATED ARTICLES  ಜನತೆಯ ಹೃದಯ 'ವೀಣೆ' ಮೀಟಿದ "ಸೂರಜ್ ನಾಯ್ಕ ಸೋನಿ"

ಕೈಗಾ 5-6ನೇ ಘಟಕ ಕೈಬಿಡುವಂತೆ ಪಶ್ಚಿಮ ಘಟ್ಟದ ನದೀ ತಿರುವು ಯೋನೆಗಳನ್ನು ಕೈಬಿಡುವಂತೆ ಕೇಂದ್ರ, ರಾಜ್ಯ ಸರ್ಕಾರಗಳ ಗಮನ ಸೆಳೆಯುತ್ತೇನೆ” ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು. ಭಗವದ್ಗೀತಾ ಅಭಿಯಾನವನ್ನು ನಿರಂತರವಾಗಿ ನಡೆಸುತ್ತಿರುವ ಸ್ವರ್ಣವಲ್ಲೀ ಸ್ವಾಮೀಜಿ ನಾಡಿನ ಗೌರವಕ್ಕೆ ಪಾತ್ರರಾದ ಯತಿಗಳು. ಅದಕ್ಕಾಗಿ ಸ್ವಾಮೀಜಿ ಅವರ ದರ್ಶನಕ್ಕೆ ಬಂದಿದ್ದೇನೆ” ಎಂದರು.

RELATED ARTICLES  ತಬಲಾ ಗುರು ಎನ್‌.ಎಸ್‌.ಹೆಗಡೆ ಹಿರೇಮಕ್ಕಿ ಇನ್ನಿಲ್ಲ.

ಶ್ರೀ ಮಠದ ಅಧ್ಯಕ್ಷ ವಿ. ಎನ್ ಹೆಗಡೆ ಬೊಮ್ಮನಳ್ಳಿ, ಆರ್.ಎಸ್. ಹೆಗಡೆ ಭೈರುಂಬೆ, ಎನ್.ಜಿ. ಹೆಗಡೆ, ಭಟ್ರಕೇರಿ, ವಿದ್ವಾನ್ ಭಾಸ್ಕರ ಭಟ್ ಸೋಂದಾ, ರತ್ನಾಕರ ಬಾಡ್ಲಕೊಪ್ಪ, ಶ್ರೀಪಾದ ಹೊಸ್ತೋಟ ಮುಂತಾದವರಿದ್ದರು.