ಭಟ್ಕಳ: ಮುರುಡೇಶ್ವರ ರೈಲ್ವೇ ಸ್ಟೇಶನ್ ಎದುರಿನ ರಾಷ್ಟಿಯ ಹೆದ್ದಾರಿಯಲ್ಲಿ ಕೂಲಿ ಕಾರ್ಮಿಕನೊರ್ವ ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕಾರವಾರ ದಿಂದ ಬೈಂದೂರು ಕಡೆ ಹೋಗುತ್ತಿದ್ದ ಕಾರೊಂದು ರಸ್ತೆ ದಾಟುತ್ತಿದ್ದ ಕೂಲಿ ಕಾರ್ಮಿಕನಿಗೆ ಬಡಿದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದು ಈತ ರೈಲ್ವೆ ಕೂಲಿ ಕೆಲಸದ ನಿಮಿತ್ತ ಮುರುಡೇಶ್ವರಕ್ಕೆ ಬಂದಿದ್ದ ಎನ್ನಲಾಗಿದೆ.
ಕಾರು ಬಡಿದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ರಸ್ತೆಯಲ್ಲಿ ರಕ್ತ ಹರಿದಿದೆ. ಕೆಲ ಕಾಲ ಸುತ್ತಲ ಜನರಲ್ಲಿ ಭಯ ಮನೆ ಮಾಡಿತ್ತು.
ಮೃತ ಕೂಲಿ ಕಾರ್ಮಿಕ ಸೈಯದ್ ಮುಜೀಬ್ ಬೆಂಗಳೂರಿನ ಯಲಹಂಕ ನಿವಾಸಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಮುರುಡೇಶ್ವ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.