ಹಿರೇಗುತ್ತಿ: ಪರಿಸರದ ಪರಿಧಿಯೊಳಗೆ ಮನುಷ್ಯನ ಉದಯವಾಗಿ ಸಹಸ್ರ ಸಹಸ್ರ ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಮನುಷ್ಯ ಮನುಷ್ಯನಾಗದೇ ಸಾಗಿ ಬಂದ ಪಥದತ್ತ ಒಂದು ಪಕ್ಷಿನೋಟ ಹರಿಸುವುದಾದರೆ ‘ಮಾನವ ಪ್ರಕೃತಿಯ ಕೂಸು’ ಅನುಭವದ ಮಾತಿದು ಈ ಸ್ಥಾನ ಅವನಿಗೆ ಪ್ರಾಪ್ತಿಯಾಗಿರುವುದು ಅವನ ಮಾನವತೆಯಿಂದಲ್ಲ ಬದಲಾಗಿ ಪರಿಸರದ ಕೊಡುಗೆಯಿಂದ ವರದಿಂದ. ಮನುಷ್ಯ ಪ್ರಾಣ ಮಾನವನಾಗುತ್ತ ಬಂದುದು ಪರಿಸರದ ಮಡಿಲಲ್ಲಿ ಪ್ರಕೃತಿ ಮಾತೆಯ ಸೆರಗಲ್ಲಿ ಎಂಬಂತೆ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿದ್ಯಾರ್ಥಿಗಳಿಗೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಪ್ರಕೃತಿ ಶಿಬಿರ (ನೇಚರ್ ಕ್ಯಾಂಪ್) ನಡೆಸುತ್ತಾ ಬಂದಿದೆ.
ಈ ಕ್ಯಾಂಪ್ ಹೊಸತನದಿಂದ ಕೂಡಿದ ವಿನೂತನ ಪ್ರಯೋಗ ಏಕೆಂದರೆ ಪ್ರಕೃತಿಯ ಕುರಿತು ಅಧ್ಯಯನ ಮಾಡಲು, ಪ್ರಕೃತಿಯನ್ನು ಉಳಿಸಿ, ಬೆಳೆಸುವ ಜಾಗೃತಿ ಮೂಡಿಸಲು ಹಾಗೂ ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಪಾಠದಿಂದ ಹೊರಬಂದು ಪ್ರಕೃತಿಯ ಮಹತ್ವವನ್ನು ಅರಿಯಲು ವಿದ್ಯಾರ್ಥಿಗಳ ಮನಸ್ಸಿಗೆ ಮುದವನ್ನು ನೀಡಲು ಇಂತಹ ಶಿಬಿರಗಳು ಅತ್ಯವಶ್ಯಕ. ಅದೇ ರೀತಿ 2020-21 ನೇ ಸಾಲಿನಲ್ಲಿ ಕೊರೊನಾ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು (SಔP) ಪ್ರಕೃತಿ ಇಕೋ-ಕ್ಲಬ್ ವತಿಯಿಂದ ಅರವಿಂದ ನಾಯಕ ಹಾಗೂ ಶಿಲ್ಪಾ ನಾಯಕ ದಂಪತಿಗಳ ತೋಟದಲ್ಲಿ ಪ್ರಕೃತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕ ಮೇಲುಸ್ತುವಾರಿಯಲ್ಲಿ ಪ್ರಕೃತಿ ಶಿಬಿರದಲ್ಲಿ 3 ತಂಡಗಳಾಗಿ ವಿಂಗಡಿಸಿ ಎಲ್ಲಾ ತಂಡಗಳು ಸೂಪರ್ ಮಿನಿಟ್, ಹಗ್ಗ ಜಗ್ಗಾಟ, ಗಡಿಗೆ ಒಡೆಯುವುದು, ಪಿರಾಮಿಡ್ ರಚÀನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕರಾದ ನಾಗರಾಜ ಜಿ ನಾಯಕ ಉಸ್ತುವಾರಿಯಲ್ಲಿ ಶಿಸ್ತಿನಿಂದ ಅಚ್ಚುಕಟ್ಟಾಗಿ ನೆರವೇರಿಸಿಲಾಯಿತು.

