ಕಾರವಾರ: ಜಿಲ್ಲೆಯಲ್ಲಿ ಕೊರೊನಾ ಕೇಸ್ ಹೆಚ್ಚುತ್ತಲಿದ್ದು, ಇಂದು ಬರೋಬ್ಬರಿ 73 ಕೊರೊನಾ ಕೇಸ್ ದೃಢವಾಗಿದೆ.
ಇಂದು ಕಾರವಾರದಲ್ಲಿ 22 ಕೇಸ್, ಅಂಕೋಲಾ 10, ಕುಮಟಾದಲ್ಲಿ 11, ಹೊನ್ನಾವರ 6, ಭಟ್ಕಳ 1, ಶಿರಸಿ 7, ಸಿದ್ದಾಪುರ 5, ಮುಂಡಗೋಡ 3, ಹಳಿಯಾಳದಲ್ಲಿ 8 ಕೇಸ್ ದೃಢವಾಗಿದೆ.
ಕೊರೊನಾದಿಂದಾಗಿ ಇಂದು ಕಾರವಾರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಇಂದು ಜಿಲ್ಲೆಯ 77 ಮಂದಿ ಗುಣಮುಖರಾಗಿದ್ದು, ಕಾರವಾರದಲ್ಲಿ 23, ಅಂಕೋಲಾ 5, ಕುಮಟಾ 5, ಹೊನ್ನಾವರ 10, ಭಟ್ಕಳ 2, ಶಿರಸಿ 12, ಮುಂಡಗೋಡ 1, ಹಳಿಯಾಳ 17, ಜೋಯಿಡಾದಲ್ಲಿ ಇಬ್ಬರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 15956 ಮಂದಿಯಲ್ಲಿ ಕೊರೊನಾ ದೃಢವಾಗಿದ್ದು, 15353 ಮಂದಿ ಗುಣಮುಖರಾಗಿದ್ದಾರೆ. ಒಟ್ಟೂ 194 ಮಂದಿ ಸಾವನ್ನಪ್ಪಿದ್ದಾರೆ.