ಕನ್ನಡ ಸಾಹಿತ್ಯ ಪರಿಷತ್ತಿನ ಉತ್ತರಕನ್ನಡ ಜಿಲ್ಲಾ ಆಜೀವ ಸದಸ್ಯರಲ್ಲಿ ಪತ್ರಕರ್ತ ಹಾಗೂ ಸಾಹಿತಿ ಕೃಷ್ಣಮೂರ್ತಿ ಹೆಬ್ಬಾರ್ ವಿನಮ್ರ ವಿನಂತಿ ಮಾಡಿದ್ದು ಅವರ ವಿನಂತಿ ಪತ್ರದ ಯಥಾ ಪ್ರತಿ ಇಲ್ಲಿದೆ.

ಪ್ರಿಯ ಸಾಹಿತ್ಯ ಪ್ರೇಮಿ ಸದಸ್ಯ ಬಂಧುಗಳಿಗೆ – ಸಪ್ರೇಮ ವಂದನೆಗಳು.

ಕೂಡಿ ಆಡಿ ಕೂಡಾಡಿ ಕೂಡಿ ಅರಿಯೋಣ ಕೂಡಿ ಕೂಡಿ
ಕೂಡಿ ತಿಂದು ಕೂಡುಂಡು ಕುಣ ದು ದುಡಿಯೋಣ ಕೂಡಿ ಕೂಡಿ
ಕೂಡಿ ನಡೆದು ಒಡಗೂಡಿ ಪಡೆದು ನುಡಿ ಹೇಳಿ ಕೇಳಿ ಕೂಡಿ
ಕೂಡಿ ಬೆಳೆದು ಬೆಳಗೋಣ ದೇವರೊಲು ಕೂಡಿ ಕೂಡಿ ಕೂಡಿ !
ಕನ್ನಡ ನೆಲದ ಅಮರ ಕವಿ ದ.ರಾ. ಬೇಂದ್ರೆಯವರ ಈ ಮೇಲಿನ ಅಮೃತ ನುಡಿಯಂತೆ ನಮ್ಮ ಉತ್ತರಕನ್ನಡ ಜಿಲ್ಲೆಯ ಸಾಹಿತ್ಯ ಪರಿಷತ್ತನ್ನು ಅದರಲ್ಲಿರುವ ಎಲ್ಲ ಸಾಹಿತ್ಯ ಪ್ರೇಮಿ ಸದಸ್ಯರÀ ಜೊತೆಗೂಡಿ ಪಾರದರ್ಶಕವಾಗಿ ಸಾಹಿತ್ಯಪ್ರೇಮದ ಪರಿಷತ್ತಾಗಿ ರೂಪಿಸುವ ಹಂಬಲದಿಂದ ನಾನು, ಕೃಷ್ಣಮೂರ್ತಿ ನಾರಾಯಣ ಹೆಬ್ಬಾರ ಕರ್ಕಿ ಈ ಬಾರಿ ಮಾರ್ಚ್ 29ರಂದು ಉ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಗೆಳೆಯ-ಲೇಖಕ ಮಾಸ್ತಿ ಗೌಡರ ಸೂಚನೆಯೊಂದಿಗೆ ನಾಮಪತ್ರ ಸಲ್ಲಿಸಿ 2021 ಮೇ 9ರಂದು ನಡೆಯುವ ಚುನಾವಣೆಗೆ ಸ್ಪರ್ಧಿಸಿದ್ದೇನೆ.

ನೀವು ಸಾಹಿತ್ಯ ಪ್ರೇಮಿಗಳಾದಲ್ಲಿ ನಾನು ಯೋಗ್ಯ ಅಭ್ಯರ್ಥಿ ಎಂದು ನಿಮಗನ್ನಿಸಿದಲ್ಲಿ; ನಿಮ್ಮ ಆತ್ಮಸಾಕ್ಷಿ ಮತವನ್ನು ನನಗೆ ನೀಡಬೇಕಾಗಿ ಈ ಮೂಲಕ ವಿನಂತಿಸುತ್ತೇನೆ.

ನಾನು ಸಾಹಿತ್ಯಪರಿಷತ್ತಿನ ಜಿಲ್ಲಾಧ್ಯಕ್ಷನಾದರೆ –

1. ನಿಮ್ಮ ಸಹಕಾರದಲ್ಲಿ ಪ್ರತಿ ತಾಲೂಕಿನಲ್ಲಿ ಸರ್ವ ಸಮಾಜದ ಸಾಹಿತ್ಯಾಸಕ್ತರಾದ ಕನಿಷ್ಠ ಸಾವಿರ ಜನರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿ ಮಾಡಲು ನಿಮ್ಮೊಡನೆ ಸೇರಿ ಯತ್ನಿಸುತ್ತೇನೆ.

2. ನನ್ನಿಂದ ಮೊದಲಾಗಿ, ಸಾಹಿತ್ಯಪರಿಷತ್ತಿನ ಪ್ರತಿ ಸದಸ್ಯನಿಂದ, ಸಾಹಿತ್ಯಾಸಕ್ತ ಸಾರ್ವಜನಿಕರಿಂದ ಕನಿಷ್ಠ ದಿನಕ್ಕೆ 1 ರೂ. ಯಂತೆ ಅಮೃತನಿಧಿಯಾಗಿ; ವಾರ್ಷಿಕವಾಗಿ ಪಡೆದು ರಸೀದಿ ನೀಡಿ ‘ಸಾಹಿತ್ಯ ಸಂಚಿ’ ಯೋಜನೆ ಮಾಡಿ ಸಾಹಿತ್ಯಪರಿಷತ್ತನ್ನು ಸ್ವಾವಲಂಬಿಯಾಗಿ ರೂಪಿಸಲು ಯತ್ನಿಸುತ್ತೇನೆ.

3. ಅಖಿಲಭಾರತ ಸಾಹಿತ್ಯಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಉತ್ತರಕನ್ನಡ ಜಿಲ್ಲೆಯ ಸಹಿತ ಜಿಲ್ಲಾವಾರು ಅರ್ಹ ಸಾಹಿತಿಗೆ ಸರತಿಯಲ್ಲಾದರೂ ಪ್ರಾತಿನಿಧ್ಯ ಸಿಗುವಂತೆ ರಾಜ್ಯಪರಿಷತ್ತಿನ ಆಡಳಿತ ಮಂಡಳಿ ಸದಸ್ಯನಾಗಿ ಜಿಲ್ಲೆಯ ಸಾಹಿತ್ಯ ಪರಿಷತ್ ಸದಸ್ಯರ ಜೊತೆ ಅಹಿಂಸಾತ್ಮಕವಾಗಿ ಹೋರಾಡುತ್ತೇನೆ.

4. ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಬಳಕೆಗೆ, ಉಳಿಕೆಗೆ ರಸ್ತೆಯ ಮೈಲುಗಲ್ಲು, ಅಂಗಡಿ ನಾಮಫಲಕ ಎಲ್ಲದರಲ್ಲಿ ಕನ್ನಡಕ್ಕೆ ಆದ್ಯತೆ ಸಿಗುವಂತೆ ಉಳಿದ ಕನ್ನಡಪರ ಸಂಘಟನೆಗಳ ಜೊತೆ ಸೇರಿ ಹೋರಾಡುತ್ತೇನೆ.

RELATED ARTICLES  ಬಿದ್ದಿದ್ದ ಜಾನುವಾರಿಗೆ ಕಾರು ಡಿಕ್ಕಿ : ಕಾರು ಜಖಂ

5. ಚುನಾವಣೆಗೆ ನಿಂತು ಸೋತವರನ್ನು ಹಾಗೂ ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರನ್ನು, ಇತರ ಕನ್ನಡ ಸಂಘಟನೆಗಳ ಅಧ್ಯಕ್ಷರನ್ನು ಸೇರಿಸಿ ಪರಿಷತ್ತಿಗೆ ; ಗೌರವ ಮಾರ್ಗದರ್ಶಿ ಮಂಡಳಿ ರೂಪಿಸುತ್ತೇನೆ.

6. ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ ಮತ್ತೆ ಚುನಾವಣೆಗೆ ನಿಲ್ಲದೆ; ಚುನಾವಣೆಗೆ ನಿಲ್ಲುವ, ಸೋಲುವ, ಗೆಲ್ಲುವ ಅವಕಾಶವನ್ನು ಇನ್ನೊಬ್ಬರಿಗೆ ಬಿಟ್ಟುಕೊಟ್ಟು ಜನತಂತ್ರದ ನಿಜವಾದ ನೀತಿಗೆ ತಲೆಬಾಗುತ್ತೇನೆ.

ಸಾಹಿತ್ಯಪ್ರೇಮಿಯಾಗಿ ನಾನು –

* 1993ರಲ್ಲಿ ಹೊನ್ನಾವರ ತಾಲೂಕಾ ಸಾಹಿತ್ಯಪರಿಷತ್ತಿನ ಅಧ್ಯಕ್ಷನಾಗಿದ್ದಾಗ ಗುರು ಹಾಗೂ ಪ್ರಿಯಾ ಕುಲಕಣ ್ ಎಂಬ ಎರಡು ಬಾಲ ಕಲಾವಿದರನ್ನು ಬೈಕಲ್ಲಿ ಕೂಡ್ರಿಸಿಕೊಂಡು ತಾಲೂಕಿನ ಪ್ರೌಢಶಾಲೆಗಳಿಗೆ ತೆರಳಿ 1 ರೂ. ಮೊತ್ತದ ‘ಅಮೃತ ನಿಧಿü ಕೂಪನ್’ ಮಾರಾಟ ಮಾಡಿ ಕೇಂದ್ರ ಕ.ಸಾ.ಪಕ್ಕೆ 10 ಸಾ.ರೂ. ಶಾಶ್ವತ ನಿಧಿ ನೀಡಿದ್ದೇನೆ.* 2011 ರಲ್ಲಿ ಹೊನ್ನಾವರ ತಾಲೂಕಾ ಸಾಹಿತ್ಯ ಸಮ್ಮೇಳನವನ್ನು ತಾಲೂಕಾ ಕ.ಸಾ.ಪ. ನೇತೃತ್ವದಲ್ಲಿ ಸ್ವಾಗತಸಮಿತಿಯ ಕಾರ್ಯಾಧ್ಯಕ್ಷನಾಗಿ ಒಂದು ವಾರದಲ್ಲಿ 78 ಸಾವಿರ ರೂ. ಜನರ ದೇಣ ಗೆಯಿಂದ ಸಂಗ್ರಹಿಸಿ ಸರಕಾರದ ಸಹಾಯವಿಲ್ಲದೇ ಅತ್ಯುತ್ತಮವಾಗಿ ಸಮ್ಮೇಳನವನ್ನು ನಡೆಸಿ 7 ಸಾವಿರ ರೂ.ಗೂ ಮಿಕ್ಕಿದ ಹಣವನ್ನು ಉಳಿಸಿ ; ಲೆಕ್ಕಪತ್ರದ ಸಹಿತ ಸಾರ್ವಜನಿಕವಾಗಿ ಪ್ರಕಟಿಸಿ ಪರಿಷತ್ತಿಗೆ ನೀಡಿ ಮಾದರಿಯಾಗಿದ್ದೇನೆ.
* ಜೊಯಿಡಾದಿಂದ ಭಟ್ಕಳದವರೆಗೆ ತಾಲೂಕು, ಜಿಲ್ಲಾ ಸಾಹಿತ್ಯಸಮ್ಮೇಳನಗಳಿಗೆ ಸ್ವಂತ ಖರ್ಚಿನಲ್ಲಿ ತೆರಳಿ, ವಿಶೇಷ ವರದಿ ರೂಪಿಸಿ ನಾಗರಿಕ ಪತ್ರಿಕೆಯಲ್ಲಿ ಕಾಲಕಾಲಕ್ಕೆ ಸಾಹಿತ್ಯ ಪುರವಣ ಪ್ರಕಟಿಸಿ ಸಾಹಿತ್ಯಪ್ರೇಮಿಯಾಗಿ ಸಂಭ್ರಮಿಸಿದ್ದೇನೆ.
* ಈವರೆಗೆ 28 ಅಖಿಲಭಾರತ ಸಾಹಿತ್ಯಸಮ್ಮೇಳನಗಳಿಗೆ ಸ್ವಂತ ಖರ್ಚಿನಲ್ಲಿ ತೆರಳಿ ಅನುಭವವನ್ನು ಮತ್ತು ಸಮ್ಮೇಳನಾಧ್ಯಕ್ಷರ ಭಾಷಣಗಳನ್ನು ಸಂಗ್ರಹಿಸಿಟ್ಟಿರುತ್ತೇನೆ.
* ಹೊನ್ನಾವರದ ಜಿ.ಯು. ಭಟ್ಟರಂತಹ ಸಾಹಿತ್ಯ ವಿಕ್ರಮಿ ಪತ್ರಕರ್ತರು ತಾಲೂಕಾ ಸಮ್ಮೇಳನದ ಅಧ್ಯಕ್ಷರಾದಾಗ ಪತ್ರಕರ್ತ ಸಹೋದರನಾಗಿ ‘ಜೀವನದಿ ಜೀಯು’ ಹೆಸರಿನ ವಿಶೇಷ ಅಭಿನಂದನಾ ಸಂಚಿಕೆಯನ್ನು ಸ್ವಂತ ಖರ್ಚಿನಲ್ಲಿ ಪ್ರಕಟಿಸಿ ಅವರ ಸಾಹಿತ್ಯ ಪ್ರೇಮಕ್ಕೆ ಅರ್ಪಿಸಿ; ಸಮ್ಮೇಳನದಲ್ಲಿ ಹಂಚಿ ಕರ್ನಾಟಕದಲ್ಲೇ ವಿನೂತನ ದಾಖಲೆ ಮಾಡಿರುತ್ತೇನೆ.
* ವಾಲಗಳ್ಳಿಯ ಸಾಹಿತ್ಯಪ್ರೇಮಿಗಳಾದ ನಾರಾಯಣ ಶಾನಭಾಗರು ಸಂಪಾದಿಸಿದ ಉತ್ತರಕನ್ನಡ ಜಿಲ್ಲೆಯ ಶತಮಾನದ ಸಾಹಿತ್ಯ ಮತ್ತು ಸಾಹಿತಿಗಳ ವ್ಯಕ್ತಿ, ವಿವರ, ಮಾಹಿತಿಯನ್ನೊಳಗೊಂಡ ‘ಉತ್ತರಕನ್ನಡ ಕೃತಿಕಾರರ ಕೈಪಿಡಿ’ ಹೆಸರಿನ ಐತಿಹಾಸಿಕ ಗ್ರಂಥವನ್ನು ನನ್ನ ತಾಯಿಯ ಹೆಸರಿನಲ್ಲಿರುವ ‘ಸರಸ್ವತಿ ಪ್ರಕಾಶ’ನದಿಂದ ಪ್ರಕಟಿಸಿದ್ದೇನೆ.
* ಹಳಿಯಾಳದಿಂದ ಭಟ್ಕಳದವರೆಗೆ ಧಾರವಾಡದ ವಿದ್ಯಾರ್ಥಿ ಸ್ನೇಹಿತರ ಜೊತೆ ಸೇರಿ ನಡೆಸಿದ ಕೈಗಾ ವಿರೋಧಿ ಹೋರಾಟ, ಬೀದಿ ನಾಟಕ, ಸಾಕ್ಷರತಾ ಆಂದೋಲನ, ಯುವಜನ ಮೇಳಗಳ ಸಂಯೋಜನೆ, ಪಾಲ್ಗೊಳ್ಳುವಿಕೆಯಿಂದ ಕ್ರಿಯಾಶೀಲ ಸಾಮಾಜಿಕ ಹೋರಾಟಗಾರನಾಗಿ, ಲೇಖಕನಾಗಿ, ಸಂಘಟಕನಾಗಿ ಮುನ್ನಡೆದಿದ್ದೇನೆ.
* ಉ.ಕ. ಜಿಲ್ಲಾ ಪತ್ರಿಕಾಕರ್ತರ ಸಂಘದ ಜಿಲ್ಲಾಧ್ಯಕ್ಷನಾಗಿ ಮಕ್ಕಳ ಹಕ್ಕುಗಳ ಬಗ್ಗೆ ವಿಚಾರ ಸಂಕಿರಣ, ನನ್ನ ಅಧ್ಯಕ್ಷತೆಯ ‘ಪತ್ರಿಕೆ ವೇದಿಕೆ’ಯಿಂದ ಮೊಟ್ಟ ಮೊದಲ ಮಹಿಳಾ ರಂಗತರಬೇತಿ ಶಿಬಿರ, ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕವಿ ಜಿ. ಆರ್. ಪಾಂಡೇಶ್ವರ ಶತಮಾನೋತ್ಸವವನ್ನು ಸಂಘಟಿಸಿದ್ದೇನೆ.
* ಕವಿತಾ ರಚನೆ, ನಟನೆ, ಭಾಷಣ, ನಿರ್ದೇಶನ, ನಾಟಕ ರಚನೆ, ಅಲೆದಾಟ, ಅಂಕಣ ಬರಹ ಎಲ್ಲವೂ ನನ್ನ ನೆಚ್ಚಿನ ಹವ್ಯಾಸಗಳಾಗಿವೆ.ಉತ್ತರಕನ್ನಡ ಜಿಲ್ಲಾ ‘ಸಿರಿಗನ್ನಡ ಪುಸ್ತಕ ಮನೆ’ ಮತ್ತು ನನ್ನ ಸಾವಿರಾರು ಪುಸ್ತಕಗಳನ್ನೊಳಗೊಂಡ ಓದುಮನೆಗಳೇ ನನ್ನ ಜೀವನದ ಸಂಪತ್ತಾಗಿವೆ.
* ಹಿರಿಯ ನ್ಯಾಯವಾದಿ ಎಸ್.ಕೆ.ಪೈಯವರಿಂದ ಸಂಸ್ಥಾಪನೆಗೊಂಡು 1947ರಲ್ಲಿ ಆರಂಭವಾಗಿ, 74 ವರ್ಷಗಳಿಂದ ಜಿ.ಆರ್.ಪಾಂಡೇಶ್ವರ್, ಗೌರೀಶ ಕಾಯ್ಕಿಣ , ಮ.ಗ.ಶೆಟ್ಟಿ ಮುಂತಾದವರ ಸಂಪಾದಕತ್ವÀದಲ್ಲಿ ಮುನ್ನಡೆದು ಉತ್ತರಕನ್ನಡ ಜಿಲ್ಲೆಯಲ್ಲಿ ಅಗ್ರಪಂಕ್ತಿಯ ವಾರಪತ್ರಿಕೆಯಾಗಿ ಮುನ್ನಡೆಯುತ್ತಿರುವ ‘ನಾಗರಿಕ’ ಪತ್ರಿಕೆಯನ್ನು ಕಳೆದ 35 ವರ್ಷಗಳಿಂದ ಏಕಾಂಗಿಯಾಗಿ ಸಾಹಿತ್ಯಪ್ರೇಮಿ ಮಡದಿಯೊಡನೆ ಸೇರಿ ಮುನ್ನಡೆಸುತ್ತಿದ್ದೇನೆ.
* ‘ದೇವರಿಗೆ ಹತ್ತಿರದವನಾಗಲು ಜನರಿಗೆ ಹತ್ತಿರದವನಾಗು’ ಎಂಬ ಘೋಷಣೆಯೊಂದಿಗೆ; ಇಂದೂ ಸಾಮಾಜಿಕವಾಗಿ ಕಂಡ ತಪ್ಪು-ಒಪ್ಪುಗಳನ್ನು ನಿರಂಕುಶವಾಗಿ ದಾಖಲಿಸುತ್ತ ದನಿಯಿಲ್ಲದ ಅಸಹಾಯಕರ ದನಿಯಾಗಿ ಸತ್ಯದ ತೇರನ್ನು ನಿತ್ಯ ಎಳೆಯುವ ‘ಕೂಲಿ ಸಂಪಾದಕ’ನಾಗಿ ಮುನ್ನಡೆದಿದ್ದೇನೆ.

RELATED ARTICLES  ಕಡಲ ತೀರಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಮುಂದಿನ 48 ಗಂಟೆ ತೆರಳದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

* ಬರೆಯುವ ಆಸಕ್ತಿಯುಳ್ಳ ಜೀವನಪ್ರೇಮದ ನೂರಾರು ಲೇಖಕರಿಗೆ ವಯಸ್ಸು, ಪ್ರಾಂತ, ಲಿಂಗ ಬೇಧವಿಲ್ಲದೆ ನನ್ನ ಪತ್ರಿಕೆಯಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟು ಸಾಹಿತ್ಯ ಲೋಕಕ್ಕೆ ಹೆಮ್ಮೆಯಿಂದ ಪರಿಚಯಿಸಿ, ‘ನಾಗರಿಕ’ವನ್ನು ಉತ್ತರ ಕನ್ನಡದ ಅಕ್ಷರ ಲೋಕದ ‘ಅಂಗನವಾಡಿ’ಯಾಗಿ ರೂಪಿಸಿದ್ದೇನೆ. ಯಾರನ್ನೂ ವಿನಾಕಾರಣ ದ್ವೇಷಿಸದೇ, ಪ್ರತಿ ಮನುಷ್ಯನಲ್ಲೂ ದೇವರಿದ್ದಾನೆ ಎಂದು ನಂಬಿ ವಿನಮ್ರನಾಗಿ ಬಾಳುತ್ತಿದ್ದೇನೆ.

ಇವೆಲ್ಲವೂ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಸ್ಪರ್ಧಾ ಕಣದಲ್ಲಿರುವ ನನಗೆ; ಪೂರಕ ಅರ್ಹತೆ ಎಂದು ನಾನು ಭಾವಿಸಿ, ನಿಮ್ಮ ಹಾಗೂ ನಿಮ್ಮ ಸಾಹಿತ್ಯ ಪ್ರೇಮಿ ಸ್ನೇಹಿತರ ಮತ ನನಗೆ ಮೀಸಲಿರಲಿ ಎಂದು ಈ ಮೂಲಕ ವಿನಂತಿಸುತ್ತೇನೆ.
– ಕೃಷ್ಣಮೂರ್ತಿ ಹೆಬ್ಬಾರ, ಕರ್ಕಿ
ಪ್ರಧಾನ ಸಂಪಾದಕರು, ‘ನಾಗರಿಕ’ ವಾರಪತ್ರಿಕೆ, ಹೊನ್ನಾವರ, 581334 – ಮೊ. 7019126951