RELATED ARTICLES  ನೀರಿನ ಹೊಂಡದಲ್ಲಿ ಬಿದ್ದು ಸಾವುಕಂಡ ಅಯ್ಯಪ್ಪ ಮಾಲಾಧಾರಿ.

ವಿದ್ಯಾರ್ಥಿಗಳು ಗೊಲ್ಲರು, ಬೇಡರು ಮತ್ತು ಕೊಂಗರು ಎಂಬ ಮೂರು ತಂಡಗಳನ್ನು ರಚಿಸಿ ಭಾಗವಹಿಸಲು ಅವಕಾಶ ನೀಡಲಾಯಿತು. ಕೊಂಗರು ತಂಡ ನಾಯಕರಾದ ಶೃತಿ ಮತ್ತು ಸನಿದ ಪ್ರಥಮ ಸ್ಥಾನ, ಬೇಡರು ತಂಡದ ನಾಯಕರಾದ ನಾಗಶ್ರೀ ಮತ್ತು ಸುಹಾಸ ದ್ವಿತೀಯ ಸ್ಥಾನ, ಗೊಲ್ಲರು ತಂಡದ ನಾಯಕರಾದ ನಿರ್ಮಲಾ ಮತ್ತು ಶಬರೀಶ ತೃತೀಯ ಸ್ಥಾನ ಪಡೆದರು.ಈ ಮೂರು ತಂಡದ ನಾಯಕರಿಗೆ ದಿ||ಜೀವನ್ ಹೆಸರಿನಲ್ಲಿ ಆದರ್ಶ ನಾಯಕ ಮತ್ತು ಗಣಪತಿ ಪಟಗಾರ ಬಹುಮಾನ ಪ್ರಾಯೋಜಿಸಿದರು.

ಕಾರ್ಯಕ್ರಮ ನಿರ್ವಹಿಸಿ ಮಾತನಾಡಿದ ಶಿಕ್ಷಕ ಎನ್ ರಾಮು ಹಿರೇಗುತ್ತಿ “ಪ್ರತಿ ವರ್ಷವೂ ಪ್ರಕೃತಿ ಇಕೋ-ಕ್ಲಬ್ ವತಿಯಿಂದ ನೇಚರ್‍ಕ್ಯಾಂಪ್ ಮಾಡುವುದು ನಮ್ಮ ಶಾಲೆಯ ವಿಶೇಷವಾಗಿದೆ. ನಾವೆಲ್ಲ ಪರಿಸರದ ಮಕ್ಕಳು ಎಂಬುದೇ ನಿಜವಾದರೆ ಬೇರೆಯವರನ್ನು ಕಾಯುವ ಪ್ರಶ್ನೆಯಿಲ್ಲ. ಮಾತಿಗಿಂತ ಕೃತಿ ಮೇಲು ಅದಕ್ಕಾಗಿ ಕಾಡು ಬೆಳೆಸುವುದು, ನೈರ್ಮಲ್ಯ ಕಾಪಾಡುವುದು ಹೀಗೆ ಯಾವೆಲ್ಲ ಕ್ರಮ ಅಗತ್ಯವಿದೆಯೋ ಅವೆಲ್ಲವನ್ನು ವಿದ್ಯಾರ್ಥಿಗಳು ಯುವಕರೂ ಆದ ನಾವು ಹಿರಿಯರ ಮಾರ್ಗದರ್ಶನದಲ್ಲಿ ಕೈಗೊಳ್ಳಬೇಕಿದೆ, ಅಂದಾಗ ಮಾತ್ರ ‘Men may be cruel but man is kind’ ಎಂಬ ನಾಣ್ಣುಡಿ ಅರ್ಥ ಪೂರ್ಣವಾಗುವುದು” ಎಂದರು.

ಈ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್ ಗಾಂವಕರ ಅಧ್ಯಕ್ಷತೆ ವಹಿಸಿದರು. “ನಮ್ಮ ಮಕ್ಕಳು ಪ್ರತಿವರ್ಷ ಪ್ರಾಯೋಗಿಕವಾಗಿ ಪ್ರಕೃತಿಯ ಮಡಿಲಲ್ಲಿ ಪ್ರಕೃತಿಯ ಮಹತ್ವವನ್ನು ಈ ಕ್ಯಾಂಪ್‍ನ ಮೂಲಕ ತಿಳಿಯುತ್ತಾರೆ” ಎಂದರು.
ಈ ಕ್ಯಾಂಪ್ ಯಶಸ್ವಿಯಾಗಲು ಸಹಕರಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ, ಸ್ಥಳಾವಕಾಶ ಹಾಗೂ ಮುಂಜಾನೆಯ ಚಹಾ ತಿಂಡಿ ವ್ಯವಸ್ಥೆ ಮಾಡಿದ ಅರವಿಂದ ಹಾಗೂ ಶಿಲ್ಪಾ ದಂಪತಿಗಳಿಗೆ ಬಹುಮಾನ ಪ್ರಾಯೋಜಿಕತ್ವ ವಹಿಸಿದ ಆದರ್ಶ ನಾಯಕ ಹಾಗೂ ಗಣಪತಿ ಪಟಗಾರರವರಿಗೆ, ಧ್ವನಿವರ್ಧಕ ವ್ಯವಸ್ಥೆ ಮಾಡಿದ ಎನ್ ರಾಮು ಹಿರೇಗುತ್ತಿ, ಊಟದ ವ್ಯವಸ್ಥೆ ಮಾಡಿದ ಹೈಸ್ಕೂಲಿನ ಎಲ್ಲಾ ಶಿಕ್ಷಕ ವೃಂದದವರಿಗೆ, ಹಗ್ಗಜಗ್ಗಾಟದ ಸಂಪೂರ್ಣ ವ್ಯವಸ್ಥೆ ಮಾಡಿದಂತಹ ವೆಂಕಟರಮಣ ನಾಯಕ ಹಾಗೂ ಸಣ್ಣಪ್ಪ ಮಾರುತಿ ನಾಯಕ ಸಹಕರಿಸಿದ ಸರ್ವರಿಗೂ ಪ್ರಕೃತಿ ಇಕೋಕ್ಲಬ್‍ನ ಮಾರ್ಗದರ್ಶಕ ಶಿಕ್ಷಕರಾದ ಮಹಾದೇವ ಬಿ ಗೌಡ ಧನ್ಯವಾದ ಅರ್ಪಿಸಿದರು.

RELATED ARTICLES  ಬೀಡಿಎಲೆ ತುಂಬಿಕೊoಡು ಹೋಗುತ್ತಿದ್ದ ಲಾರಿಗೆ ಬೆಂಕಿ

ಕಾರ್ಯಕ್ರಮದಲ್ಲಿ ವಿಶ್ವನಾಥ ಬೇವಿನಕಟ್ಟಿ, ನಾಗರಾಜ ಜಿ ನಾಯಕ, ಬಾಲಚಂದ್ರ ವಿ ಹೆಗಡೇಕರ್, ಜಾನಕಿ ಗೊಂಡ, ಶಿಲ್ಪಾ.ನಾಯಕ, ಇಂದಿರಾ ನಾಯಕ, ಕವಿತಾ ಅಂಬಿಗ, ದೇವಾಂಗಿನಿ ನಾಯಕ, ಗೋಪಾಲಕೃಷ್ಣ ಗುನಗಾ, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
“ಈ ಲೋಕ ನಾಕವಾಗಬೇಕೇ ಹೊರತು ನರಕವಾಗಬಾರದು” ಎಂದಾದರೆ ಬನ್ನಿ ಪರಿಸರವನ್ನು ರಕ್ಷಿಸೋಣ ಎಂಬಂತೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು. ಈ ಅರ್ಥಪೂರ್ಣ ಕಾರ್ಯಕ್ರಮದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡರು.

ವರದಿ: ಎನ್ ರಾಮು ಹಿರೇಗುತ್ತಿ