ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಮತ್ತೆ ಹೆಚ್ಚುತ್ತಿದ್ದು ಇಂದು ಜಿಲ್ಲೆಯಲ್ಲಿ 139 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಕಾರವಾರದಲ್ಲಿ 34 ಹಾಗೂ ಶಿರಸಿಯಲ್ಲಿ 31 ಜನರಿಗೆ ಕರೋನಾ ಪಾಸಿಟಿವ್ ಬಂದಿದೆ.
ಕಾರವಾರ ೩೪, ಅಂಕೋಲಾ ೧೨ , ಕುಮಟಾ ೧೬, ಹೊನ್ನಾವರ ೯, ಭಟ್ಕಳ ೧, ಶಿರಸಿ ೩೧, ಸಿದ್ದಾಪುರ ೧೦, ಯಲ್ಲಾಪುರ ೩, ಮುಂಡಗೋಡ ೨, ಹಳಿಯಾಳ ೨೧, ಜೋಯ್ಡಾ ೦ ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.
ಇಂದು ಕೊರೋನಾ ಕಾರಣದಿಂದ ಕಾರವಾರದಲ್ಲಿ ಒಂದು ಸಾವು ಸಂಭವಿಸಿದ್ದು ಸಾವಿನ ಸಂಖ್ಯೆ 195 ಕ್ಕೆ ಏರಿದೆ.
ಕಾರವಾರ ೩೩, ಅಂಕೋಲಾ ೪ , ಕುಮಟಾ ೧, ಹೊನ್ನಾವರ ೭, ಭಟ್ಕಳ ೧, ಶಿರಸಿ ೩, ಸಿದ್ದಾಪುರ ೦, ಯಲ್ಲಾಪುರ ೨, ಮುಂಡಗೋಡ ೪, ಹಳಿಯಾಳ ೧೬, ಜೋಯ್ಡಾ ೧ ಜನ ಕೊರೋನಾ ಗೆದ್ದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 16095 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,15428 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ.195 ಜನರು ಕರೋನಾ ದಿಂದ ಸಾವು ಕಂಡವರಾಗಿದ್ದಾರೆ.