ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 64 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಜಿಲ್ಲೆಯಲ್ಲಿ ಕರೋನಾಕ್ಕೆ ಮೂರು ಜನ ಬಲಿಯಾಗಿದ್ದಾರೆ.
ಕುಮಟಾದ 65 ವರ್ಷದ ವ್ಯಕ್ತಿ 59 ವರ್ಷದ ವ್ಯಕ್ತಿ ಕರೋನಾ ಕ್ಕೆ ಬಲಿಯಾಗಿದ್ದಾರೆ. ಹಾಗೆಯೇ ಶಿರಸಿಯಲ್ಲಿ ಓರ್ವ ಕರೋನಾಕ್ಕೆ ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಈವರೆಗೆ 198 ಜನ ಕರೋನಾಕ್ಕೆ ಬಲಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಮತ್ತೆ ಹೆಚ್ಚುತ್ತಿದ್ದು ಇಂದು ಜಿಲ್ಲೆಯಲ್ಲಿ 64 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು
ಕಾರವಾರ ೨೩, ಅಂಕೋಲಾ ೮ , ಕುಮಟಾ ೫, ಹೊನ್ನಾವರ ೯, ಭಟ್ಕಳ ೧, ಶಿರಸಿ ೩, ಸಿದ್ದಾಪುರ ೩, ಯಲ್ಲಾಪುರ ೨, ಮುಂಡಗೋಡ ೧, ಹಳಿಯಾಳ ೬, ಜೋಯ್ಡಾ ೩ ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.
ಕಾರವಾರ ೩೫, ಅಂಕೋಲಾ ೧೧ , ಕುಮಟಾ ೧೫, ಹೊನ್ನಾವರ ೧, ಭಟ್ಕಳ ೦, ಶಿರಸಿ ೧೨, ಸಿದ್ದಾಪುರ ೧, ಯಲ್ಲಾಪುರ ೦, ಮುಂಡಗೋಡ ೨, ಹಳಿಯಾಳ ೪, ಜೋಯ್ಡಾ ೨ ಜನ ಕೊರೋನಾ ಗೆದ್ದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 16159 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,15501 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ.198 ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ.
ಕೋವಿಡ್ 19 ಎಗ್ಗಿಲ್ಲದೆ ಎಲ್ಲೆಡೆ ಹರಡುತ್ತಿದೆ. ಒಂದೆಡೆಗೆ ಒಂದು ಪ್ರಕರಣ ಇದ್ದುದು ಇದೀಗ ನೂರರ ಲೆಕ್ಕದಲ್ಲಿ ಮುಂದುವರೆದಿದೆ. ಪ್ರಾಣಹಾನಿಗಳೂ ಸಾಕಷ್ಟು ಆಗಿರುವುದು ಈಗಾಗಾಲೇ ತಿಳಿದ ವಿಚಾರ, ಆದರೂ ಇದೆಲ್ಲರ ನಡುವೆ ಜನತೆ ಮಾತ್ರ ಮೈ ಮರೆತಿರುವುದು ವಿಪರ್ಯಾಸ. ಜನತೆ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿದೆ.